ಕೊಲಂಬೊ: ಇಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ನಡೆಯುತ್ತಿದ್ದ 3 ಪಂದ್ಯಗಳ ಟೆಸ್ಟ್ ಸರಣಿಯ 2 ನೇ ಪಂದ್ಯದಲ್ಲಿ ಭಾರತ 53 ರನ್ ಮತ್ತು ಇನ್ನಿಂಗ್ಸ್ ಅಂತರದ ಭಾರೀ ಗೆಲುವು ದಾಖಲಿಸಿದೆ. ಜಯದೊಂದಿಗೆ ಸರಣಿಯನ್ನೂ ತನ್ನದಾಗಿಸಿಕೊಂಡಿದೆ.
ಫಾಲೋ ಆನ್‌ಗೆ ಸಿಲುಕಿ ಪರದಾಡುತ್ತಿದ್ದ ಲಂಕಾ ನಾಲ್ಕನೇ ದಿನದಾಟದಲ್ಲಿ 386 ರನ್‌ಗಳಿಗೆ ಆಲೌಟಾಗುವ ಮೂಲಕ ಶರಣಾಯಿತು. ಲಂಕಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕರುಣ ರತ್ನೆ ಅವರು ಅಮೋಘ ಆಟವಾಡಿ 141 ರನ್‌ಗಳಿಸಿದರು. ಕುಸಾಲ್ ಮೆಂಡಿಸ್ ಅವರು 110 ರನ್‌ಗಳಿಸಿ ಔಟಾಗಿದ್ದರು.
ಭಾರತೀಯ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಮತ್ತು ಜಡೇಜಾ ತಮ್ಮ ಕೈಚಳಕ ತೋರಿ ತಲಾ 7 ವಿಕೆಟ್‌ಗಳನ್ನು ಪಡೆದು ಗೆಲುವಿಗೆ ಕಾರಣರಾದರು. ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದರೆ ,2 ನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದು ಗಮನ ಸೆಳೆದರು. ಮೊದಲ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದಿದ್ದ ಜಡೇಜಾ 2 ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್ 9 ವಿಕೆಟಿಗೆ ಡಿಕ್ಲೇರ್ 622
ಶ್ರೀಲಂಕಾ ಪ್ರಥಮ ಇನ್ನಿಂಗ್ಸ್ 183
ಶ್ರೀಲಂಕಾ ದ್ವಿತೀಯ ಇನ್ನಿಂಗ್ಸ್ 386