Advertisement

ಅರುಣಾಚಲ ಪ್ರದೇಶ ಗಡಿ ದಾಟಿದ ಚೀನ: ಸಂಸದ

12:14 AM Sep 05, 2019 | Team Udayavani |

ಇಟಾನಗರ/ಹೊಸದಿಲ್ಲಿ: ಅರುಣಾಚಲ ಪ್ರದೇಶದ ಅಂಜಾ ಜಿಲ್ಲೆಯ ದುರ್ಗಮ ಪ್ರದೇಶಕ್ಕೆ ಚೀನ ಸೇನೆ ಅಕ್ರಮ ಪ್ರವೇಶ ನಡೆಸಿದೆ ಎಂದು ಸಂಸದ ತಾಪಿರ್‌ ಗಾವೋ ಆರೋಪಿಸಿದ್ದಾರೆ. ಆದರೆ ಈ ಅಂಶವನ್ನು ಸೇನೆ ನಿರಾಕರಿಸಿದೆ.

Advertisement

ಇಟಾನಗರದಲ್ಲಿ ಮಾತನಾಡಿದ ಗಾವೋ, ಚಂಗಲ್‌ಗಾಮ್‌ನ ಕಿಯೋಮುರ್‌ ನುಲ್ಲಾಕ್ಕೆ ಚೀನಾ ಸೇನೆ ನುಗ್ಗಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಸ್ಥಳೀಯ ಯುವಕರು ಗಮನಿಸಿದ್ದಾರೆ ಎಂದು ಹೇಳಿದ್ದಾರೆ. ರಾಜ್ಯದ ಪ್ರತಿನಿಧಿಯಾಗಿ ಕೇಂದ್ರ ಸರಕಾರದ ಗಮನಕ್ಕೆ ಈ ಅಂಶವನ್ನು ತರುವುದು ತಮ್ಮ ಕರ್ತವ್ಯ. ಅಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಹೊಸದಿಲ್ಲಿಯಲ್ಲಿ ಪ್ರತಿಕ್ರಿಯೆ ನೀಡಿದ ಸೇನೆಯ ವಕ್ತಾರರು, ಗಡಿ ಬಗ್ಗೆ ಎರಡೂ ದೇಶಗಳು ಭಿನ್ನ ರೀತಿಯಲ್ಲಿ ಹಕ್ಕು ಸಾಧಿಸುತ್ತವೆ. ಸಂಸದರು ಪ್ರಸ್ತಾಪ ಮಾಡಿರುವ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತದೆ. ಈ ಪ್ರದೇಶದಲ್ಲಿರುವ ಕಾಲುವೆ ಮತ್ತು ಸಣ್ಣ ತೊರೆಗಳನ್ನು ದಾಟಲು ತಾತ್ಕಾಲಿಕ ಸೇತುವೆ ನಿರ್ಮಿಸಲಾಗುತ್ತದೆ ಎಂದಿದ್ದಾರೆ. ಆದರೆ ಚೀನ ಸೇನೆಯ ಅತಿಕ್ರಮಣ ನಡೆದಿಲ್ಲ ಎಂದು ಹೇಳಿದ್ದಾರೆ.

ಈ ಪ್ರದೇಶವನ್ನು “ಫಿಶ್‌ ಟೇಲ್‌’ ಎಂದು ಕರೆಯಲಾಗುತ್ತದೆ. ಅಲ್ಲಿ ಬಿಗಿ ಪಹರೆ ಇದೆ ಎಂದೂ ಅವರು ಪ್ರತಿಪಾದಿಸಿದ್ದಾರೆ. ಭಾರತದ ನಾಗರಿಕರು ಮತ್ತು ಚೀನಾದ ಪ್ರಜೆಗಳು ಅಲ್ಲಿ ಯಾವತ್ತೂ ಇರುವುದಿಲ್ಲ. ಎರಡೂ ದೇಶಗಳ ಸೇನೆಗಳು ಅವರವರ ಪ್ರದೇಶದಲ್ಲಿ ಗಸ್ತಿನಲ್ಲಿ ನಿರತರಾಗಿರುತ್ತವೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next