Advertisement

ಅಮೆರಿಕದ ರೋಮಿಯೋ ಖರೀದಿಸಲು ನಿರ್ಧಾರ

06:00 AM Nov 18, 2018 | Team Udayavani |

ವಾಷಿಂಗ್ಟನ್‌: ಅಮೆರಿಕದಿಂದ ಸಬ್‌ಮರೀನ್‌ ಪತ್ತೆ ಮಾಡುವ ಹೆಲಿಕಾಪ್ಟರ್‌ ರೋಮಿಯೋ ಖರೀದಿಸಲು ಭಾರತ ಪ್ರಸ್ತಾವನೆ ಮಂಡಿಸಿದೆ. ಇದು 200 ಕೋಟಿ ಡಾಲರ್‌ (14 ಸಾವಿರ ಕೋಟಿ ರೂ.) ಮೌಲ್ಯದ ಒಪ್ಪಂದವಾಗಿರಲಿದ್ದು, 24 ಹೆಲಿಕಾಪ್ಟರ್‌ಗಳನ್ನು ಖರಿದಿಸಲಾಗುತ್ತದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಒಪ್ಪಂದ ಅಂತಿಮಗೊಳ್ಳಲಿದೆ. ಅಮೆರಿಕ ಹಾಗೂ ಭಾರ ತದ ಮಧ್ಯೆ ಕಳೆದ ಕೆಲವು ತಿಂಗಳಿಂದ ರಕ್ಷಣಾ ಒಪ್ಪಂದಗಳಲ್ಲಿ ಹೆಚ್ಚಳವಾಗಿದ್ದು, ತನ್ನ ಅತ್ಯಾಧು ನಿಕ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಒದಗಿಸಲು ಅಮೆರಿಕ ಮುಂದಾಗಿದೆ. ಕೆಲವೇ ದಿನಗಳ ಹಿಂದೆ ಸಿಂಗಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಮಾತು ಕತೆ ಬೆನ್ನಲ್ಲೇ ಈ ಒಪ್ಪಂದಕ್ಕೆ ಸಂಬಂಧಿಸಿ ವಿನಂತಿ ಪತ್ರ ಕಳುಹಿಸಲಾಗಿದೆ. ತುರ್ತಾಗಿ 24 ಹೆಲಿಕಾಪ್ಟರುಗಳನ್ನು ಖರೀದಿಸಿ, ಮುಂದಿನ ದಿನಗಳಲ್ಲಿ 123 ಹೆಲಿಕಾಪ್ಟರುಗಳನ್ನು ಭಾರತದಲ್ಲೇ ತಯಾರಿಸುವ ಯೋಜನೆ ಇದಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next