ಭಾರತೀಯ ಸೇನಾ ನೇಮಕಾತಿ 2021 : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಎದುರು ನೋಡುತ್ತಿರುವವರಿಗೆ ಸುವರ್ಣಾವಕಾಶವಿದೆ. ಈ ವರ್ಷದ ಜುಲೈ ಅಧಿವೇಶನಕ್ಕಾಗಿ ಭಾರತೀಯ ಸೇನೆಯು 10 + 2 ತಾಂತ್ರಿಕ ಪ್ರವೇಶ ಯೋಜನೆ (ಟಿಇಎಸ್) 45 ನೇಮಕಾತಿ 2021 ಗೆ ಸುಮಾರು 90 ಖಾಲಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.
ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ : joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಓದಿ : ಕೃಷಿ ಸುಧಾರಣೆಯು ದೇಶಿಯ ನೀತಿಯಾಗಿದೆ : ಬ್ರಿಟಿಷ್ ಸರ್ಕಾರ
ಆಸಕ್ತ ಅಭ್ಯರ್ಥಿಗಳು ಮಾರ್ಚ್ 2, 2021 ರೊಳಗೆ 10 + 2 ಟಿಇಎಸ್ 45 ನೇಮಕಾತಿ 2021 ಗೆ ತಮ್ಮ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬೇಕು ಎಂದು ತಿಳಿಸಿದೆ. ಪಿಸಿಎಂ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ವಿಷಯಗಳೊಂದಿಗೆ ತಮ್ಮ 10 + 2 ಪರೀಕ್ಷೆಗಳನ್ನು ತೆರವುಗೊಳಿಸಿದ 12 ನೇ ತರಗತಿಯ ಉತ್ತೀರ್ಣ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಮಾತ್ರ ಭಾರತೀಯ ಸೇನೆಯಲ್ಲಿ ಟಿಇಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ನೇಮಕಾತಿ ಪ್ರಕ್ರಿಯೆಯ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳು ನಾಲ್ಕು ವರ್ಷಗಳ ಕಾಲ ಮಿಲಿಟರಿ ತರಬೇತಿಯ ಹಾಗೂ ತಾಂತ್ರಿಕ ತರಬೇತಿಯ ನಂತರ ಸೇನೆಗೆ ಸೇರಲಿದ್ದಾರೆ.
10 + 2 ಟಿಇಎಸ್ 45 ನೇಮಕಾತಿ 2021 ರ ಅರ್ಜಿ ಪ್ರಕ್ರಿಯೆಯು ಫೆಬ್ರವರಿ 1 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 2 ರ ತನಕ ಇರಲಿದೆ. ಭಾರತೀಯ ಸೇನೆಯು ಅಧಿಸೂಚಿಸಿರುವ ಟಿಇಎಸ್ ನ 90 ಹುದ್ದೆಗಳಿಗೆ, 16.5 ವರ್ಷ ಮತ್ತು 19.5 ವರ್ಷ ವಯಸ್ಸಿನೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಸೇನೆ ತಿಳಿಸಿದೆ.
ಓದಿ : ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಧರ್ಮಸ್ಥಳದಿಂದ 25 ಲಕ್ಷ ರೂ. ನಿಧಿ ಸಮರ್ಪಣೆ