Advertisement
ವಾಂಖೆಡೆ ಟಿ20 ಇತಿಹಾಸವಾಂಖೆಡೆಯಲ್ಲಿ ಆಡಿದ ಈ ಹಿಂದಿನ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 5 ಪಂದ್ಯಗಳು ಚೇಸಿಂಗ್ ಮಾಡಿದ ತಂಡವೇ ಜಯಭೇರಿ ಬಾರಿಸಿದೆ. ವಾಂಖೆಡೆಯ ಇತಿಹಾಸ ಗಮನಿಸಿದರೆ ವೆಸ್ಟ್‌ಇಂಡೀಸ್ ಗೆಲುವಿನ ನೆಚ್ಚಿನ ತಂಡವಾಗಿದೆ. ವಾಂಖೆಡೆಯಲ್ಲಿ ಗರಿಷ್ಠ ಗೆಲುವು ಸಾಧಿಸಿದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ಮುಂದಿದೆ. ಮಾತ್ರವಲ್ಲದೇ 2017ರಲ್ಲಿ ನಡೆದ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್‌ಗೆ 7 ವಿಕೆಟ್‌ಗಳಿಂದ ಶರಣಾಗಿದೆ.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡಕ್ಕೆ ಹಿನ್ನಡೆಯಾದುದು ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್. ತಿರುವನಂತಪುರದಲ್ಲಿ ತಂಡದ ಸೋಲಿನ ಬಳಿಕ ಮಾತನಾಡಿದ ನಾಯಕ ಕೊಹ್ಲಿ “ನಾವು ಇದೇ ರೀತಿಯ ಕಳಪೆ ಫೀಲ್ಡಿಂಗ್ ಮುಂದುವರಿಸಿದರೆ ಸ್ಕೋರ್‌ಬೋರ್ಡ್‌ನಲ್ಲಿ ಎಷ್ಟೇ ಮೊತ್ತ ಗಳಿಸಿದರೂ ಸಾಕಾಗದು. ಎರಡೂ ಪಂದ್ಯಗಳಲ್ಲಿ ನಮ್ಮ ಕ್ಷೇತ್ರರಕ್ಷಣೆ ಅತ್ಯಂತ ಕಳಪೆಯಾಗಿತ್ತು. ಕ್ಯಾಚ್‌ಗಳನ್ನು ಚೆಲ್ಲಿ ಎದುರಾಳಿಗಳಿಗೆ ಜೀವದಾನ ನೀಡುತ್ತಿದ್ದೇವೆ. ಸರಣಿ ನಿರ್ಣಾಯಕ ಪಂದ್ಯದಲ್ಲಿ ಎಲ್ಲರೂ ಎಚ್ಚೆತ್ತುಕೊಂಡು ಅಮೋಘ ಫೀಲ್ಡಿಂಗ್ ನಡೆಸಬೇಕಾದ ಅಗತ್ಯವಿದೆ’ ಎಂದು ತಂಡದ ಆಟಗಾರರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಈ ಕಾರಣಕ್ಕಾಗಿ ತಂಡದಲ್ಲಿ ಕೆಲ ಬದಲಾವಣೆ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ದೀಪಕ್ ಚಹರ್ ಅವರ ಸ್ಥಾನಕ್ಕೆ ಮೊಹಮ್ಮದ್ ಶಮಿ ಮತ್ತು ವಾಷಿಂಗ್ಟನ್ ಸುಂದರ್ ಬದಲಿಗೆ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸುವ ಯೋಜನೆಯನ್ನು ಟೀಮ್ ಇಂಡಿಯಾ ಇಟ್ಟುಕೊಂಡಿದೆ.
Related Articles
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ವಾಂಖೆಡೆ ಅಂಗಳದಲ್ಲಿ ಆಡಿದ ಅಪಾರ ಅನುಭವವಿರುವ ನಾಯಕ ಪೊಲಾರ್ಡ್, ಲೆಂಡ್ಲ್ ಸಿಮನ್ಸ್ , ಎವಿನ್ ಲೆವಿಸ್ ತಂಡದಲ್ಲಿರುವುದು ವಿಂಡೀಸ್‌ಗೆ ಆನೆ ಬಲ ಬಂದಂತಾಗಿದೆ. ಇದರೊಂದಿಗೆ ಶಿಮ್ರನ್ ಹೆಟ್‌ಮೈರ್ ಮತ್ತು ನಿಕೊಲಸ್ ಪೂರನ್ ಅವರ ಭರ್ಜರಿ ಬ್ಯಾಟಿಂಗ್ ಫಾರ್ಮ್ ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್.
Advertisement
ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ದುಬಾರಿ ಎನಿಸಿದ ವಿಂಡೀಸ್ ಬೌಲರ್‌ಗಳು ದ್ವಿತೀಯ ಪಂದ್ಯದಲ್ಲಿ ಸುಧಾರಣೆ ಕಂಡು ಬೌಲಿಂಗ್ ವಿಭಾಗವನ್ನು ಗಟ್ಟಿಗೊಳಿಸಿದ್ದಾರೆ. ವಿಂಡೀಸ್‌ನ ಪ್ರಮುಖ ಅಸ್ತ್ರವೆಂದರೆ ಸ್ಲೋ ಬೌಲಿಂಗ್. ಕಳೆದ ಪಂದ್ಯದಲ್ಲೂ ಇದೇ ರೀತಿ ಸ್ಲೋ ಬೌಲಿಂಗ್ ನಡೆಸಿ ಭಾರತದ ಬ್ಯಾಟ್ಸ್ ಮನ್‌ಗಳನ್ನು ಕಟ್ಟಿ ಹಾಕಿರುವುದು ಇದಕ್ಕೆ ಉತ್ತಮ ನಿದರ್ಶನ.
ಮೂವರಿಗೆ ತವರಿನ ಪಂದ್ಯಭಾರತದ ಮೂವರು ಆಟಗಾರರಾದ ರೋಹಿತ್ ಶರ್ಮ, ಶಿವಂ ದುಬೆ, ಶ್ರೇಯಸ್ ಅಯ್ಯರ್ ಅವರಿಗೆ ಇದು ತವರಿನ ಪಂದ್ಯವಾಗಿದೆ. ಮುಂಬಯಿ ಮೂಲದ ಈ ಮೂವರು ಆಟಗಾರರು ತವರಿನ ವಾಂಖೆಡೆ ಅಂಗಳದಲ್ಲಿ ಗರಿಷ್ಠ ಲಾಭವೆತ್ತುವ ಅವಕಾಶ ಪಡೆದಿದ್ದಾರೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದ ದುಬೆ 30 ಎಸೆತಗಳಲ್ಲಿ 54 ರನ್ ಸಿಡಿಸಿ ಮಿಂಚಿದ್ದರು ಈ ಪಂದ್ಯದಲ್ಲೂ ಅವರ ಬ್ಯಾಟಿಂಗ್ ಮೇಲೆ ತಂಡ ಹೆಚ್ಚಿನ ವಿಶ್ವಾಸವಿರಿಸಿದೆ. ಆದರೆ ರೋಹಿತ್ ಮತ್ತು ಅಯ್ಯರ್ ಎರಡೂ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಈ ಪಂದ್ಯದಲ್ಲಿ ಫಾರ್ಮ್ಗೆ ಮರಳುವ ಅನಿವಾರ್ಯತೆ ಎದುರಾಗಿದೆ. ಸಂಭಾವ್ಯ ತಂಡಗಳು
ಭಾರತ
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಕೆ.ಎಲ್. ರಾಹುಲ್, ರಿಷಭ್ ಪಂತ್, ಮನೀಷ್ ಪಾಂಡೆ/ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್/ ಕುಲದೀಪ್ ಯಾದವ್, ಯಜುವೇಂದ್ರ ಚಹಲ್, ದೀಪಕ್ ಚಹರ್/ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ವೆಸ್ಟ್ ಇಂಡೀಸ್
ಕೈರನ್ ಪೊಲಾರ್ಡ್ (ನಾಯಕ), ಬ್ರ್ಯಾಂಡನ್ ಕಿಂಗ್, ನಿಕೊಲಸ್ ಪೂರನ್, ಶೆಲ್ಡನ್ ಕಾಟ್ರೆಲ್, ಎವಿನ್ ಲೆವಿಸ್, ಶಿಮ್ರನ್ ಹೆಟ್‌ಮೈರ್, ಖಾರಿ ಪಿಯರೆ, ಲೆಂಡ್ಲ್ ಸಿಮನ್ಸ್, ಜಾಸನ್ ಹೋಲ್ಡರ್, ಹೇಡನ್ ವಾಲ್ಶ್ ಜೂನಿಯರ್, ಕೆಸ್ರಿಕ್ ವಿಲಿಯಮ್ಸ್/ ಕೀಮೊ ಪೌಲ್.