Advertisement

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18, 346 ಕೋವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಹೆಚ್ಚಳ

12:07 PM Oct 05, 2021 | Team Udayavani |

ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,346 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ 209 ದಿನಗಳ ಕನಿಷ್ಠ ಪ್ರಕರಣವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ(ಅಕ್ಟೋಬರ್ 05) ಬಿಡುಗಡೆ ಮಾಡಿದ ಅಂಕಿ-ಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಬಿಜೆಪಿ ಇಂದು ಗೋಡ್ಸೆಯ ವಕ್ತಾರರಂತೆ ವರ್ತಿಸುತ್ತಿದೆ: ದಿನೇಶ್ ಗುಂಡೂರಾವ್

ದೇಶದಲ್ಲಿನ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,38,53,048ಕ್ಕೆ ಏರಿಕೆಯಾಗಿದೆ. ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,52,902ಕ್ಕೆ ಇಳಿಕೆಯಾಗಿದೆ, ಇದು ಕಳೆದ 201 ದಿನಗಳ ಬಳಿಕದ ಕನಿಷ್ಠ ಸಂಖ್ಯೆಯಾಗಿದೆ ಎಂದು ಹೇಳಿದೆ.

ಕಳೆದ 11 ದಿನಗಳಿಂದ ದೇಶದಲ್ಲಿ 30,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣ ವರದಿಯಾಗುತ್ತಿದೆ. ಕಳೆದ 24ಗಂಟೆಗಳಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 11,556ಕ್ಕೆ ಇಳಿಕೆಯಾಗಿದೆ ಎಂದು ಅಂಕಿಅಂಶದಲ್ಲಿ ವಿವರಿಸಿದೆ.

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 263 ಮಂದಿ ಸಾವನ್ನಪ್ಪಿದ್ದು, ಈವರೆಗೆ ದೇಶಾದ್ಯಂತ ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 4,49,260ಕ್ಕೆ ಏರಿಕೆಯಾಗಿದೆ. ಕೇವಲ 24ಗಂಟೆಯಲ್ಲಿ ದೇಶಾದ್ಯಂತ 72,51,419 ಡೋಸ್ ಲಸಿಕೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next