Advertisement

Brisbane Test: ಅಡಿಲೇಡ್‌ನ‌ಲ್ಲೇ ಭಾರತ ಅಭ್ಯಾಸ

11:11 PM Dec 10, 2024 | Team Udayavani |

ಅಡಿಲೇಡ್‌: ಬೋರ್ಡರ್‌- ಗಾವಸ್ಕರ್‌ ಟ್ರೋಫಿ ಸರಣಿಯ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕಾಗಿ ಭಾರತದ ಕ್ರಿಕೆಟಿಗರು ಮಂಗಳವಾರ ಅಡಿಲೇಡ್‌ನ‌ಲ್ಲೇ ಅಭ್ಯಾಸ ಆರಂಭಿಸಿದ್ದಾರೆ. ಫಾರ್ಮ್ನಲ್ಲಿಲ್ಲದ ನಾಯಕ ರೋಹಿತ್‌ ಶರ್ಮ ಸೇರಿದಂತೆ ಆಟಗಾರರೆಲ್ಲ ನೆಟ್ಸ್‌ನಲ್ಲಿ ಬಹಳಷ್ಟು ಹೊತ್ತು ಬೆವರಿಳಿಸಿಕೊಂಡರು.

Advertisement

ಅಡಿಲೇಡ್‌ನ‌ಲ್ಲಿ ಆಡಲಾದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯವನ್ನು ಬರೀ ಎರಡೂವರೆ ದಿನದಲ್ಲೇ ಕಳೆದುಕೊಂಡ ಒತ್ತಡದಲ್ಲಿರುವ ಭಾರತ, ಬ್ರಿಸ್ಬೇನ್‌ನ ವೇಗದ ಟ್ರ್ಯಾಕ್‌ಗೆ ಹೊಂದಿಕೊಳ್ಳಬೇಕಾದ ಜರೂರತಿದೆ.

ಕ್ರಿಕೆಟಿಗರೆಲ್ಲ ತಮ್ಮ ರೆಡ್‌ಬಾಲ್‌ ಕೌಶಲಕ್ಕೆ ಆದ್ಯತೆ ನೀಡಿದರು. ರಕ್ಷಣಾತ್ಮಕ ಬ್ಯಾಟಿಂಗ್‌ ಹಾಗೂ ಅನಗತ್ಯ ಎಸೆತಗಳನ್ನು ಬಿಡುವ ಕಾರ್ಯತಂತ್ರಕ್ಕೆ ಹೆಚ್ಚಿನ ಸಮಯವನ್ನು ಮೀಸಲಿರಿಸಿದರು.

“ಇದು ಮುಂದುವರಿಯುವ ಸಮಯ. ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕಾಗಿ ಅಡಿಲೇಡ್‌ನ‌ಲ್ಲೇ ಸಿದ್ಧತೆ ಆರಂಭವಾಗುತ್ತದೆ’ ಎಂದು ಬಿಸಿಸಿಐ ಟ್ವೀಟ್‌ ಮಾಡಿದ್ದು, ಅಭ್ಯಾಸದ ವೀಡಿಯೋವನ್ನೂ ಹಂಚಿಕೊಂಡಿದೆ.

ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ಯಶಸ್ವಿ ಜೈಸ್ವಾಲ್‌, ರಿಷಭ್‌ ಪಂತ್‌, ಶುಭಮನ್‌ ಗಿಲ್‌ ಅವರೆಲ್ಲ ಬ್ಯಾಟಿಂಗ್‌ ಅಭ್ಯಾಸದಲ್ಲಿ ತೊಡಗಿದರು. ತಂಡದ ಬೌಲಿಂಗ್‌ ಯೂನಿಟ್‌ ಜತೆಗೆ ಕೆಲವು ತ್ರೋಡೌನ್‌ ಸ್ಪೆಷಲಿಸ್ಟ್‌ಗಳಿದ್ದರು. ಸ್ಪಿನ್ನರ್‌ಗಳಾದ ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ ಕೂಡ ನಮ್ಮ ಬ್ಯಾಟರ್‌ಗಳಿಗೆ ಬೌಲಿಂಗ್‌ ನಡೆಸಿದರು.

Advertisement

ಕೊಹ್ಲಿ ಬ್ಯಾಕ್‌ಫ‌ುಟ್‌ ಅಭ್ಯಾಸ
ವಿರಾಟ್‌ ಕೊಹ್ಲಿ ಬ್ಯಾಕ್‌ಫ‌ುಟ್‌ ಅಭ್ಯಾಸ ನಡೆಸಿದ್ದು ಗಮನ ಸೆಳೆಯಿತು. ಈ ಕುರಿತು ಹರ್ಭಜನ್‌ ಸಿಂಗ್‌ ವಿಶ್ಲೇಷಣೆಯೊಂದನ್ನು ಮಾಡಿದ್ದಾರೆ. “ಬ್ರಿಸ್ಬೇನ್‌ನದ್ದು ವಿಭಿನ್ನ ಟ್ರ್ಯಾಕ್‌. ಹೆಚ್ಚು ಬೌನ್ಸಿ ಆಗಿದೆ. ಇಲ್ಲಿ ಯಶಸ್ಸು ಕಂಡ ಸ್ಟೀವ್‌ ವೋ, ಪಾಂಟಿಂಗ್‌, ಲ್ಯಾಂಗರ್‌, ಹೇಡನ್‌ ಅವರೆಲ್ಲ ಉತ್ತಮ ಬ್ಯಾಕ್‌ಫ‌ುಟ್‌ ಆಟಗಾರರು. ಕೊಹ್ಲಿ ಮೂಲತಃ ಫ್ರಂಟ್‌ಫ‌ುಟ್‌ ಬ್ಯಾಟರ್‌. ಆದರೆ ಬ್ರಿಸ್ಬೇನ್‌ನಂಥ ಬೌನ್ಸಿ ಪಿಚ್‌ನಲ್ಲಿ ಬ್ಯಾಕ್‌ಫ‌ುಟ್‌ ಆಟಕ್ಕೆ ಪ್ರಾಧಾನ್ಯ ನೀಡಬೇಕಾಗುತ್ತದೆ. ಹೀಗಾಗಿ ಅವರು ಬ್ಯಾಕ್‌ಫ‌ುಟ್‌ ಅಭ್ಯಾಸ ನಡೆಸಿದರು’ ಎಂದಿದ್ದಾರೆ.

ಆಸ್ಟ್ರೇಲಿಯ ತಂಡ ಈಗಾಗಲೇ ಬ್ರಿಸ್ಬೇನ್‌ ತಲುಪಿದೆ. ಭಾರತದ ಆಟಗಾರರು ಬುಧವಾರ ಆಗಮಿಸಲಿದ್ದಾರೆ. 3ನೇ ಟೆಸ್ಟ್‌ ಶನಿವಾರ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next