Advertisement

ಶ್ರೇಷ್ಠ ಮಾನವ ಸಂಪನ್ಮೂಲ ಬಯಸುತ್ತಿದೆ ಭಾರತ

01:21 PM Feb 26, 2017 | Team Udayavani |

ಧಾರವಾಡ: ಅಖಂಡ ಜಗತ್ತು ಭಾರತದತ್ತ ಕಣ್ತೆರೆದು ನೋಡುವಂತಹ ವಿಶಿಷ್ಟ ಸಾಧನೆಗಳನ್ನು ತನ್ನ ಮುಡಿಗೆ ಏರಿಸಿಕೊಳ್ಳುತ್ತಿರುವ ಭಾರತ ದೇಶವಿಂದು ಶ್ರೇಷ್ಠ ಮಾನವ ಸಂಪನ್ಮೂಲವನ್ನು ಬಯಸುತ್ತಿದೆ ಎಂದು ಹಿರಿಯ ನ್ಯಾಯವಾದಿ ಅರುಣ ಚರಂತಿಮಠ ಹೇಳಿದರು. 

Advertisement

ಇಲ್ಲಿಯ ಲೀಲಾವತಿ ಆರ್‌. ಚರಂತಿಮಠ ಪಬ್ಲಿಕ್‌ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪದವೀಧರ ದಿನಾಚರಣೆ ಅಂಗವಾಗಿ ಪೂರ್ವ ಪ್ರಾಥಮಿಕ ವಿಭಾಗದ ಚಿಣ್ಣರಿಗಾಗಿ ನಡೆದ 4ನೆಯ ವಿಶೇಷ ಘಟಿಕೋತ್ಸವದಲ್ಲಿ ಚಿಣ್ಣರಿಗೆ ಸಾಂಕೇತಿಕ ಪದವಿ-ಪ್ರಮಾಣಪತ್ರ ಪ್ರದಾನ ಮಾಡಿ ಅವರು ಮಾತನಾಡಿದರು. ವಿಶ್ವದ ಹಲವಾರು ಕ್ಷೇತ್ರಗಳು ಅತ್ಯಂತ  ಶರವೇಗದಲ್ಲಿ ವಿಕಾಸಗೊಳ್ಳುತ್ತಿವೆ.

ಹಾಗಾಗಿಭಾರತವು ಎಲ್ಲ ಬೆಳವಣಿಗೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದು, ತನ್ನ ಯೋಜನೆ-ಯೋಚನೆಗಳಿಗೆ ಅನುಗುಣವಾಗಿ ತನ್ನೊಂದಿಗೆ ಉತ್ಕೃಷ್ಟ ಮಾನವಸಂಪನ್ಮೂಲ ಇರಬೇಕೆಂದು ಬಯಸುತ್ತಿದೆ. ನಮ್ಮ ದೇಶದ ಮಕ್ಕಳು ಕೇವಲ ಅಕ್ಷರವಂತರಾದರೆ ಸಾಲದು, ಅವರು ಭಾರತೀಯ ಸಂಸ್ಕೃತಿಯ ಅರಿವನ್ನು ಹೊಂದಿ, ಉನ್ನತ ಮೌಲ್ಯಗಳನ್ನು ಹೊಂದಿದ ಪ್ರಜೆಗಳಾಗಬೇಕಿದೆ ಎಂದರು. 

ಪ್ರಮಾಣ ಪತ್ರಗಳ ಪ್ರದಾನ: ಹಲವಾರು ಚಿಣ್ಣರು ನೀಲಿ ಮತ್ತು ಕೆಂಪು ಬಣ್ಣದ ನಿಲುವಂಗಿಯನ್ನು ತೊಟ್ಟು, ತೆಲೆಯ ಮೇಲೆ ವಿಶೇಷ ಟೋಪಿ ಧರಿಸಿ ಘಟಿಕೋತ್ಸವದ ಸಮವಸ್ತ್ರದಲ್ಲಿ ಕಂಗೊಳಿಸಿದ್ದು, ಆಕರ್ಷಣೀಯವಾಗಿತ್ತು. ಎಲ್ಲ ಪುಟಾಣಿಗಳಿಗೆ ಪದವೀಧರ ದಿನಾಚರಣೆ ನೆನಪಿನಲ್ಲಿ ಅರುಣ ಚರಂತಿಮಠ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು.  

ಪೂರ್ವ ಪ್ರಾಥಮಿಕ ವಿಭಾಗದ ಚಿಣ್ಣರಿಂದ ಹಲವಾರು ಸಾಂಸ್ಕಂತಿಕ ಕಾರ್ಯಕ್ರಮಗಳು ಜರುಗಿದವು. 2ನೇ ತರಗತಿಯ ಅಫ್‌ಷಾನ್‌ ತಾಡಪತ್ರಿ ಹಾಗೂ ಅಲೀನಾ ಸಯೀದ್‌ ಅವರೇ ಈ ವಿಶಿಷ್ಟ ಕಾರ್ಯಕ್ರಮವನ್ನು ನಿರೂಪಿಸಿದ್ದು ಎಲ್ಲರ ಗಮನ ಸೆಳೆಯಿತು. ಶಾಲೆಯ ಪ್ರಿನ್ಸಿಪಾಲ್‌ ಅಶ್ವನಿಕುಮಾರ, ವೀಣಾ ಮಣಿ,  ಅನೂಷಾ ಚರಂತಿಮಠ, ಪಾಲಕರು, ಸಿಬ್ಬಂದಿವರ್ಗ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next