Advertisement

ಭಾರತ ಪಾಕ್‌ ಸಮರಾಭ್ಯಾಸ! ಶಾಂಘೈ ಸಹಕಾರ ಸಂಸ್ಥೆ ಆಯೋಜಿಸಿರುವ ಸಮರಾಭ್ಯಾಸ

12:45 AM Aug 14, 2022 | Team Udayavani |

ಹೊಸದಿಲ್ಲಿ: ಅತ್ಯಂತ ಅಚ್ಚರಿಯ ಬೆಳವಣಿಗೆಯಲ್ಲಿ ಭಾರತ ಮತ್ತು ಪಾಕಿಸ್ಥಾನ ಭಯೋತ್ಪಾದನ ನಿಗ್ರಹ ಸಮರಾಭ್ಯಾಸದಲ್ಲಿ ಜಂಟಿಯಾಗಿ ಪಾಲ್ಗೊಳ್ಳಲಿವೆ!

Advertisement

ಹೌದು, ವಿಚಿತ್ರ ಎನ್ನಿಸಿದರೂ ಸತ್ಯ. ಈ ಬಗ್ಗೆ ಸ್ವತಃ ಪಾಕಿಸ್ಥಾನದ ವಿದೇಶಾಂಗ ವಕ್ತಾರ ಆಸಿಮ್‌ ಇಫ್ತಿಖಾರ್‌ ಅವರೇ ಖಚಿತಪಡಿಸಿದ್ದಾರೆ ಎಂದು ಪಾಕ್‌ ಮಾಧ್ಯಮ ಗಳು ವರದಿ ಮಾಡಿವೆ. ಇದೇ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ವತಿಯಿಂದ ಸಮರಾಭ್ಯಾಸ ನಡೆಯಲಿದ್ದು, ಅದರಲ್ಲಿ ಪಾಕಿಸ್ಥಾನ ಭಾಗವಹಿಸಲಿದೆ. ವಿಶೇಷವೆಂದರೆ, ಸ್ವಾತಂತ್ರಾéನಂತರದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮೊದಲ ಜಂಟಿ ಸಮರಾ ಭ್ಯಾಸ ಇದು.

ಅಂದರೆ, ಭಾರತ ಮತ್ತು ಪಾಕಿಸ್ಥಾನವು ಹಲವೆಡೆ ಒಟ್ಟಾಗಿ ಸಮರಾಭ್ಯಾಸ ನಡೆಸಿದ್ದರೂ ಮೊದಲ ಬಾರಿಗೆ ಭಾರತದಲ್ಲಿ ನಡೆಸಲಾಗುತ್ತಿದೆ. ಹರಿಯಾಣದ ಮನೇಸರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾರತದ ಜತೆ ರಷ್ಯಾ, ಚೀನ, ಪಾಕಿಸ್ಥಾನ, ಇರಾನ್‌, ಕಜಕಿಸ್ತಾನ, ಕಿರ್ಗಿಸ್ಥಾನ, ತಜಿಕಿಸ್ಥಾನ ಮತ್ತು ಉಜ್ಬೇಕಿ ಸ್ಥಾನ ಸಹ ಭಾಗವಹಿಸಲಿವೆ.

ಚೀನ ನೇತೃತ್ವದಲ್ಲಿ ಶಾಂಘೈ ಕೋಆಪರೇಶನ್‌ ಆರ್ಗನೈಸೇಶನ್‌ (ಎಸ್‌ಸಿಒ) ನಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸುವ ಶಾಖೆ ಯೊಂದಿದ್ದು, ಉಗ್ರರನ್ನು ಮಟ್ಟ ಹಾಕುವ ಕುರಿತು ಕಾರ್ಯತಂತ್ರ ರೂಪಿಸುತ್ತದೆ. ಇದರ ಅಂಗವಾಗಿ ಭಾರತದಲ್ಲಿ ಈ ಬಾರಿ ಜಂಟಿ ಸಮರಾಭ್ಯಾಸ ನಡೆಯಲಿದೆ. ಸದ್ಯ ಪಾಕಿಸ್ಥಾನದ ಭಾಗವಹಿಸುವಿಕೆ ಬಗ್ಗೆ ಪ್ರಸ್ತಾ ವವಾಗಿ ದ್ದರೂ ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಎಂಬುದು ಸ್ಪಷ್ಟವಾಗಬೇಕಿದೆ.

ಹದಗೆಟ್ಟಿರುವ ಸಂಬಂಧ
ಜಮ್ಮು ಕಾಶ್ಮೀರದ ಮೇಲಿನ ವಿಶೇಷ ವಿಧಿ ವಾಪಸು ಪಡೆದ ಮೇಲೆ ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿದೆ.ಎರಡು ದೇಶಗಳ ಯಾವುದೇ ನಾಯಕರು ಪರಸ್ಪರ ಭೇಟಿಯಾಗುತ್ತಿಲ್ಲ. ಮಾತುಕತೆಯೂ ನಡೆಯುತ್ತಿಲ್ಲ. ಸದ್ಯಕ್ಕಂತೂ ಈ ಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ. ಹೀಗಾಗಿ ಪಾಕಿಸ್ಥಾನದ ಪಾಲ್ಗೊಳ್ಳುವಿಕೆ ಕುರಿತು ಕುತೂಹಲಕ್ಕೆಡೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next