ವಾಷಿಂಗ್ಟನ್: ಅಮೆರಿಕ ಸಂಸತ್‌ನ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಮೂಲದ ವ್ಯಕ್ತಿಗಳು ಜಯ ಗಳಿಸುವ ಸರಣಿ ಮುಂದುವರಿದಿದೆ.
ಇಲಿನಾಯ್ಸ ಜನರಲ್ ಅಸೆಂಬ್ಲಿಗೆ ಭಾರತ ಮೂಲದ ನಬೀಲಾ ಸಯ್ಯದ್ ಆಯ್ಕೆಯಾಗಿದ್ದಾರೆ. ಅವರು ರಿಪಬ್ಲಿಕನ್ ಪಕ್ಷದ ಕ್ರಿಸ್ ಬೋಸ್ ವಿರುದ್ಧ ಗೆದ್ದಿದ್ದಾರೆ.
ನಬೀಲಾ ಅವರಿಗೆ ಶೇ.52.3 ಮತಗಳು ಪ್ರಾಪ್ತಿಯಾಗಿವೆ. ಇಲಿನಾಯ್ಸ ಜನರಲ್ ಅಸೆಂಬ್ಲಿಗೆ ಆಯ್ಕೆಯಾದ ಅತ್ಯಂತ ಕಿರಿಯ ಸದಸ್ಯೆ ಮತ್ತು ದಕ್ಷಿಣ ಏಷ್ಯಾದ ಮೂಲದ ಮೊದಲಿಗಳು ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ.
ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಿಂದ ರಾಜಕೀಯ ಶಾಸ್ತ್ರ ಮತ್ತು ಉದ್ದಿಮೆ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಅವರು ಸ್ಥಳೀಯ ಸ್ವಯಂ ಸೇವಾ ಸಂಘಟನೆಯೊಂದರ ಜತೆಗೆ ಕೆಲಸ ಮಾಡುತ್ತಿದ್ದಾರೆ.
Related Articles