ಕಾಬೂಲ್: ಯುದ್ಧಗ್ರಸ್ತ ಅಫ್ಘಾನಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಸ್ಥಗಿತಗೊಂಡಿರುವ ಕನಿಷ್ಠ 20 ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳನ್ನು ಶೀಘ್ರವೇ ಭಾರತ ಸರ್ಕಾರ ಪುನಾರಾರಂಭಿಸಲಿದೆ. ಈ ಬಗ್ಗೆ ತಾಲಿಬಾನ್ ಆಡಳಿತ ಘೋಷಣೆ ಮಾಡಿದೆ.
ಯೋಜನೆ ಪುನರಾರಂಭದ ನಿಟ್ಟಿನಲ್ಲಿ ಭಾರತೀಯ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಭರತ್ ಕುಮಾರ್ ಅವರು ಮಂಗಳವಾರ ಅಫ್ಘಾನಿಸ್ತಾನದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಹಮ್ದುಲ್ಲಾ ನೊಮಾನಿ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಉದ್ಯಮಿಗಳು ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು ಎಂಬ ಒತ್ತಾಯವನ್ನೂ ಮಾಡಿದ್ದಾರೆ.
ಜೂನ್ನಲ್ಲಿ ಅಫಘಾನಿಸ್ತಾನದ ಕಾಬೂಲ್ನ ತನ್ನ ರಾಯಭಾರ ಕಚೇರಿಯಲ್ಲಿ ತಾಂತ್ರಿಕ ತಂಡವನ್ನು ನಿಯೋಜಿಸುವ ಮೂಲಕ ಭಾರತ ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಮರುಸ್ಥಾಪಿಸಿತು. ಅಫಘಾನಿಸ್ತಾನದಲ್ಲಿ ಈ ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಭಾರತ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿತ್ತು.