Advertisement

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

08:48 AM Oct 24, 2021 | Team Udayavani |

ದುಬೈ: ಅರಬ್‌ ನಾಡಿನಲ್ಲಷ್ಟೇ ಅಲ್ಲ, ಕ್ರಿಕೆಟ್‌ ಜಗತ್ತಿನಲ್ಲೇ ಟಿ20 ಕಾವು ಒಮ್ಮೆಲೇ ಏರಿದೆ. ಕ್ರಿಕೆಟ್‌ ಮಾತ್ರವಲ್ಲ, ಕ್ರೀಡಾಲೋಕವೇ ದುಬೈನತ್ತ ಮುಖ ಮಾಡಿ “ಭಾನುವಾರದ ಮಹಾ ಹೋರಾಟದ’ ಕ್ಷಣ ಗಣನೆಯಲ್ಲಿ ತೊಡಗಿದೆ. ಅಭಿಮಾನಿಗಳ ಕಾತರ, ಕೌತುಕಗಳೆಲ್ಲ ಸೀಮೆ ಯನ್ನು ಮೀರಿವೆ.

Advertisement

ಎಲ್ಲ ಚಟುವಟಿಕೆಗಳೂ ಸ್ತಬ್ಧಗೊಳ್ಳುವ ಸಮಯವೊಂದು ಸಮೀಪಿ ಸುತ್ತಿದೆ. ಇದಕ್ಕೆಲ್ಲ ಒಂದೇ ಕಾರಣ, ಭಾರತ- ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯ! ಟಿ20 ವಿಶ್ವಕಪ್‌ ಕೂಟದ 2ನೇ ವಿಭಾಗದ ಪಂದ್ಯದಲ್ಲಿ ಭಾನುವಾರ ರಾತ್ರಿ ಭಾರತ- ಪಾಕಿಸ್ತಾನ ಮುಖಾಮುಖೀಯಾಗಲಿವೆ. ಉಳಿದೆಲ್ಲ ಪಂದ್ಯಗಳಿಗಿಂತ ಈ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ಉತ್ಸಾಹ ದೊಡ್ಡಮಟ್ಟದಲ್ಲೇ ಇರುತ್ತದೆ.

ಅಕ್ಷರಶಃ ಇದೊಂದು ಕದನವೇ ಆಗಿರುತ್ತದೆ. ಗೆದ್ದರೆ ಯುದ್ಧವನ್ನೇ ಜಯಿಸಿದ ಮಹಾಸಂಭ್ರಮ. ಪಾಕ್‌ ಎದುರಿನ ಎಲ್ಲ ವಿಶ್ವಕಪ್‌ ಸಮರಗಳಲ್ಲೂ ಜಯಭೇರಿ ಮೊಳಗಿಸಿದ್ದು ಭಾರತದ ಗರಿಮೆಗೆ ಸಾಕ್ಷಿ. ಹೀಗಾಗಿ ಭಾನುವಾರವೂ ಭಾರತ ತಂಡದ ಮೇಲಿನ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ. ಹಾಗೆಯೇ ಪಾಕಿಸ್ತಾನದ ಮೇಲಿನ ಒತ್ತಡವೂ!

 ಗೆದ್ದರೆ ಕಪ್‌ ಎತ್ತಿದಷ್ಟೇ ಖುಷಿ!: ಐಸಿಸಿ ಕೂಟ ಗಳಲ್ಲಿ ಭಾರತ-ಪಾಕಿಸ್ತಾನಗಳ ನಡುವಿನ ಪಂದ್ಯ ಕ್ಕಿಂತ ಮಿಗಿಲಾದ ಪಂದ್ಯ ಖಂಡಿತ ಇಲ್ಲ. ಇದು ಸೃಷ್ಟಿಸುವ ರೋಚಕತೆಗೆ ಮಿತಿ ಇಲ್ಲ. ಇತ್ತಂಡಗಳೂ ಜಿದ್ದಿಗೆ ಬಿದ್ದು ಆಡುವ ಪಂದ್ಯವಿದು. ಕಪ್‌ ಗೆಲ್ಲ ಬೇಕೆಂದಿಲ್ಲ, ಪಾಕಿಸ್ತಾನವನ್ನು ಸೋಲಿಸಿದರೆ ಸಾಕು… ಕಪ್‌ ಎತ್ತಿದಷ್ಟೇ ಖುಷಿ.

ಗಡಿಯಾಚೆಯೂ ಅಷ್ಟೇ. ಈ ಸಲದ ವಿಶ್ವಕಪ್‌ ವಿಶೇಷವೆಂದರೆ ಭಾರತ-ಪಾಕಿಸ್ತಾನ ಲೀಗ್‌ ಹಂತದ ಮೊದಲ ಪಂದ್ಯದಲ್ಲೇ ಎದುರಾಗಿರುವುದು. ಕೂಟದ 2ನೇ ದಿನವೇ ವೋಲ್ಟೆàಜ್‌ ಮೀಟರ್‌ ಗರಿಷ್ಠ ಮಟ್ಟಕ್ಕೇರ ಲಿದೆ. ಬಲಾಬಲದ ಲೆಕ್ಕಾಚಾರದಲ್ಲಿ ಎರಡೂ ತಂಡಗಳು ಸಶಕ್ತ. ಆದರೆ ಯುಎಇಯಲ್ಲೇ ಆಡಿದ ಐಪಿಎಲ್‌ ಅನುಭವ ಕೊಹ್ಲಿ ಪಡೆಗೊಂದು ವರದಾನ.

Advertisement

ಪಾಕ್‌ ಸವಾಲನ್ನು ಎಂದೂ ಒತ್ತಡವಾಗಿ ತೆಗೆದುಕೊಳ್ಳದೆ, ಬಿಂದಾಸ್‌ ಹಾಗೂ ಜಾಲಿಯಾಗಿ ಆಡುವುದೇ ಭಾರತದ ರಣತಂತ್ರ. ಪಾಕಿಸ್ತಾನದ ಸ್ಥಿತಿ ಇದಕ್ಕೆ ತದ್ದಿರುದ್ಧ. ಅದು ಸದಾ ಒತ್ತಡದಲ್ಲೇ ಮುಳುಗಿರುತ್ತದೆ. ಮತ್ತು ಈ ಒತ್ತಡ ಎಲ್ಲ ದಿಕ್ಕುಗಳಿಂದಲೂ ಮುನ್ನುಗ್ಗಿ ಬರುತ್ತದೆ. ಆದರೆ ಎರಡನೇ ತವರಾಗಿರುವ ಯುಎಇಯಲ್ಲಿ ಟಿ20 ದಾಖಲೆ ಉತ್ತಮ ಮಟ್ಟದಲ್ಲಿರುವುದು ಪಾಕ್‌ ಪಾಲಿಗೊಂದು ಸಮಾಧಾನ.

Advertisement

Udayavani is now on Telegram. Click here to join our channel and stay updated with the latest news.

Next