ವಾಷಿಂಗ್ಟನ್ : ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ ನಲ್ಲಿರುವ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿರುವುದನ್ನು ಭಾರತೀಯ-ಅಮೆರಿಕದ ಕಾಂಗ್ರೆಸ್ ಸದಸ್ಯ ರೋ ಖನ್ನಾ ಖಂಡಿಸಿದ್ದಾರೆ.
ಇದು ನಾಚಿಕೆಗೇಡಿನ ಕೃತ್ಯ. ನಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಸಹಿಷ್ಣುತೆ ಮತ್ತು ತಾಳ್ಮೆಯಿಂದ ನಿರ್ವಹಿಸಬೇಕಾದರೆ, ಸಾರ್ವಜನಿಕ ವಿಧ್ವಂಸಕ ಕೃತ್ಯಗಳನ್ನು ಮಾಡುವ ಬದಲು ಪರಸ್ಪರ ಮಾತು ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ನಾನು ಎಲ್ಲರನ್ನೂ ಕೋರುತ್ತೇನೆ ”ಎಂದು ಖನ್ನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಓದಿ : ಗ್ಯಾಸ್ ಟ್ಯಾಂಕರ್ ಪಲ್ಟಿ: ವಾಹನ ಸಂಚಾರ ಅಸ್ತವ್ಯಸ್ತ; ವಿದ್ಯಾರ್ಥಿಗಳು, ಉದ್ಯೋಗಿಗಳ ಪರದಾಟ
ಪ್ರತಿಮೆಯು ಪಾದದ ಬಳಿ ಮುರಿದುಹೋಗಿದೆ ಮತ್ತು ಅದರ ತಲೆಯ ಮೇಲ್ಭಾಗವು ಮುರಿದುಹೋಗಿದೆ ಎಂದು ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ (ಸ್ಥಳೀಯ ಕಾಲಮಾನ) ಉದ್ಯಾನವನದ ಕೆಲಸಗಾರರು ಮಾಹಿತಿ ನೀಡಿದ್ದಾರೆ ಎಂದು ಡೇವಿಸ್ ಪೊಲೀಸ್ ಇಲಾಖೆಯ ಡೆಪ್ಯೂಟಿ ಚೀಫ್ ಪಾಲ್ ಡೊರೊ ಶೊವ್ ತಿಳಿಸಿದ್ದಾರೆ.
ಇನ್ನು,·ಕ್ಯಾಲಿಫೋರ್ನಿಯಾದ ಡೇವಿಸ್ನಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಯ ವಿಧ್ವಂಸಕ ಕೃತ್ಯವನ್ನು ವಿರೋಧಿಸಿ, ಭಾರತೀಯ ಅಮೆರಿಕನ್ನರು ಭಾನುವಾರ(ಜ.31) ಪ್ರತಿಮೆಯನ್ನು ಪುನಃ ಸ್ಥಾಪಿಸುವಂತೆ ಒತ್ತಾಯಿಸಿದರು. ಡೇವಿಸ್‌ನ ಹೊರಗಿನ ನೆರೆಯ ಪಟ್ಟಣಗಳ ಖಲಿಸ್ತಾನ್ ಪರ ಆಮೂಲಾಗ್ರ ಗುಂಪುಗಳು ಈವೆಂಟ್ ಅನ್ನು ನಿಲ್ಲಿಸುವ ಮತ್ತು ಪಾಲ್ಗೊಳ್ಳುವವರನ್ನು ಬೆದರಿಸಲು ಪ್ರಯತ್ನಿಸಿದರು ಮತ್ತು ಈ ಸಂದರ್ಭದಲ್ಲಿ ಲೇಡಿ ಸ್ಪೀಕರ್ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದರು, ”ಎಂದು ಇಂಡಿಯನ್ ಅಸೋಸಿಯೇಷನ್ ಆಫ್ ಸ್ಯಾಕ್ರಮೆಂಟೊ ಅಧ್ಯಕ್ಷ ಭಾಸ್ಕರ್ ವೆಂಪತಿ ಘಟನೆಯ ಬಗ್ಗೆ ಸುದ್ದಿ ಸಂಸ್ಥೆ ಎ ಎನ್ ಐ ಗೆ ತಿಳಿಸಿದ್ದಾರೆ.
ಓದಿ : ಫೆ. 18ರಿಂದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್
ಸದ್ಯ, ಸ್ಯಾನ್ ಫ್ರಾನ್ಸಿಸ್ಕೋದ ಭಾರತದ ಕಾನ್ಸುಲೇಟ್ ಜನರಲ್ ಈ ಪ್ರಕರಣವನ್ನು ಡೇವಿಸ್ ನಗರ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ ಎಂದು ವರದಿಯಾಗಿದೆ. 6 ಅಡಿ -3, 650-ಪೌಂಡ್ ಕಂಚಿನ ಗಾಂಧಿ ಪ್ರತಿಮೆ ಶಾಂತಿಯ ಪ್ರತೀಕವಾಗಿ ಭಾರತ ಸರ್ಕಾರದಿಂದ 2016ರಲ್ಲಿ ಕೊಡಲ್ಪಟ್ಟ ಉಡುಗೊರೆಯಾಗಿತ್ತು.
ಓದಿ : ಸಿಂಘು ಗಡಿಯಲ್ಲಿ ಪೊಲೀಸರಿಂದ ದೇಶಭಕ್ತಿ ಗೀತೆ ಪ್ರಸಾರ; ಪ್ರತಿಭಟನಾ ನಿರತ ರೈತರಿಂದ ಆಕ್ಷೇಪ