Advertisement

ಬೆಳ್ತಂಗಡಿ: ಯುವ ಸಾಹಿತಿ ಚಂದ್ರಹಾಸ ಬಳಂಜಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗರಿ

12:41 PM Jun 18, 2022 | Team Udayavani |

ಬೆಳ್ತಂಗಡಿ: ಯುವ ಸಾಹಿತಿ, ಬಹುಮುಖ ಪ್ರತಿಭೆ ಚಂದ್ರಹಾಸ ಬಳಂಜರವರ ಸಾಧನೆಯ ಹಾದಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಇನ್ನೊಂದು ಗರಿಯನ್ನ ನೀಡಿದೆ.‌

Advertisement

ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಇವರು ಒಬ್ಬ ಯುವ ಸಾಹಿತಿ, ವಾಗ್ಮಿ, ನಿರೂಪಕ, ಹಾಡುಗಾರ, ನೃತ್ಯಪಟು, ನಟ ಮತ್ತು ರಂಗ ತರಬೇತುದಾರರಾಗಿದ್ದಾರೆ.

ಸಾಂಸ್ಕ್ರತಿಕ‌ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಇವರು  ಹಲವಾರು ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಹಲವಾರು ಲೇಖನಗಳು ಪ್ರಕಟಗೊಂಡಿದೆ.

ವಿಶೇಷವಾಗಿ ಸಾಹಿತ್ಯ ಲೋಕದಲ್ಲಿ  ಕನ್ನಡ ವರ್ಣಮಾಲೆಯನ್ನಿಟ್ಟುಕ್ಕೊಂಡು  ಪ್ರತಿಯೊಂದು ವರ್ಣಮಾಲೆ ಅಕ್ಷರಕ್ಕೂ ಒಂದೊಂದು ಕವನ ರಚಿಸಿ, ಕವನದ ಎಲ್ಲ ಸಾಲುಗಳ ಪ್ರಥಮ ಅಕ್ಷರ ಒಂದೇ ಬರುವಂತೆ ಜೋಡಿಸಿ ಬಹಳ ವಿಭಿನ್ನವಾಗಿ ಬರೆದ  ಅಂತ್ಯ-ಆರಂಭಕ್ಕೊಂದು ಮುನ್ನುಡಿ  ಪುಸ್ತಕ ಸಾಹಿತ್ಯ ಲೋಕದ ಅತ್ಯಂತ ವಿಭಿನ್ನ ಪುಸ್ತಕವೆಂದು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಗುರುತಿಸಿದೆ. ಇದೇ ಮೊದಲ ಬಾರಿಗೆ ಇಂತಹ ಪುಸ್ತಕ ಪ್ರಕಟವಾಗಿದ್ದು, ಈ ಪುಸ್ತಕವನ್ನು ಯುವವಾಹಿನಿ‌ ರಿ ಬೆಳ್ತಂಗಡಿಯು ಪ್ರಕಟಿಸಿದೆ.

ಇದನ್ನೂಓದಿ:ಪಿಯುಸಿ ಫಲಿತಾಂಶ: ದ.ಕನ್ನಡ ಪ್ರಥಮ, ಉಡುಪಿ ದ್ವಿತೀಯ; ಇಲ್ಲಿದೆ ಜಿಲ್ಲಾವಾರು ಫಲಿತಾಂಶ

Advertisement

ಇವರ ಬಹುಮುಖ ಸಾಧನೆಗೆ ಈಗಾಗಲೇ ದ.ಕ ಜಿಲ್ಲಾ ಯುವ ಸಾಧಕ ಪ್ರಶಸ್ತಿ, ಪ್ರಭಾಕರ ನೀರುಮಾರ್ಗ ಯುವ ಸಾಹಿತಿ ಪ್ರಶಸ್ತಿ , ಎ.ಪಿ‌.ಜೆ ಅಬ್ದುಲ್ ಕಲಾಂ ಪುರಸ್ಕಾರ, ಜೆಸಿಐ ಸಾಧನಾ ಶ್ರೀ ಪ್ರಶಸ್ತಿ, ಸಾಂಸ್ಕೃತಿಕ ಚೇತನ ಪುರಸ್ಕಾರ ಮತ್ತು ರಾಜ್ಯ, ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳು ಲಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next