ನವ ದೆಹಲಿ : ಕೋವಿಡ್ ಲಾಕ್ಡೌನ್ ನಿಂದಾಗಿ ಇಡೀ ಪ್ರಪಂಚ ತತ್ತರಿಸಿ ಹೋಗಿದೆ. ಜಾಗತಿಕ ಆರ್ಥಿಕತೆಯ ಮೇಲೆ ಬಲವಾದ ಹೊಡೆತ ನೀಡಿದ್ದು, ಭಾರತದ ಆರ್ಥಿಕತೆಯ ಮೇಲೂ ಕೂಡ ಕೋವಿಡ್ ಲಾಕ್ಡೌನ್ ಬಹಳ ಪರಿಣಾಮ ಬೀರಿದೆ.
ಕೋವಿಡ್ ಲಾಕ್ಡೌನ್ ನಿಂದ ಆದ ಆರ್ಥಿಕವಾಗಿ ಸುಧಾರಿಸುವುದು ಕಷ್ಟಸಾಧ್ಯ ಎಂದು ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆ ಭವಿಷ್ಯ ನುಡಿದಿದೆ.
ಓದಿ : ಕೆನಾಡದ ಗ್ರೇಟರ್ ಟೊರೊಂಟೊದ ರಸ್ತೆಗಳಲ್ಲಿ ಮೋದಿ ಭಾವಚಿತ್ರವಿರುವ ಫ್ಲೆಕ್ಸ್.! ಯಾಕೆ..?
ಕೋವಿಡ್ -19 ನಿಂದ ಭಾರತದ ಆರ್ಥಿಕತೆಗೆ ಹೆಚ್ಚು ತೊಂದರೆಯಾಗಲಿದೆ ಎಂದು ಹೊಸ ಒಇಸಿಡಿ(OECD = Organisation for Economic Co-operation and Development) ವರದಿ ಮುನ್ಸೂಚನೆ ನೀಡಿದೆ. ದೇಶದ ಕಠಿಣ ಲಾಕ್ ಡೌನ್‌ನಿಂದ ಆರ್ಥಿಕತೆಗೆ ಉಂಟಾದ ನೋವನ್ನು ಗುಣಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
Related Articles
ಕೋವಿಡ್ -19 ಸಾಂಕ್ರಾಮಿಕ ಮತ್ತು ಅದನ್ನು ಎದುರಿಸಲು ತಂದ ಲಾಕ್ಡೌನ್ ನಿರ್ಬಂಧಗಳಿಂದ ಭಾರತವು ತೀವ್ರವಾಗಿ ಸಂಕಷ್ಟಕ್ಕೊಳಗಾದ ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ ಹೊಸ ವರದಿ ಭವಿಷ್ಯ ನುಡಿದಿದೆ.
ಒಇಸಿಡಿ ಎಕನಾಮಿಕ್ ಔಟ್ ಲುಕ್ ಮಧ್ಯಂತರ ವರದಿ ಮಾರ್ಚ್ 2021 ರ ಭಾಗವಾಗಿ ಪ್ರಕಟವಾದ ದತ್ತಾಂಶವು 2021 ರ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯ ನೈಜ ಜಿಡಿಪಿ ಮೌಲ್ಯವು ಸಂಸ್ಥೆಯ ಕೋವಿಡ್ ಸಾಂಕ್ರಾಮಿಕ ಪೂರ್ವ ನೀಡಿದ್ದ ಮುನ್ಸೂಚನೆಗಿಂತ 7.8% ಕಡಿಮೆಯಾಗಲಿದೆ ಎಂದು ಹೇಳಿದೆ.
2021 ರಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಅಂದಾಜಿಸಲಾಗಿದ್ದರೂ, ಭಾರತದ ತೀವ್ರ ಕುಸಿತವು ಜಿಡಿಪಿ 12.6% ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಕೋವಿಡ್ -19 ರ ಕಾರಣದಿಂದಾಗಿ ಭಾರತದಲ್ಲಿ ಆರ್ಥಿಕತೆಯ ಮೇಲಾದ ಪರಿಣಾಮ ಕೂಡ ತೀವ್ರವಾಗಿತ್ತು ಎಂದು ಒಇಸಿಡಿ ಹೇಳಿದೆ.
ಓದಿ : ಈ ಶಿವಲಿಂಗಕ್ಕೆ ವರ್ಷದ ಎರಡು ಬಾರಿ ಮಾತ್ರ ಪೂಜೆ! ಹೆಬ್ರಿ ಸೀತಾನದಿಯಲ್ಲಿದೆ ಈ ಉದ್ಭವ ಲಿಂಗ