Advertisement

‘ಭಾವನೆ ಗೌರವಿಸುವ ಸಂಸ್ಕಾರ ಭಾರತೀಯರ ರಕ್ತದಲ್ಲಿದೆ’

10:10 AM Apr 14, 2018 | Team Udayavani |

ಮುಳ್ಳೇರಿಯ: ನಾವು ಧರ್ಮದ ವಿಷಯಗಳನ್ನು ಅಭ್ಯಸಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆರ್ಥಿಕ ಶ್ರೀಮಂತಿಕೆ ಕ್ಷಣಿಕ; ಪಾರಮಾರ್ಥಿಕ ಶ್ರೀಮಂತಿಕೆ ಶಾಶ್ವತ. ದೈವಿಕ ಶಕ್ತಿಗಳು ನಮ್ಮಲ್ಲಿರುವ ಮಾಲಿನ್ಯವನ್ನು ದೂರಮಾಡುತ್ತವೆ. ಭಾವನೆಗಳನ್ನು ಗೌರವಿಸುವ ಸಂಸ್ಕಾರ ಭಾರತೀಯನಲ್ಲಿದೆ. ಆದುದರಿಂದ ಭಾರತವು ಪ್ರಪಂಚದಲ್ಲಿ ಶ್ರೇಷ್ಠವೆನಿಸಿಕೊಳ್ಳುತ್ತಿದೆ ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು. ಅವರು ಕೋಟೆಬಯಲು ಕುಂಡಂಗುಳಿ ವಾಗ್ಮಾನ್‌ ಮನೆತನದ ಮೂಲನಾಗ, ರಕ್ತೇಶ್ವರಿ, ಗುಳಿಗ ಸಾನ್ನಿಧ್ಯಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಅಂಗವಾಗಿ ಕುಂಟಾರು ಸಮೀಪದ ಜಾಲುಮನೆಯಲ್ಲಿ ರವಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಭಾಷಣ ಮಾಡಿದರು.

Advertisement

ಸೇವಾ ಸಮಿತಿ ಅಧ್ಯಕ್ಷ ರಾಘವೇಂದ್ರ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಮತ್ತು ಇರುವಯಲ್‌ ಬ್ರಹ್ಮಶ್ರೀ ಕೃಷ್ಣದಾಸ್‌ ತಂತ್ರಿಯವರು ಆಶೀರ್ವಚನ ನೀಡಿದರು. ಬ್ರಹ್ಮಶ್ರೀ ವಾಸುದೇವ ತಂತ್ರಿ, ಬ್ರಹ್ಮಶ್ರೀ ರವೀಶ ತಂತ್ರಿ, ಇರುವಯಲ್‌ ಬ್ರಹ್ಮಶ್ರೀ ಕೃಷ್ಣದಾಸ್‌ ತಂತ್ರಿಯವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕುಂಟಾರು ಶ್ರೀ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್‌, ಕುಟುಂಬದ ಗುರುಗಳಾದ ತಾನೋಜಿ ರಾವ್‌ ತುಂಬಡ್ಕ ಉಪಸ್ಥಿತರಿದ್ದರು. ಶಿಲ್ಪಿಗಳಾದ ಮಂಜುನಾಥ ಮತ್ತು ಪುಷ್ಪರಾಜ್‌ ಅವರನ್ನು ಗೌರವಿಸಲಾಯಿತು. ಗಿರೀಶ್‌ ತುಂಬಡ್ಕ ಸ್ವಾಗತಿಸಿದರು. ಕಾವ್ಯಾ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ನಿಶಾ ಸುಧೀರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next