Advertisement
ಎರಡು ಬಾರಿ ವಿಶ್ವಕಪ್ ಗಳಿಸಿದ್ದು, ಒಂದು ಬಾರಿ ಟಿ-20 ವಿಶ್ವಕಪ್‌ನ್ನು ತನ್ನದಾಗಿಸಿಕೊಂಡಿದೆ. ಕ್ರಿಕೆಟ್‌ನಲ್ಲಿ ದೇಶದ ಆಟಗಾರರ ಸಾಧನೆ ಹಿರಿದು. ಕಪಿಲ್‌ದೇವ್ ನಿಂದ ವಿರಾಟ್ ಕೊಹ್ಲಿಯವರೆಗೆ ಕ್ರಿಕೆಟಿಗರು ತಮ್ಮ ಅಮೋಘ ಪ್ರದರ್ಶನದ ಮೂಲಕ ಮನೆಮಾತಾಗಿದ್ದಾರೆ.
Related Articles
Advertisement
ಮಹೇಂದ್ರ ಸಿಂಗ್ ಧೋನಿಭಾರತ ತಂಡ ಯಶಸ್ವಿ ಕ್ಯಾಪ್ಟನ್, ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿಯಗಿರುವ ಮಹೇಂದ್ರ ಸಿಂಗ್ ಧೋನಿ ಕ್ರೀಡಾಂಗಣದಲ್ಲಿ ಕೇವಲ ಹೆಲಿಕಾಫ್ಟರ್ ಶಾಟ್‌ನಿಂದ ಸಿಕ್ಸ್ ಮಾತ್ರ ಬಾರಿಸುವುದಿಲ್ಲ, ಜತೆಗೆ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಕೂಡ ಕರ್ತವ್ಯ ನಿರ್ವಹಿಸಿ ದೇಶಪ್ರೇಮ ಮೆರೆಯುತ್ತಿದ್ದಾರೆ. ಇವರು 2011ರಿಂದ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ವಿಶ್ವಕಪ್ ಮುಗಿದ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಆಪಾರ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಸಚಿನ್ ತೆಂಡುಲ್ಕರ್
ಕ್ರಿಕೆಟ್ ದೇವರು ಎಂಬ ಗೌರವಕ್ಕೆ ಪಾತ್ರರಾಗಿರುವ ಸಚಿನ್ ತೆಂಡುಲ್ಕರ್ ಜಗತಿನ ಶ್ರೇಷ್ಠ ಕ್ರಿಕಟಿಗರಲ್ಲಿ ಒಬ್ಬರು. ಇವರ ಸೌಮ್ಯಯುತ ಪ್ರದರ್ಶನ, ದಾಖಲೆಗಳಿಂದಲೇ ಇವರು ಜಗತ್ಪ್ರಸಿದ್ಧಿ. ಇವರು ಕೇವಲ ಕ್ರಿಕಟಿಗ ಮಾತ್ರವಲ್ಲದೇ ಬಹುಮುಖ ಪ್ರತಿಭೆಯೂ ಕೂಡ ಹೌದು. ವೃತ್ತಿಯೊಂದಿಗೆ ಕ್ರಿಕಟಿಗನಾಗಿದ್ದ ಸಚಿನ್ ಅವರು ಪ್ರವೃತ್ತಿಯಲ್ಲಿ ಭಾರತೀಯ ಸೇನೆಯ ವಾಯುಪಡೆ ಅಧಿಕಾರಿ. ಇವರು 2010ರಲ್ಲಿ ಭಾರತೀಯ ವಾಯುಸೇನೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ನೇಮಕ ಮಾಡಿ ಗೌರವಿಸಲಾಗಿದೆ. ಹರ್ಭಜನ್ ಸಿಂಗ್
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ತಮ್ಮ ಚಾಕಚಕ್ಯತೆ ಬೌಲಿಂಗ್‌ನಿಂದ ಪ್ರಸಿದ್ಧಿ. ದಾಂಡಿಗರ ಎದೆಯಲ್ಲಿ ನಡುಕ ಹುಟ್ಟುವಷ್ಟು ಮಾಂತ್ರಿಕ ಶೈಲಿಯ ಇವರದು ಆಫ್ ಸ್ಪಿನ್ ಬೌಲಿಂಗ್. ಇಂತಹ ಪ್ರಸಿದ್ಧಿಯ ಹರ್ಭಜನ್ ಸಿಂಗ್ ಪ್ರವೃತ್ತಿಯಲ್ಲಿ ಸರಕಾರಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹರ್ಭಜನ್ ಸಿಂಗ್ ಅವರನ್ನು ಪಂಜಾಬ್ ಸರಕಾರವು ಉಪಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಿ, ಗೌರವಿಸಿದೆ. ಹಾಗಾಗಿ ಇವರು ಬ್ಯಾಟ್ಸಮನ್‌ಗಳಗಷ್ಟೇ ಅಲ್ಲ ಸಮಾಜವಿದ್ರೋಹಿಗಳಿಗೆ ಕೂಡ ತಮ್ಮ ಖಾಕಿಯಿಂದ ನಡುಕ ಹುಟ್ಟಿಸಬಲ್ಲರು. ಕಪಿಲ್ ದೇವ್
ಕ್ರಿಕೆಟ್ ನಲ್ಲಿ ನಮ್ಮ ದೇಶಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ತಂಡದ ಯಶಸ್ವಿ ನಾಯಕ ಕಪಿಲ್ ದೇವ್ ಅವರು 2008ರಲ್ಲಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಉಮೇಶ್ ಯಾದವ್
ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದ ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೋಗಿಂದರ್ ಶರ್ಮಾ
2007ರ ಟಿ-20 ವಿಶ್ವಕಪ್ ಗೆಲುವಿಗೆ ಮುಖ್ಯ ಪಾತ್ರವಹಿಸಿದ್ದ ಬೌಲರ್ ಜೋಗಿಂದರ್ ಶರ್ಮಾ ಅವರು ಹರಿಯಾಣ ಸರಕಾರದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಲಾಕ್‌ಡೌನ್ ಸಮಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಅಪಾರ ಜನಮೆಚ್ಚುಗೆ ಗಳಿಸಿದ್ದರು. – ಶಿವ ಬನ್ನಿಗನೂರು