Advertisement

ಆರ್ಯ ವಾಲ್ವೇಕರ್ ಮುಡಿಗೆ ಮಿಸ್ ಇಂಡಿಯಾ ಯುಎಸ್‍ಎ-2022 ಕಿರೀಟ

07:41 PM Aug 07, 2022 | Team Udayavani |

ವಾಷಿಂಗ್ಟನ್‌: ಅಮೆರಿಕದ ವರ್ಜೀನಿಯಾ ನಿವಾಸಿಯಾಗಿರುವ ಭಾರತೀಯ ಮೂಲದ ಯುವತಿ ಆರ್ಯ ವಾಲ್ವೇಕರ್‌ “ಮಿಸ್‌ ಇಂಡಿಯಾ ಯುಎಸ್‌ಎ 2022′ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

18 ವರ್ಷದ ಆರ್ಯ ಬ್ರಿಯರ್‌ ವುಡ್ಸ್‌ ಹೈ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ತಮ್ಮದೇ ಆದ ನೃತ್ಯ ತರಗತಿಯನ್ನೂ ನಡೆಸುತ್ತಿದ್ದಾರೆ.

ಮಾನಸಿಕ ಆರೋಗ್ಯ ಮತ್ತು ದೇಹದ ಬಗ್ಗೆ ಸಕಾರಾತ್ಮಕ ಭಾವನೆ ಬೆಳೆಸಿಕೊಳ್ಳುವ ಬಗ್ಗೆ ಅನೇಕ ಜಾಗೃತಿ ಅಭಿಯಾನಗಳಲ್ಲೂ ಪಾಲ್ಗೊಂಡಿದ್ದಾರೆ.

ಈ ಗೆಲುವಿನ ಬಗ್ಗೆ ಮಾತನಾಡಿರುವ ಅವರು, “ಸಿನಿಮಾಗಳಲ್ಲಿ ನಟಿಸಬೇಕು, ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ನನ್ನ ಅತಿ ದೊಡ್ಡ ಕನಸು.

ಮಿಸ್‌ ಇಂಡಿಯಾ ಯುಎಸ್‌ಎ 2022 ಕಿರೀಟ ಗೆದ್ದಿರುವುದು ಸಂತೋಷ ತಂದಿದೆ’ ಎಂದಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next