ಹೈದರಾಬಾದ್: ವಿಶ್ವಕಪ್ ತಯಾರಿಯ ಹಂತವಾಗಿ ಇಂದಿನಿಂದ ಭಾರತ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಏಕದಿನ ಪಂದ್ಯವನ್ನು ಆಡಲಿದೆ. ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಟೀಮ್ ಇಂಡಿಯಾ ಬೌಲಿಂಗ್ ಪಡೆ: ಶ್ರೀಲಂಕಾ ವಿರುದ್ಧ ಉತ್ತಮ ನಿರ್ವಹಣೆ ನೀಡಿದ ಮೊಹಮ್ಮದ್ ಸಿರಾಜ್ ಶಮಿ, ಶಾರ್ದೂಲ್ ಠಾಕೂರ್, ತಂಡದ ವೇಗದ ಶಕ್ತಿಯಾಗಿದ್ದರೆ, ಹಾರ್ದಿಕ್ ಆಲ್‌ರೌಂಡರ್ ಆಗಿ ತಂಡವನ್ನು ಆಧರಿಸಲಿದ್ದಾರೆ. ಸ್ಪಿನ್ ದಾಳಿಗೆ ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಅವರನ್ನು ಆಯ್ದುಕೊಂಡಿದೆ.
ನ್ಯೂಜಿಲ್ಯಾಂಡ್ ಬಲಿಷ್ಠ:
ತಂಡದಲ್ಲಿ ಪ್ರಮುಖ ಆಟಗಾರ ರಾದ ಕೇನ್ ವಿಲಿಯಮ್ಸನ್, ಸೌಥಿ, ಬೋಲ್ಟ್ ಇಲ್ಲದಿದ್ದರೂ ನ್ಯೂಜಿಲ್ಯಾಂಡ್ ತಂಡ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಪಾಕಿಸ್ಥಾನ ವಿರುದ್ಧ ಆಡಿದ ನ್ಯೂಜಿಲ್ಯಾಂಡ್ ತಂಡ ಇಲ್ಲಿಗೆ ಆಗಮಿಸಿದೆ. ಆರಂಭಿಕ ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಫಿಲಿಪ್ಸ್ ಪಾಕ್ ವಿರುದ್ಧದ ನಿರ್ಣಾಯಕ ಪಂದ್ಯದಲಿ ಏಕಾಂಗಿಯಾಗಿ ಹೋರಾಡಿ ಪಂದ್ಯ ಜಯಿಸಿದ್ದರು.
Related Articles
ತಂಡಗಳು:
ಭಾರತ:
ರೋಹಿತ್ ಶರ್ಮಾ (ನಾಯಕ),ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್(ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ
ನ್ಯೂಜಿಲ್ಯಾಂಡ್: ಫಿನ್ ಅಲೆನ್(ನಾಯಕ), ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ಕೀಪರ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಹೆನ್ರಿ ಶಿಪ್ಲಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್