ವಾರಾಣಸಿ: ದೇಶದಿಂದ 2025ರ ಒಳಗಾಗಿ ಕ್ಷಯ ರೋಗವನ್ನು ತೊಲಗಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಾರಾಣಸಿಯಲ್ಲಿ ಶುಕ್ರವಾರ ವಿಶ್ವ ಕ್ಷಯ ದಿನಾಚರಣೆಯಲ್ಲಿ ಮಾತನಾಡಿದ ಅವರು 2025ರೊಳಗೆ ಭಾರತದಿಂದ ಕ್ಷಯವನ್ನು ತೊಲಗಿಸುವ ಗುರಿ ಹೊಂದಿದ್ದೇವೆ.
ಜಾಗತಿಕವಾಗಿ 2030ರ ಗುರಿ ಹೊಂದಿದ್ದರೂ, ಭಾರತಕ್ಕೆ ಇನ್ನೂ ಮುಂಚೆಯೇ ಅದನ್ನು ಸಾಧಿಸುವ ವಿಶ್ವಾಸವಿದೆ ಎಂದಿದ್ದಾರೆ. ಭಾರತದ ಚಿತ್ರಣವಿರುವುದು ಅದರ ವಸುದೈವ ಕುಟುಂಬಕಂ (ಜಗತ್ತೆಲ್ಲ ಒಂದೇ ಕುಟುಂಬ) ಎಂಬ ವಿಚಾರದಲ್ಲಿ. ಈ ಹಳೆಯ ಚಿಂತನೆ, ಆಧುನಿಕ ಪ್ರಪಂಚಕ್ಕೆ ಏಕೀಕೃತ ದೃಷ್ಟಿಕೋನ, ಪರಿಹಾರವನ್ನು ನೀಡುತ್ತದೆ ಎಂದರು. ಇದೇ ವೇಳೆ, ತಮ್ಮ ಸ್ವ ಕ್ಷೇತ್ರ ವಾರಾಣಸಿಯಲ್ಲಿ 1,780 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದ್ದಾರೆ.