Advertisement

ದೋಣಿ ಮೂಲಕ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಕ್ಕೆ ಯತ್ನ: ಭಾರತೀಯರೂ ಸೇರಿ 8 ಮಂದಿ ಮೃತ್ಯು

09:20 AM Apr 01, 2023 | Suhan S |

ಒಟ್ಟಾವಾ(ಕೆನಾಡ): ಕೆನಾಡದಿಂದ ಅಮೆರಿಕಕ್ಕೆ ಅಕ್ರಮವಾಗಿ ದೋಣಿಯ ಮೂಲಕ ಪ್ರಯಾಣಿಸುತ್ತಿದ್ದ 8 ಮಂದಿ ಸೇಂಟ್ ಲಾರೆನ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ.

Advertisement

ರೊಮೇನಿಯನ್ ಮೂಲದ ಕೆನಡಾದ ಪ್ರಜೆ, ಭಾರತ ಮೂಲದ ವಯಸ್ಕ ಮಹಿಳೆ ಸೇರಿದಂತೆ  ಎರಡು ಕುಟುಂಬದ 6 ಮಂದಿ ಸೇರಿದಂತೆ ಒಟ್ಟು 8 ಮಂದಿ ದೋಣಿಯ ಮೂಲಕ ಕೆನಾಡದಿಂದ ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿದ್ದಾರೆ. ಈ ವೇಳೆ ಘಟನೆ ಸಂಭವಿದೆ ಎಂದು ಪೊಲೀಸರು ಹೇಳಿದ್ದಾರೆ.

ಬುಧವಾರ ರಾತ್ರಿ ಈ ದುರಂತ ಸಂಭವಿಸರಬಹುದು. ಹೆಲಿಕಾಪ್ಟರ್‌ ಮೂಲಕ ಎರಡು ಶವಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ವೈಮಾನಿಕ ಶೋಧ ನಡೆಸಿದಾಗ ಮೊದಲ ಶವ ಪತ್ತೆಯಾಗಿದೆ. ಘಟನೆಯಲ್ಲಿ ಒಂದು ಮಗು 3 ವರ್ಷಕ್ಕಿಂತ ಕೆಳಗಿನದಾಗಿದ್ದು, ಮಗುವಿನ ಬಳಿ ಕೆನಡಾದ ಪಾಸ್‌ಪೋರ್ಟ್ ಇತ್ತು ಎಂದು ವರದಿ ತಿಳಿಸಿದೆ.

ಮೃತರ ಶವ ಪರೀಕ್ಷೆ ನಡೆಯಲಿದ್ದು, ಆ ಬಳಿಕ ಸಾವಿಗೆ ನಿಖರವಾದ ಕಾರಣ ಏನೆಂದು ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next