Advertisement

ಮತ್ತೂಂದು ಪ್ರಥಮಕ್ಕೆೆ ಕಾಯುತ್ತಿದೆ ಭಾರತ

12:30 AM Feb 10, 2019 | |

ಹ್ಯಾಮಿಲ್ಟನ್‌: ಟೀಮ್‌ ಇಂಡಿಯಾದ ಸುದೀರ್ಘ‌ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಜಂಟಿ ಪ್ರವಾಸ ಕೊನೆಯ ಹಂತದಲ್ಲಿದೆ. ರವಿವಾರ ನಡೆಯಲಿರುವ ಭಾರತ-ನ್ಯೂಜಿಲ್ಯಾಂಡ್‌ ನಡುವಿನ 3ನೇ ಟಿ20 ಪಂದ್ಯದೊಂದಿಗೆ ಈ ಅಭಿಯಾನ ಕೊನೆಗೊಳ್ಳಲಿದೆ. ಇದನ್ನೂ ಗೆದ್ದು ಪ್ರವಾಸಕ್ಕೆ ಪರಿಪೂರ್ಣ ಅಂತ್ಯ ಒದಗಿಸುವುದು ರೋಹಿತ್‌ ಪಡೆಯ ಗುರಿ.

Advertisement

ಸಾಲು ಸಾಲು ಐತಿಹಾಸಿಕ ಸಾಧನೆಗಳೊಂದಿಗೆ ಭಾರತ ಈ ಪ್ರವಾಸವನ್ನು ಸ್ಮರಣೀಯಗೊಳಿಸುತ್ತಲೇ ಬಂದಿದೆ. ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಸರಣಿ, ಏಕದಿನ ಸರಣಿ, ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧ ಏಕದಿನ ಸರಣಿ ವಶಪಡಿಸಿಕೊಂಡ ಹಿರಿಮೆ ಟೀಮ್‌ ಇಂಡಿಯಾದ್ದು. ಇದರಲ್ಲಿ ಹಲವು “ಮೊದಲು’ಗಳನ್ನು ಸಾಧಿಸುವ ಮೂಲಕ ಭಾರತ ತಂಡ ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಕೊನೆಯಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಟಿ20 ಸರಣಿ ಜಯಿಸಿದರೆ ಅದು ಕೂಡ ಭಾರತದ ಪಾಲಿಗೆ “ದಾಖಲೆ’ಯಾಗಲಿದೆ. 

ನ್ಯೂಜಿಲ್ಯಾಂಡ್‌ ನೆಲದಲ್ಲಿ ಶುಕ್ರವಾರವಷ್ಟೇ ಮೊದಲ ಟಿ20 ಪಂದ್ಯ ಗೆದ್ದ ಭಾರತ, ಎರಡೇ ದಿನದಲ್ಲಿ ಮತ್ತೂಂದು ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಂಡರೆ ಅದೊಂದು ದೊಡ್ಡ ಸಾಧನೆಯೇ ಸರಿ. ಇನ್ನೊಂದೆಡೆ “ಬ್ಲ್ಯಾಕ್‌ ಕ್ಯಾಪ್ಸ್‌’ ಏಕ ದಿನ ಸರಣಿ ಸೋಲಿಗೆ ಸೇಡು ತೀರಿಸಿ ಕೊಳ್ಳಲು ಗರಿಷ್ಠ ಪ್ರಯತ್ನ ಮಾಡಲಿದೆ. ಕಿವೀಸ್‌ ವನಿತೆಯರೇನೋ ಇದರಲ್ಲಿ ಯಶಸ್ವಿಯಾಗಿದ್ದಾರೆ. ಪುರುಷರಿಂದ ಈ ಸಾಧನೆ ಪುನರಾವರ್ತನೆಗೊಳ್ಳದೇ ಹೋದರೆ ಆತಿಥೇಯರ ಪಾಲಿಗೆ ಇದೊಂದು ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ.

ಬದಲಾವಣೆ ಸಾಧ್ಯತೆ ಕಡಿಮೆ
ಭಾರತ ಎರಡೂ ಪಂದ್ಯಗಳಲ್ಲಿ ಅದೇ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿದಿತ್ತು. ರವಿವಾರವೂ ಇದೇ ಕಾಂಬಿನೇಶನ್‌ ಉಳಿಸಿ ಕೊಳ್ಳುವ ಸಾಧ್ಯತೆ ಹೆಚ್ಚು. ಬದ ಲಾವಣೆ ಆಗುವುದೇ ಆದಲ್ಲಿ ಸ್ಪಿನ್‌ ವಿಭಾಗದಲ್ಲಿ ಸಂಭವಿಸಬಹುದು. ಚಾಹಲ್‌ ಬದಲು ಕುಲದೀಪ್‌ ಯಾದವ್‌ಗೆ ಅವಕಾಶ ಸಿಕ್ಕೀತು.

ಮೊದಲ ಪಂದ್ಯಕ್ಕೆ ಹೋಲಿಸಿ ದರೆ ದ್ವಿತೀಯ ಮುಖಾಮುಖೀ ಯಲ್ಲಿ ಭಾರತ 50ರಷ್ಟು ರನ್ನನ್ನು ಕಡಿಮೆ ನೀಡಿತ್ತು. ಸ್ಪಿನ್ನರ್‌ ಕೃಣಾಲ್‌ ಪಾಂಡ್ಯ ಕಮಾಲ್‌ಗೈದಿದ್ದರು. ಖಲೀಲ್‌ ಅಹ್ಮದ್‌, ಭುವನೇಶ್ವರ್‌ ಕೂಡ ಕಿವೀಸ್‌ ಸರದಿಯನ್ನು ಕಾಡುವಲ್ಲಿ ಹಿಂದುಳಿಯಲಿಲ್ಲ. ಅಪಾಯಕಾರಿ ಸೀಫ‌ರ್ಟ್‌, ಮುನ್ರೊ ವಿಕೆಟ್‌ಗಳನ್ನು ಬೇಗನೇ ಉಡಾಯಿಸಿದ್ದು ಭಾರತಕ್ಕೆ ಬಂಪರ್‌ ಆಗಿ ಪರಿಣಮಿಸಿತ್ತು. ಹ್ಯಾಮಿಲ್ಟನ್‌ನಲ್ಲೂ ಇವರನ್ನು ಬೇರೂರದಂತೆ ನೋಡಿಕೊಂಡರೆ ಅರ್ಧ ಪಂದ್ಯ ಗೆದ್ದಂತೆ.

Advertisement

ಓಪನಿಂಗ್‌ನಲ್ಲಿ ಅಡಗಿದೆ ಯಶಸ್ಸು
ಭಾರತದ ಆಕ್ಲೆಂಡ್‌ ಗೆಲುವಿನಲ್ಲಿ ರೋಹಿತ್‌-ಧವನ್‌ ಅವರ ಆಕ್ರಮಣಕಾರಿ ಆರಂಭಿಕ ಜತೆಯಾಟದ ಪಾಲೂ ಸಾಕಷ್ಟಿತ್ತು. ಟಿ20 ಗೆಲುವಿನಲ್ಲಿ ಭರ್ಜರಿ ಓಪನಿಂಗ್‌ ಅಗತ್ಯ ಎಂಬುದು ಎರಡೂ ಪಂದ್ಯಗಳಲ್ಲಿ ಇತ್ತಂಡ ಗಳಿಂದಲೂ ಸಾಬೀತಾಗಿದೆ. ಪಂತ್‌, ವಿಜಯ್‌ ಶಂಕರ್‌ ಕೂಡ ಸಿಡಿದು ನಿಲ್ಲುವ ಛಾತಿ ಹೊಂದಿದ್ದಾರೆ. ರವಿವಾರವೂ ಭಾರತದಿಂದ ಇಂಥದೊಂದು ಸ್ಫೋಟಕ ಬ್ಯಾಟಿಂಗ್‌ ಕಂಡುಬರಬೇಕಿದೆ. ಆಗ ಎದುರಾಳಿ ಬೌಲಿಂಗ್‌ ಬಹಳ ಬೇಗನೇ ದಿಕ್ಕು ತಪ್ಪುತ್ತದೆ. ಮೊದಲ ಪಂದ್ಯದಲ್ಲಿ ಭಾರತಕ್ಕೆ, 2ನೇ ಪಂದ್ಯ ದಲ್ಲಿ ನ್ಯೂಜಿಲ್ಯಾಂಡಿಗೆ ಇದರ ಅನುಭವ ಚೆನ್ನಾಗಿಯೇ ಆಗಿತ್ತು!

92 ರನ್ನಿಗೆ ಆಲೌಟ್‌ ಆದ ತಾಣ!
ಮೊದಲ ಪಂದ್ಯದಲ್ಲಿ ಕಿವೀಸ್‌ಗೆ 200 ಪ್ಲಸ್‌ ರನ್‌ ಬಿಟ್ಟುಕೊಟ್ಟ ಭಾರತ, ಶುಕ್ರವಾರ ಆಕ್ಲೆಂಡ್‌ನ‌ಲ್ಲಿ ಆತಿಥೇಯರನ್ನು ನಿಯಂತ್ರಿಸಿದ ರೀತಿ, ಅವರ ಮೇಲೆ ತಿರುಗಿ ಬಿದ್ದ ಪರಿ ಅಮೋಘ. ಬೌಲಿಂಗ್‌-ಬ್ಯಾಟಿಂಗ್‌ ವಿಭಾಗಗಳೆರಡರಲ್ಲೂ ಟೀಮ್‌ ಇಂಡಿಯಾ ನಿಜವಾದ ಜೋಶ್‌ ತೋರಿತ್ತು. ಇದೇ ಆಟವನ್ನು ಪುನರಾವರ್ತಿಸಿದರೆ ಸರಣಿ ಗೆಲುವು ಅಸಾಧ್ಯ ವಲ್ಲ. ಆದರೆ ಇದೇ ಹ್ಯಾಮಿಲ್ಟನ್‌ ಅಂಗಳದಲ್ಲಿ 4ನೇ ಏಕದಿನ ಪಂದ್ಯವಾಡುವಾಗ ಟ್ರೆಂಟ್‌ ಬೌಲ್ಟ್ ದಾಳಿಗೆ ಸಿಲುಕಿ 92 ರನ್ನಿಗೆ ಆಲೌಟಾದುದನ್ನು ಮರೆಯಬಾರದು!

ಸಂಭಾವ್ಯ ತಂಡಗಳು
ಭಾರತ 
ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ರಿಷಬ್‌ ಪಂತ್‌, ವಿಜಯ್‌ ಶಂಕರ್‌, ಮಹೇಂದ್ರ ಸಿಂಗ್‌ ಧೋನಿ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ಕೃಣಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಾಹಲ್‌, ಖಲೀಲ್‌ ಅಹ್ಮದ್‌.

ನ್ಯೂಜಿಲ್ಯಾಂಡ್‌  
ಟಿಮ್‌ ಸೀಫ‌ರ್ಟ್‌, ಕಾಲಿನ್‌ ಮುನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ಡ್ಯಾರಿಲ್‌ ಮಿಚೆಲ್‌, ರಾಸ್‌ ಟಯ್ಲರ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಸ್ಕಾಟ್‌ ಕುಗೆಲೀನ್‌. ಟಿಮ್‌ ಸೌಥಿ, ಐಶ್‌ ಸೋಧಿ, ಬ್ಲೇರ್‌ ಟಿಕ್ನರ್‌.

ಆರಂಭ: ಅಪರಾಹ್ನ 12.30  ಜ ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next