Advertisement
ಹೌದು, ವಿಚಿತ್ರ ಎನ್ನಿಸಿದರೂ ಸತ್ಯ. ಈ ಬಗ್ಗೆ ಸ್ವತಃ ಪಾಕಿಸ್ಥಾನದ ವಿದೇಶಾಂಗ ವಕ್ತಾರ ಆಸಿಮ್ ಇಫ್ತಿಖಾರ್ ಅವರೇ ಖಚಿತಪಡಿಸಿದ್ದಾರೆ ಎಂದು ಪಾಕ್ ಮಾಧ್ಯಮ ಗಳು ವರದಿ ಮಾಡಿವೆ. ಇದೇ ಅಕ್ಟೋಬರ್‌ನಲ್ಲಿ ಭಾರತದಲ್ಲಿ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ವತಿಯಿಂದ ಸಮರಾಭ್ಯಾಸ ನಡೆಯಲಿದ್ದು, ಅದರಲ್ಲಿ ಪಾಕಿಸ್ಥಾನ ಭಾಗವಹಿಸಲಿದೆ. ವಿಶೇಷವೆಂದರೆ, ಸ್ವಾತಂತ್ರಾéನಂತರದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮೊದಲ ಜಂಟಿ ಸಮರಾ ಭ್ಯಾಸ ಇದು.
Related Articles
ಜಮ್ಮು ಕಾಶ್ಮೀರದ ಮೇಲಿನ ವಿಶೇಷ ವಿಧಿ ವಾಪಸು ಪಡೆದ ಮೇಲೆ ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎಂಬಂತಿದೆ.ಎರಡು ದೇಶಗಳ ಯಾವುದೇ ನಾಯಕರು ಪರಸ್ಪರ ಭೇಟಿಯಾಗುತ್ತಿಲ್ಲ. ಮಾತುಕತೆಯೂ ನಡೆಯುತ್ತಿಲ್ಲ. ಸದ್ಯಕ್ಕಂತೂ ಈ ಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲ. ಹೀಗಾಗಿ ಪಾಕಿಸ್ಥಾನದ ಪಾಲ್ಗೊಳ್ಳುವಿಕೆ ಕುರಿತು ಕುತೂಹಲಕ್ಕೆಡೆ ಮಾಡಿದೆ.
Advertisement