ರಾಂಚಿ : ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭಾರಿ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಫ್ರಿಕಾವನ್ನು ಕೇವಲ 162 ರನ್ ಗಳಿಗೆ ಕಟ್ಟಿ ಹಾಕಿದ ಟೀಮ್ ಇಂಡಿಯಾ 335 ರನ್ ಮುನ್ನಡೆ ಗಳಿಸಿದೆ. ಭಾರತ ಆಫ್ರಿಕಾ ಮೇಲೆ ಮತ್ತೆ ಫಾಲೋ ಆನ್ ಹೇರಿದೆ.
ದ್ವಿತಿಯ ದಿನದಾದ್ಯಂತಕ್ಕೆ 9 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಹರಿಣಗಳು ಬ್ಯಾಟಿಂಗ್ ಸಂಕಷ್ಟ ಇಂದೂ ಮುಂದುವರಿಯಿತು. ನಾಯಕ ಡುಪ್ಲೆಸಿಸ್ ಇಂದು ಬೇಗನೆ ವಿಕೆಟ್ ಒಪ್ಪಿಸಿದರು. ನಾಲ್ಕನೇ ವಿಕೆಟ್ ಗೆ ಜೊತೆಯಾದ ಜುಬಾಯರ್ ಹಂಜಾ ಮತ್ತು ತೆಂಬ ಬವುಮಾ 91 ರನ್ ಗಳ ಜೊತೆಯಾಟ ನಡೆಸಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು.
ಹಂಜಾ 62 ರನ್ ಮಾಡಿದ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಬವುಮಾ 32 ರನ್ ಗಳಿಸಿದರೆ ಕೊನೆಯಲ್ಲಿ ಬಾಲಂಗೋಚಿಗಳ ಜೊತೆ ಆಡಿದ ಜಾರ್ಜ್ ಲಿಂಡೆ 37 ರನ್ ಗಳಸಿದರು.
ಭಾರತದ ಪರ ಉಮೇಶ್ ಯಾದವ್ ಮೂರು ವಿಕೆಟ್ ಪಡೆದರೆ, ಶಮಿ, ಜಡೇಜಾ, ನದೀಂ ಎರಡು ವಿಕೆಟ್ ಪಡೆದರು.
ದಕ್ಷಿಣ ಆಫ್ರಿಕಾ ತಂಡ ಈ ಸರಣಿಯಲ್ಲಿ ಎರಡನೇ ಬಾರಿ ಫಾಲೋ ಆನ್ ಪಡೆದು ಅವಮಾನ ಅನುಭವಿಸಿದೆ.