Advertisement

ಟೀಂ ಇಂಡಿಯಾ ಸಂಘಟಿತ ಪ್ರದರ್ಶನ: ಮೊದಲ ಟಿ20 ಪಂದ್ಯದಲ್ಲಿ ಗೆಲುವು

09:01 AM Jul 30, 2022 | Team Udayavani |

ಟ್ರಿನಿಡಾಡ್: ಏಕದಿನ ಸರಣಿ ಗೆದ್ದ ಖುಷಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಆರಂಭಿಸಿದ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

Advertisement

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 190 ರನ್ ಗಳಿಸಿದರೆ, ವೆಸ್ಟ್ ಇಂಡೀಸ್ ತಂಡ ಎಂಟು ವಿಕೆಟ್ ನಷ್ಟಕ್ಕೆ 122 ರನ್ ಗಳಿಸಲು ಮಾತ್ರ ಶಕ್ತವಾಯಿತು. ಇದರಿಂದ ಭಾರತ ತಂಡ 68 ರನ್ ಅಂತರದ ಗೆಲುವು ಸಾಧಿಸಿತು.

ಭಾರತ ತಂಡಕ್ಕೆ ರೋಹಿತ್ ಶರ್ಮ ಮತ್ತು ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನಲ್ಲಿ ನೆರವು ನೀಡಿದರು. ನಾಯಕ ರೋಹಿತ್ ಶರ್ಮಾ 64 ರನ್ ಗಳಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ದಿನೇಶ್ ಕಾರ್ತಿಕ್ ಕೇವಲ 19 ಎಸೆತಗಳಲ್ಲಿ 41 ರನ್ ಬಾರಿಸಿದರು. ಸೂರ್ಯ ಕುಮಾರ್ ಯಾದವ್ 24 ರನ್ ಗಳಿಸಿದರು. ವಿಂಡೀಸ್ ಪರ ಅಕೈಲ್ ಹುಸೈನ್ ಕೇವಲ 14 ರನ್ ನೀಡಿ ಒಂದು ವಿಕೆಟ್ ಕಿತ್ತರು.

 ಇದನ್ನೂ ಓದಿ:ವೋಟರ್‌ ಐಡಿಗೆ ಆಧಾರ್‌ ಲಿಂಕ್‌: ಇದು ಕಡ್ಡಾಯ ಅಲ್ಲ; ಮತದಾರರಿಗೆ ಇಚ್ಛೆ ಇದ್ದರೆ ಮಾತ್ರ

ಗುರಿ ಬೆನ್ನತ್ತಿದ ವಿಂಡೀಸ್ ಗೆ ಯಾವುದೇ ಬ್ಯಾಟರ್ ಸಹಾಯ ಮಾಡಲಿಲ್ಲ. 20 ರನ್ ಗಳಿಸಿದ ಶಾಮ್ರಾಹ್ ಬ್ರೂಕ್ಸ್ ರದ್ದೇ ಹೆಚ್ಚಿನ ಗಳಿಕೆ. ಭಾರತದ ಪರ ಅರ್ಶದೀಪ್ ಸಿಂಗ್, ರವಿ ಬಿಷ್ಣೋಯಿ ಮತ್ತು ಅಶ್ವಿನ್ ತಲಾ ಎರಡು ವಿಕೆಟ್ ಕಿತ್ತರು. ತಲಾ ಒಂದು ವಿಕೆಟ್ ಭುವನೇಶ್ವರ್ ಕುಮಾರ್, ಜಡೇಜಾ ಪಾಲಾಯಿತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next