Advertisement

ಡಿ.24ರಿಂದ ಭಾರತೀಯ ಸಂಸ್ಕೃತಿ ಉತ್ಸವ

09:59 AM Feb 15, 2018 | Team Udayavani |

ಕಲಬುರಗಿ: ದೇಶದ ಸಂಸ್ಕೃತಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಹಾಗೂ ಪರಿಚಯಿಸುವ ನಿಟ್ಟಿನಲ್ಲಿ ಈಗಾಗಲೇ ರಾಷ್ಟ್ರಮಟ್ಟದ ವಿಕಾಸ ಸಂಗಮ ನಡೆಸುವ ಮೂಲಕ ರಾಷ್ಟ್ರದ ಗಮನ ಸೆಳೆದಿರುವ ಭಾರತೀಯ ಸಂಸ್ಕೃತಿ ಉತ್ಸವ ಡಿಸೆಂಬರ್‌ 24ರಿಂದ 31ರವರೆಗೆ ವಿಜಯಪುರ ಜಿಲ್ಲೆಯ ಕಗ್ಗೊಡ ಗೋಶಾಲಾ ಆವರಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

Advertisement

2004ರಲ್ಲಿ ಉತ್ತರ ಪ್ರದೇಶದ ವಾರಣಾಸಿ ಪ್ರಥಮ ಭಾರತ ವಿಕಾಸ ಸಂಗಮ, 2008ರಲ್ಲಿ ಉತ್ತರ ಪ್ರದೇಶದ ಚುನಾರ್‌ದಲ್ಲಿ ದ್ವಿತೀಯ, 2010ರಲ್ಲಿ ಕಲಬುರಗಿಯಲ್ಲಿ ಕಲಬುರಗಿ ಕಂಪು ಹಾಗೂ ಕಳೆದ 2015ರಲ್ಲಿ ಮಹಾರಾಷ್ಟ್ರದ ಕನ್ಹೆàರಿಯಲ್ಲಿ ನಡೆದ ನಾಲ್ಕನೇ ಸಮಾವೇಶ ಹಾಗೂ ಉತ್ಸವ ನಂತರ ಈಗ ವಿಜಯಪುರದಲ್ಲಿ ಐದನೇ ಭಾರತೀಯ ಸಂಸ್ಕೃತಿ ಉತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ಭಾರತ ವಿಕಾಸ ಸಂಗಮದ ರಾಷ್ಟ್ರೀಯ ಸಂಯೋಜಕ ಹಾಗೂ ರಾಜ್ಯಸಭಾ ಸದಸ್ಯ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.

ನಗರದ ನೂತನ ಮಹಾವಿದ್ಯಾಲಯದಲ್ಲಿ ವಿಜಯಪುರ ಸಿದ್ದೇಶ್ವರ ಸ್ವಾಮೀಜಿ ಅವರಿಂದ ನಡೆದು ಬರುತ್ತಿರುವ ಆಧ್ಯಾತ್ಮಿಕ ಚಿಂತನಾ ಕಾರ್ಯಕ್ರಮ ಉದ್ದೇಶಿಸಿ  ಮಾತನಾಡಿದ ಸೇಡಂ ಅವರು, ಸಿದ್ದೇಶ್ವರ ಸ್ವಾಮಿಗಳ ಉಪಸ್ಥಿತಿಯಲ್ಲಿ 5ನೇ ಭಾರತೀಯ ಸಂಸ್ಕೃತಿ ಉತ್ಸವ ನಡೆಯಲಿದೆ. ಕನ್ಹೆರಿಯಲ್ಲಿ ನಡೆದ ಭಾರತೀಯ ಸಾಂಸ್ಕೃತಿಕ ಉತ್ಸವದಲ್ಲಿ 16 ಲಕ್ಷ ಜನರು ಪಾಲ್ಗೊಂಡಿದ್ದರು. ಕಗ್ಗೊಡದಲ್ಲಿ ನಡೆಯುವ 8 ದಿನಗಳ ಉತ್ಸವದಲ್ಲಿ 20 ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಈಗಲೇ ಸಿದ್ಧತೆಗಳು ಆರಂಭಗೊಂಡಿವೆ ಎಂದು ವಿವರಣೆ ನೀಡಿದರು.

ದೇಶದ ಸಂತರು, ಸಾಧುಗಳು, ಪುಣ್ಯ ಪುರುಷರು, ಸಾಧಕರು, ಕೃಷಿ ಪಂಡಿತರು, ಚಿಂತಕರು, ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಮಾತೃಸಂಗಮ, ಜ್ಞಾನ ಸಂಗಮ, ಕೃಷಿ ಸಂಗಮ, ಯುವ ಸಂಗಮ, ಕಾಯಕ ಮತ್ತು ಆರೋಗ್ಯ ಸಂಗಮ, ಗ್ರಾಮ ಸಂಗಮ ಹಾಗೂ ಧರ್ಮ ಮತ್ತು ಸಂಸ್ಕೃತಿ ಸಂಗಮ ಕಾರ್ಯಕ್ರಮಗಳು ನಡೆಯಲಿವೆ. ಕಾಯಕ ಮನೋಭಾವ ಹೆಚ್ಚಳವಾಗಲಿ. ಯುವಶಕ್ತಿ ಗಟ್ಟಿಗೊಳ್ಳಲಿ ಮಾತೃ ವಾತ್ಸಲ್ಯ ಬಲಗೊಳ್ಳಲಿ, ಧಾರ್ಮಿಕತೆ ವಿಸ್ತಾರಗೊಳ್ಳಲಿ ಎಂದು ಧ್ಯೇಯದೊಂದಿಗೆ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಸೇಡಂ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಮಾತನಾಡಿ, ಮನುಷ್ಯರಾದ ನಾವು ಬೇರೆಯದರಲ್ಲಿನ ಅವಗುಣ ಹುಡುತ್ತೇವೆ. ಆದರೆ ನಮ್ಮಲ್ಲಿನ ಅವಗುಣಗಳನ್ನು ಸರಿಪಡಿಸಿಕೊಂಡು ಮುನ್ನಡೆದರೆ ಬದುಕು ಸುಂದರವಾಗುತ್ತದೆ. ನೂರು ವಿವಿಗಳ ಜ್ಞಾನಕ್ಕೆ ಸಮಾನರಾಗಿರುವ ಸಿದ್ದೇಶ್ವರ ಸ್ವಾಮೀಜಿ ಜ್ಞಾನದ ಶಿಖರವಾಗಿದ್ದಾರೆ. ವಿವಿ ಗೌರವ ಡಾಕ್ಟರೇಟ್‌ ಹಾಗೂ ಕೇಂದ್ರ ಸರ್ಕಾರದ ಪದ್ಮಶ್ರೀ ಗೌರವನ್ನು ಗೌರಯುತವಾಗಿ ತಿರಸ್ಕಾರ ಮಾಡಿರುವುದು ಜಗತ್ತಿನಲ್ಲಿಯೇ ಅಪರೂಪವಾಗಿದೆ ಎಂದು ಹೇಳಿದರು. 

Advertisement

ಗುರುಮಿಠಕಲ್‌ ಖಾಸಾ ಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಂಬನಗೌಡ ಶೀಲವಂತರ ಹಾಗೂ ಪಾಲಿಕೆ ಸದಸ್ಯ ಶಿವಾನಂದ ಪಾಟೀಲ ಅಷ್ಟಗಿ ಗಣ್ಯರನ್ನು ಸತ್ಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next