Advertisement

US;ಭಾರತ ಮೂಲದ ವೈದ್ಯನಿಗೆ ಗುಂಡು ಹೊಡೆದು ಹತ್ಯೆ

01:16 AM Aug 27, 2024 | Team Udayavani |

ಅಲಬಾಮ: ಅಮೆರಿಕದ ಅಲಬಾಮ ಬಳಿ ಭಾರ ತೀಯ ಮೂಲದ ಖ್ಯಾತ ವೈದ್ಯರೊಬ್ಬರನ್ನು ಗುಂಡಿಟ್ಟು ಶುಕ್ರವಾರ ಹತ್ಯೆ ಮಾಡ‌ಲಾಗಿದೆ. ಡಾ| ರಮೇಶ್‌ ಪರಮಶೆಟ್ಟಿ ಹತ್ಯೆಯಾದ ವರು. ಆಂಧ್ರ ಪ್ರದೇಶದ ತಿರುಪತಿ ಮೂಲದ ಪರಮಶೆಟ್ಟಿ “ಕ್ರಿಮಿಸನ್‌ ಕೇರ್‌ ನೆಟ್‌ವರ್ಕ್‌” ಗ್ರೂಪ್‌ ಸಂಸ್ಥಾಪನೆ ಮಾಡಿ ವೈದ್ಯಕೀಯ ನಿರ್ದೇ ಶಕರಾಗಿ ಅಮೆರಿಕದ ಟಸ್ಕಾಲೋಸಾ ನಗರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಗುಂಡಿಟ್ಟು ಹತ್ಯೆ ನಡೆಸಿರುವುದು ಆತಂಕ ತಂದಿದೆ. ರಮೇಶ್‌ ಸಮಾಜಮುಖೀಯಾಗಿ ಕಾರ್ಯನಿರ್ವಹಿಸುತ್ತಿದ್ದರು ಅವರ ಸಾವು ನೋವು ತಂದಿದೆ ಎಂದು ಅಲ್ಲಿನ ವೈದ್ಯರು ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next