Advertisement

ಭಾರತ ಶಾಂತಿ ಬಯಸುತ್ತದೆ; ಯುದ್ಧ ಅಲ್ಲ: ರಾಜನಾಥ್‌ ಸಂದೇಶ

12:19 PM Aug 21, 2017 | Team Udayavani |

ಹೊಸದಿಲ್ಲಿ : ಭಾರತವು ಶಾಂತಿಯನ್ನು ಬಯಸುತ್ತದೆ ಎಂದು ನಾನು ನಮ್ಮ ಎಲ್ಲ ನೆರೆಹೊರೆಯ ದೇಶಗಳಿಗೆ ಸಂದೇಶ ನೀಡಬಯಸುತ್ತೇನೆ’ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವ ರಾಜನಾಥ್‌ ಸಿಂಗ್‌ ಇಂದು ಹೇಳಿದ್ದಾರೆ. 

Advertisement

“ಚೀನದೊಂದಿಗಿನ ಗಡಿ ಬಿಕ್ಕಟ್ಟಿಗೆ ಶೀಘ್ರವೇ ಪರಿಹಾರ ಲಭಿಸಲಿದೆ; ಚೀನ ಈ ದಿಶೆಯಲ್ಲಿ  ಇತ್ಯಾತ್ಮಕ ಹೆಜ್ಜೆಯನ್ನು ಇರಿಸುವುದೆಂಬ ವಿಶ್ವಾಸ ನನಗಿದೆ’ ಎಂದು ರಾಜನಾಥ್‌ ಸಿಂಗ್‌ ಹೇಳಿದರು. 

ಭಾರತದೊಂದಿಗಿನ ಗಡಿಯಲ್ಲಿ ಚೀನ ಜೂನ್‌ 16ರ ಪೂರ್ವ ಸ್ಥಿತಿಯನ್ನು ಕಾಯ್ದುಕೊಂಡು ಶಾಂತಿ ಮಾತುಕತೆ ಹಾಗೂ ಗಡಿ ಬಿಕ್ಕಟ್ಟು ಪರಿಹಾರಕ್ಕೆ ಮುಂದಾಗಬೇಕು ಎಂದವರು ಹೇಳಿದರು. 

ಈ ನಡುವೆ ಅಂತಾರಾಷ್ಟ್ರೀಯ ಬಾಂಧವ್ಯಗಳ ವಿಶ್ಲೇಷಕರು, ಚೀನಕ್ಕೆ ಯುದ್ಧದಿಂದ ಯಾವುದೇ ಲಾಭವಾಗುವುದಿಲ್ಲ; ಗಡಿಯಲ್ಲಿ ಅದಕ್ಕೆ ಯಾವುದೇ ಹೊಸ ನೆಲ ದಕ್ಕುವುದಿಲ್ಲ. ಯುದ್ಧಾನಂತರ ಕೂಡ ಯುದ್ಧಕ್ಕೆ ಮೊದಲಿನ ಸ್ಥಿತಿಯೇ ಮುಂದುವರಿಯುವುದು ಅನಿವಾರ್ಯವಾದೀತು ಎಂದು ಚೀನಕ್ಕೆ ಬುದ್ಧಿಮಾತು ಹೇಳಿದ್ದಾರೆ. 

ಭಾರತ – ಚೀನ ಯುದ್ಧವಾದರೆ ಅಸಮಾನರ ನಡುವಿನ ಸಮರ ಅದಾದೀತು ಎಂಬ ಚೀನೀ ಲೆಕ್ಕಾಚಾರ ಸುಳ್ಳಾದೀತು; ಒಟ್ಟಾರೆಯಾಗಿ ಯುದ್ಧದಿಂದ ಎರಡೂ ದೇಶಗಳು ಅಪಾರ ನಾಶ-ನಷ್ಟ, ಜೀವ ಹಾನಿಯನ್ನು ಎದುರಿಸಬೇಕಾಗುವುದು ಎಂದು ವಿಶ್ಲೇಷಕರು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next