Advertisement

ಕಟಕ್‌: “ಫೈನಲ್‌ ಲಕ್‌’ನಿರೀಕ್ಷೆಯಲ್ಲಿ ಭಾರತ

10:29 AM Dec 22, 2019 | Team Udayavani |

ಕಟಕ್‌: ವೆಸ್ಟ್‌ ಇಂಡೀಸ್‌ ಎದುರಿನ 3ನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯವನ್ನಾಡಲು ಕಟಕ್‌ಗೆ ಆಗಮಿಸಿರುವ ಭಾರತ ತಂಡ ಶುಕ್ರವಾರ ಸಂಪೂರ್ಣ ವಿಶ್ರಾಂತಿ ಪಡೆಯಿತು.

Advertisement

ಶನಿವಾರ ಅಭ್ಯಾಸ ನಡೆಸಲಿದ್ದು, ರವಿವಾರ “ಬಾರಾಬತಿ ಸ್ಟೇಡಿಯಂ’ನಲ್ಲಿ ಅಂತಿಮ ಹೋರಾಟಕ್ಕೆ ಇಳಿಯಲಿದೆ.ಅಭ್ಯಾಸ ನಡೆಸದ ಕಾರಣ ಟೀಮ್‌ ಇಂಡಿಯಾದ ಸದಸ್ಯರೆಲ್ಲ ಒಟ್ಟಿಗೆ ಬೆರೆತು “ಕ್ರಿಕೆಟ್‌ ಲೋಕ’ದಿಂದ ಹೊರಗುಳಿದು ತಮ್ಮದೇ ಪ್ರಪಂಚದಲ್ಲಿ ಕಾಲ ಕಳೆದರು. ನಾಯಕ ಕೊಹ್ಲಿ ಸಹಿತ ಆಟಗಾರರೆಲ್ಲ “ರಿಲ್ಯಾಕ್ಸ್‌ ಮೂಡ್‌’ನಲ್ಲಿದ್ದರು. ಇದರ ಚಿತ್ರವೊಂದು° ಸ್ವತಃ ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.ಗುರುವಾರ ಸಂಜೆ ಎರಡೂ ತಂಡಗಳು ಭುವನೇಶ್ವರಕ್ಕೆ ಆಗಮಿಸಿದಾಗ ಸಾಂಪ್ರದಾಯಕ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಕಟಕ್‌ ಅದೃಷ್ಟದ ತಾಣ
ಭಾರತದ ಪಾಲಿಗೆ ಕಟಕ್‌ ಕ್ರೀಡಾಂಗಣ ಅದೃಷ್ಟದ ತಾಣ. ಇಲ್ಲಿ 18 ಏಕದಿನ ಪಂದ್ಯಗಳನ್ನಾಡಿದ್ದು, 12ರಲ್ಲಿ ಜಯ ಸಾಧಿಸಿದೆ. ನಾಲ್ಕರಲ್ಲಿ ಸೋತಿದೆ. ಉಳಿದೆರಡು ಪಂದ್ಯಗಳು ರದ್ದುಗೊಂಡಿವೆ. ವೆಸ್ಟ್‌ ಇಂಡೀಸನ್ನು ಮೂರೂ ಪಂದ್ಯಗಳಲ್ಲಿ ಮಣಿಸಿದೆ.

2007ರಿಂದ ಈ ಅಂಗಳದಲ್ಲಿ ಭಾರತದ್ದು ಅಜೇಯ ದಾಖಲೆ ಎಂಬುದನ್ನು ಮರೆಯುವಂತಿಲ್ಲ. ಈ ಅವಧಿಯಲ್ಲಿ ಆಡಲಾದ 7 ಪಂದ್ಯಗಳಲ್ಲಿ ಆರನ್ನು ಗೆದ್ದಿದೆ. ಒಂದು ಪಂದ್ಯ ರದ್ದುಗೊಂಡಿದೆ.

ವಿಂಡೀಸ್‌ ವಿರುದ್ಧ ಅಜೇಯ
ಇಲ್ಲಿ ಭಾರತ-ವೆಸ್ಟ್‌ ಇಂಡೀಸ್‌ ಮೊದಲ ಸಲ ಮುಖಾಮುಖೀಯಾದದ್ದು 1994ರಲ್ಲಿ. ನಾಯಕರಾಗಿದ್ದವರು ಮೊಹಮ್ಮದ್‌ ಅಜರುದ್ದೀನ್‌ ಮತ್ತು ಕೋರ್ಟ್ನಿ ವಾಲ್ಶ್. ಆರಂಭಕಾರ ಅಜಯ್‌ ಜಡೇಜ ಅವರ ಶತಕ ಸಾಹಸದಿಂದ (104) ಭಾರತ 8 ವಿಕೆಟ್‌ಗಳ ಜಯಭೇರಿ ಮೊಳಗಿಸಿತ್ತು.2007ರ ಮುಖಾಮುಖೀಯಲ್ಲಿ ಭಾರತ ದ ಗೆಲುವಿನ ಅಂತರ 20 ರನ್‌. ಸಣ್ಣ ಮೊತ್ತದ ಈ ಮೇಲಾಟದಲ್ಲಿ ಭಾರತ 189, ವಿಂಡೀಸ್‌ 169 ರನ್‌ ಗಳಿಸಿತ್ತು. ಧೋನಿ ಮತ್ತು ಗೇಲ್‌ ನಾಯಕರಾಗಿದ್ದರು.

Advertisement

2011ರ ಕೊನೆಯ ಪಂದ್ಯವನ್ನು ಸೆಹವಾಗ್‌ ಪಡೆ ಸಮ್ಮಿ ಬಳಗದ ವಿರುದ್ಧ ಒಂದು ವಿಕೆಟ್‌ ಅಂತರದ ರೋಚಕ ಗೆಲುವು ಸಾಧಿಸಿತ್ತು.ಸ್ಕೋರ್‌: ವಿಂಡೀಸ್‌-9ಕ್ಕೆ 211. ಭಾರತ-9ಕ್ಕೆ 213.

Advertisement

Udayavani is now on Telegram. Click here to join our channel and stay updated with the latest news.

Next