ನವದೆಹಲಿ: ಇದೇ ತಿಂಗಳ 6ರಂದು ತಮಿಳುನಾಡಿನ ತೆಂಗಪಟ್ಟಣಂನಿಂದ ಸಮುದ್ರದಾಳದ ಮೀನುಗಾರಿಕೆಗಾಗಿ ಸಾಗರಕ್ಕಿಳಿದು ಆನಂತರ ನಾಪತ್ತೆಯಾಗಿದ್ದ “ಮರ್ಸಿಡಿಸ್’ ಎಂಬ ಪುಟ್ಟ ಹಡಗು, ಲಕ್ಷದ್ವೀಪದಿಂದ 370 ಕಿ.ಮೀ. ದೂರದಲ್ಲಿ ಪತ್ತೆಯಾಗಿದೆ.
ಇತ್ತೀಚೆಗೆ, ಮರ್ಸಿಡಿಸ್ ಅನ್ನೇ ಹೋಲುವ ಹಡಗೊಂಡರ ಅವಶೇಷಗಳು ಬಂಗಾಳಕೊಲ್ಲಿಯಲ್ಲಿ, ಗೋವಾ ಕರಾವಳಿಯಿಂದ 110 ಕಿ.ಮೀ. ದೂರದ ಸಮುದ್ರದಲ್ಲಿ ಪತ್ತೆಯಾಗಿದ್ದವು. ಹಾಗಾಗಿ, ಮರ್ಸಿಡಿಸ್‌ನಲ್ಲಿದ್ದ ಎಲ್ಲಾ ಮೀನುಗಾರರು ಜಲಸಮಾಧಿಯಾಗಿರಬಹುದು ಎಂಬ ಅನುಮಾನಗಳು ಎದ್ದಿದ್ದವು.
ಈ ಹಿನ್ನೆಲೆಯಲ್ಲಿ, ಕರಾವಳಿ ರಕ್ಷಣಾ ಪಡೆ (ಐಸಿಜಿ) ಹಾಗೂ ಭಾರತೀಯ ನೌಕಾಪಡೆ ಸಾಗರದಲ್ಲಿ ಸತತ ಹುಡುಕಾಟ ನಡೆಸಿದ್ದವು. “ಲಕ್ಷದ್ವೀಪದಿಂದ 370 ಕಿ.ಮೀ. ದೂರದ ಸಾಗರ ಪ್ರದೇಶದಲ್ಲಿ ಮರ್ಸಿಡಿಸ್ ಪತ್ತೆಯಾಗಿದೆ.
ಇದನ್ನೂ ಓದಿ :ವಿಳಂಬ ನೀತಿ : ಬಿಬಿಎಂಪಿ ಅಧಿಕಾರಿಗಳಿಗೆ ಡಿಸಿಎಂ ಅಶ್ವತ್ಥನಾರಾಯಣ ತರಾಟೆ
ಹಡಗಿನಲ್ಲಿದ್ದ ಎಲ್ಲಾ ಮೀನುಗಾರರೂ ಸುರಕ್ಷಿತವಾಗಿದ್ದಾರೆ’ ಎಂದು ಐಸಿಜಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಗೋವಾ ಬಳಿಯ ಸಮುದ್ರದಲ್ಲಿ ಪತ್ತೆಯಾಗಿದ್ದ ಹಡಗಿನ ಅವಶೇಷಗಳು ಬೇರೊಂದು ಮೀನುಗಾರಿಕಾ ಹಡಗಿನವು ಎಂದು ಹೇಳಿದೆ.