Advertisement

ಭಾರತೀಯ ಸೇನೆಯಲ್ಲಿನ ವಸಾಹತು ಆಚರಣೆಗಳು ರದ್ದು

12:02 AM Feb 26, 2023 | Team Udayavani |

ಹೊಸದಿಲ್ಲಿ: ಭಾರತೀಯ ಸೇನೆಯಲ್ಲಿನ ಕೆಲವು ಅನಗತ್ಯ ವಸಾಹತುಶಾಹಿ ಆಚರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ನಿಲ್ಲಿಸಲಾಗಿದೆ. ಈ ಬಗ್ಗೆ ಪ್ರಧಾನ ಕಚೇರಿಯಿಂದಲೇ ಸಂದೇಶ ಹೋಗಿದೆ.

Advertisement

ಸೇನೆಯಲ್ಲಿ ಕುದುರೆಗಳಿಂದ ಎಳೆಯಲ್ಪಡುವ ಗಾಡಿಗಳಿದ್ದವು. ಇವನ್ನು ಹಿರಿಯ ಅಧಿಕಾರಿಗಳ ನಿವೃತ್ತಿ ವೇಳೆ ಬಳಸಲಾಗುತ್ತಿತ್ತು. ಹಾಗೆಯೇ ವಾದ್ಯಗೋಷ್ಠಿಗಳೂ ಇರುತ್ತಿದ್ದವು. ಇವುಗಳನ್ನೆಲ್ಲ ನಿಲ್ಲಿಸಲಾಗುತ್ತದೆ. ಅಂತಹ ಕುದುರೆ ಗಾಡಿಗಳು, ವಾದ್ಯಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.

ಹಿರಿಯ ಅಧಿಕಾರಿಗಳು ನಿವೃತ್ತರಾದಾಗ ಕುದುರೆಗಾಡಿಗಳನ್ನು ಇತರ ಅಧಿಕಾರಿಗಳೇ ಎಳೆಯುತ್ತಿದ್ದರು! ಈ ಆಚರಣೆ ಕೆಲವು ತುಕಡಿಗಳಲ್ಲಿ ಬಳಕೆಯಲ್ಲಿದೆ. ಇನ್ನು ಕೆಲವು ವಾದ್ಯ ತಂಡಗಳು ಕೆಲವೇ ಕೆಲವು ಭೂಸೇನಾ ತುಕಡಿಗಳಲ್ಲಿದ್ದವು. ಅವುಗಳ ಆಚರಣೆಗಳು ಬಹುತೇಕ ಕಡಿಮೆಯೇ ಇತ್ತು. ಇನ್ನದನ್ನು ಶಾಶ್ವತವಾಗಿ ನಿಲ್ಲಿಸಲಾ ಗುತ್ತದೆ. ದೇಶವಾಸಿಗಳ ಭಾವನೆಗಳನ್ನು ಗಮನಿಸಿ, ಭಾರತೀಯ ಸೇನೆ ಹಲವು ಆಚರಣೆಗಳನ್ನು ಪರಿಶೀಲನೆ ಗೊಳಪಡಿಸಿತ್ತು. ಅದರ ಪರಿಣಾಮ ಈ ಬೆಳವಣಿಗೆ ಸಂಭವಿಸಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next