Advertisement

ಆಕ್ಸ್‌ಫ‌ರ್ಡ್‌ ನಿಘಂಟಿಗೆ “ದೇಶ್‌, ಬಿಂದಾಸ್‌’ಸೇರ್ಪಡೆ

10:21 PM Jan 31, 2023 | Team Udayavani |

ನವದೆಹಲಿ: “ದೇಶ್‌’ ಮತ್ತು “ಬಿಂದಾಸ್‌’ ಒಳಗೊಂಡಂತೆ ಭಾರತೀಯ ಇಂಗ್ಲಿಷ್‌ಗೆ ಸಂಬಂಧಿಸಿದ 800ಕ್ಕೂ ಹೆಚ್ಚು ಪದಗಳ ಉಚ್ಚಾರಣೆ ಮಾರ್ಗದರ್ಶಿ ಮತ್ತು ಆಡಿಯೋ ಈಗ ಆಕ್ಸ್‌ಫ‌ರ್ಡ್‌ ಇಂಗ್ಲಿಷ್‌ ನಿಘಂಟಿನಲ್ಲಿ ಲಭ್ಯವಿದೆ.

Advertisement

ಆಕ್ಸ್‌ಫ‌ರ್ಡ್‌ ಯುನಿವರ್ಸಿಟಿ ಪ್ರಸ್‌ ಪ್ರಕಾರ, ಭಾರತೀಯ ಇಂಗ್ಲಿಷ್‌ ಪದಗಳ ಸೇರ್ಪಡೆಯಿಂದಾಗಿ ಆಕ್ಸ್‌ಫ‌ರ್ಡ್‌ ಇಂಗ್ಲಿಷ್‌ ನಿಘಂಟಿನ ಉಚ್ಚಾರಣೆಗಳಿಗೆ ಸೇರ್ಪಡೆಯಾಗಿರುವ ಜಗತ್ತಿನ ವಿವಿಧ ಭಾಷೆಗಳ ಪದಗಳ ಸಂಖ್ಯೆ 16ಕ್ಕೆ ತಲುಪಿದೆ.

“ಬ್ರಿಟಿಷ್‌ ಇಂಗ್ಲಿಷ್‌ ಮತ್ತು ಅಮೆರಿಕನ್‌ ಇಂಗ್ಲಿಷ್‌ ಹೊರತುಪಡಿಸಿ ಇಂಗ್ಲಿಷ್‌ನ ವಿವಿಧ ಉಚ್ಚಾರಣೆಗಳಲ್ಲಿ ಆಡಿಯೋವನ್ನು ಸೇರಿಸಲು ಮತ್ತು ವಿಸ್ತರಿಸಲು ನಾವು ಕೆಲಸವನ್ನು ಪ್ರಾರಂಭಿಸಿದಾಗಿನಿಂದ, ಭಾರತೀಯ ಇಂಗ್ಲಿಷ್‌ ನಮ್ಮ ಆದ್ಯತೆಗಳಲ್ಲಿ ಒಂದಾಗಿದೆ. ಜತೆಗೆ ನಮ್ಮ ದೊಡ್ಡ ಸವಾಲುಗಳಲ್ಲಿ ಕೂಡ ಇದು ಒಂದು,’ ಎಂದು ಆಕ್ಸ್‌ಫ‌ರ್ಡ್‌ ಇಂಗ್ಲಿಷ್‌ ನಿಘಂಟಿನ ಉಚ್ಚಾರಣೆ ವಿಭಾಗದ ಸಂಪಾದಕಿ ಡಾ. ಕ್ಯಾಥರೀನ್‌ ಸಾಂಗ್‌ಸ್ಟರ್‌ ಹೇಳಿದರು.

ಹೊಸದಾಗಿ ನಿಘಂಟಿನಲ್ಲಿ ಉಚ್ಚಾರಣೆಯ ಲಿಖೀತರೂಪ ಮತ್ತು ಆಡಿಯೊದಲ್ಲಿ ಭಾರತೀಯ ಪದಗಳಾದ “ದಿಯಾ’, “ಬಚ್ಚಾ’, “ಅಲ್ಮೆರಾ’, ಸೇರಿದಂತೆ ಅನೇಕ ಭಾರತೀಯ ಇಂಗ್ಲಿಷ್‌ ಪದಗಳು ಒಳಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next