Advertisement

Junior Asia Cup hockey: ದಾಖಲೆ 4ನೇ ಸಲ ಪ್ರಶಸ್ತಿ ಗೆದ್ದ ಭಾರತ

12:42 AM Jun 03, 2023 | Team Udayavani |

ಸಲಾಲ (ಒಮಾನ್‌): ಭಾರತದ ಕಿರಿಯರ ಹಾಕಿ ತಂಡ ಮತ್ತಮ್ಮೆ ಏಷ್ಯಾ ಮಟ್ಟದಲ್ಲಿ ಕಿಂಗ್‌ ಎನಿಸಿಕೊಂಡಿದೆ. ಇಲ್ಲಿ ನಡೆದ ಜೂನಿ ಯರ್‌ ಏಷ್ಯಾ ಕಪ್‌ ಹಾಕಿ ಪಂದ್ಯಾ ವಳಿಯಲ್ಲಿ ಬದ್ಧ ಎದುರಾಳಿ ಪಾಕಿಸ್ಥಾನ ವನ್ನು 2-1 ಗೋಲುಗಳಿಂದ ಮಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

Advertisement

13ನೇ ನಿಮಿಷದಲ್ಲಿ ಅಂಗದ್‌ ಬೀರ್‌ ಸಿಂಗ್‌, 20ನೇ ನಿಮಿಷ ದಲ್ಲಿ ಅರೈಜೀತ್‌ ಸಿಂಗ್‌ ಬಾರಿಸಿದ ಗೋಲು ಭಾರತದ ಪಾಲಿಗೆ ವರವಾಗಿ ಪರಣಮಿಸಿತು. ಹಾಗೆಯೇ ಪಾಕ್‌ ಅಕ್ರಮಣವನ್ನು ತಡೆದು ನಿಂತ ಗೋಲ್‌ಕೀಪರ್‌ ಶಶಿಕುಮಾರ್‌ ಮೋಹಿತ್‌ ಹೊನ್ನೇನಹಳ್ಳಿ ಕೂಡ ಪಂದ್ಯದ ಹೀರೋ ಎನಿಸಿದರು.

ಈ ಜಯದೊಂದಿಗೆ ಭಾರತ ಸರ್ವಾಧಿಕ 4 ಸಲ ಜೂನಿಯರ್‌ ಏಷ್ಯಾ ಕಪ್‌ ಪ್ರಶಸ್ತಿ ಜಯಿಸಿದಂತಾಯಿತು. ಇದಕ್ಕೂ ಮುನ್ನ 2004, 2008 ಮತ್ತು 2015ರಲ್ಲಿ ಚಾಂಪಿಯನ್‌ ಆಗಿತ್ತು. ಪಾಕಿಸ್ಥಾನ 3 ಸಲ ಪ್ರಶಸ್ತಿ ಜಯಿಸಿದೆ (1988, 1992 ಮತ್ತು 1996).

ಅಜೇಯ ಅಭಿಯಾನ
ಉತ್ತಮ್‌ ಸಿಂಗ್‌ ನಾಯಕತ್ವದ ಭಾರತ ಅಜೇಯವಾಗಿ ಈ ಕೂಟವನ್ನು ಮುಗಿ ಸಿತು. “ಪಾಕಿಸ್ಥಾನ ವಿರುದ್ಧದ ಲೀಗ್‌ ಪಂದ್ಯ 1-1ರಿಂದ ಡ್ರಾ ಆಗಿತ್ತು. ಅಲ್ಲಿನ ಕೊರತೆಗಳನ್ನು ಫೈನಲ್‌ನಲ್ಲಿ ನೀಗಿಸಿಕೊಳ್ಳುವುದು ನಮ್ಮ ಯೋಜನೆ ಆಗಿತ್ತು. ಇದು ಯಶಸ್ವಿಯಾಯಿತು’ ಎಂಬುದು ಉತ್ತಮ್‌ ಸಿಂಗ್‌ ಪ್ರತಿಕ್ರಿಯೆ.
ಇದೊಂದು ತಂಡ ಪ್ರಯತ್ನ ಎಂಬು ದಾಗಿ ಕೋಚ್‌ ಸಿ.ಆರ್‌. ಕುಮಾರ್‌ ಹೇಳಿದರು.

ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವನ್ನು 9-1 ಗೋಲುಗಳಿಂದ ಭರ್ಜರಿ ಯಾಗಿ ಮಣಿಸುವ ಮೂಲಕ ಭಾರತ ಪ್ರಶಸ್ತಿ ಸುತ್ತಿಗೆ ನೆಗೆದಿತ್ತು.

Advertisement

ವಿಶ್ವಕಪ್‌ಗೆ ಆಯ್ಕೆ
ಈ ಸಾಧನೆಯಿಂದಾಗಿ ಭಾರತವೀಗ ಮಲೇಷ್ಯಾದಲ್ಲಿ ನಡೆಯುವ ಎಫ್‌ಐಎಚ್‌ ಜೂನಿಯರ್‌ ವಿಶ್ವಕಪ್‌ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿದೆ. ಜತೆಗೆ ಭಾರತೀಯ ಹಾಕಿ ಫೆಡರೇಶನ್‌ ಪ್ರತೀ ಹಾಕಿ ಆಟಗಾರರಿಗೆ 2 ಲಕ್ಷ ರೂ. ಹಾಗೂ ಸಹಾಯಕ ಸಿಬಂದಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದೆ.
ಭಾರತೀಯ ಹಾಕಿ ಫೆಡರೇಶನ್‌ ಅಧ್ಯಕ್ಷ ದಿಲೀಪ್‌ ತಿರ್ಕಿ ಕಿರಿಯರ ಸಾಧನೆಯನ್ನು ಕೊಂಡಾಡಿದ್ದಾರೆ. “ಜೂನಿಯರ್‌ ಹಾಕಿಪಟುಗಳು ದೇಶ ವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಸುಲ್ತಾನ್‌ ಆಫ್‌ ಜೊಹರ್‌ ಕಪ್‌ ಬಳಿಕ ತಂಡದಲ್ಲಿ ಹೊಸ ಜೋಶ್‌ ತುಂಬಿದೆ. ವಿಶ್ವಕಪ್‌ನಲ್ಲೂ ಚಾಂಪಿಯನ್‌ ಆಗುವ ನಂಬಿಕೆ ಇದೆ’ ಎಂದಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next