Advertisement

ಟ್ವಿಟರ್‌, ಫೇಸ್‌ಬುಕ್‌ಗೆ ಪ್ರಕಾಶನ ಸಂಸ್ಥೆ ಸ್ಥಾನಮಾನ

01:18 PM Nov 25, 2021 | Team Udayavani |

ನವದೆಹಲಿ: ಟ್ವಿಟರ್‌, ಫೇಸ್‌ಬುಕ್‌ಗಳನ್ನು ಪ್ರಕಾಶನ ಸಂಸ್ಥೆಗಳೆಂದು ಪರಿಗಣಿಸಬೇಕು. ಅವುಗಳ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಸಾಂವಿಧಾನಿಕ ಸಂಸ್ಥೆಯೊಂದನ್ನು ಸ್ಥಾಪಿಸಬೇಕು ಎಂದು ಸಂಸತ್ತಿನ ಉನ್ನತ ಮಟ್ಟದ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

Advertisement

2019ರಲ್ಲಿ ಸಂಸತ್ತಿನಲ್ಲಿ ಮಂಡನೆಯಾಗಿರುವ ವೈಯಕ್ತಿಕ ದತ್ತಾಂಶ ಸುರಕ್ಷಾ ಮಸೂದೆಯ ಅಂಶಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿರುವ ಸಂಸದೀಯ ಜಂಟಿ ಸಮಿತಿ, ಈ ಸಲಹೆಯನ್ನು ಕೇಂದ್ರದ ಮುಂದಿಟ್ಟಿದೆ. ದತ್ತಾಂಶ ಸಂರಕ್ಷಣೆ ವಿಚಾರದಲ್ಲಿ ವಿದೇಶಿ ಕಂಪನಿಗಳಾದ ಆ್ಯಪಲ್‌, ಗೂಗಲ್‌, ಅಮೆಜಾನ್‌ನಂಥ ಕಂಪನಿಗಳನ್ನೂ ನಿಯಂತ್ರಿಸಬಹುದಾದ ಅಧಿಕಾರ ಆ ಸಂಸ್ಥೆಗೆ ಇರಬೇಕು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ:ಅಧಿಕಾರ ಸಚಿವ ಸುಧಾಕರ್ ಅವರ ಪಿತ್ರಾರ್ಜಿತ ಆಸ್ತಿಯಲ್ಲ: ಸಿದ್ದರಾಮಯ್ಯ ವಾಗ್ದಾಳಿ

“ಕಾಯ್ದೆಯಡಿ ದತ್ತಾಂಶ ಸುರಕ್ಷಾ ಆಯೋಗವನ್ನು ನೇಮಿಸಲು ಉದ್ದೇಶಿಸಲಾಗಿದೆ. ಆಯೋಗ ರಚನೆಯಾದ ನಂತರ, ವೈಯಕ್ತಿಕ ಮಾಹಿತಿಯನ್ನು ಹೊರದೇಶಗಳ ಸರ್ವರ್‌ಗಳಲ್ಲಿ ಸಂರಕ್ಷಿಸುವ ವ್ಯವಸ್ಥೆಗೆ ಮೊರೆ ಹೋಗುವುದನ್ನು ಕೈಬಿಟ್ಟು, ದೇಶೀಯ ಮಟ್ಟದಲ್ಲೇ ಅಪಾರ ದತ್ತಾಂಶ ಸಂಗ್ರಹಾಗಾರವನ್ನು ರಚಿಸುವತ್ತ ಹೆಜ್ಜೆಯಿಡಬೇಕು. ಇದಕ್ಕೆ ಎಲ್ಲಾ ದೇಶೀಯ ಸಂಸ್ಥೆಗಳು, ಅಗತ್ಯಬಿದ್ದರೆ ವಿದೇಶಿ ಸಂಸ್ಥೆಗಳ ಸಹಕಾರ ಪಡೆಯಬೇಕು” ಎಂದು ಸಮಿತಿ ಅಧ್ಯಕ್ಷ ಬಿಜೆಪಿಯ ಪಿ.ಪಿ. ಚೌಧರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next