ಲೀಸೆಸ್ಟರ್: ಲೀಸೆಸ್ಟರ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯದ ದ್ವಿತೀಯ ಸರದಿಯಲ್ಲಿ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. 6 ವಿಕೆಟಿಗೆ 322 ರನ್ ಗಳಿಸಿ 3ನೇ ದಿನದ ಅಂತಿಮ ಅವಧಿಯ ಆಟ ಮುಂದುವರಿಸುತ್ತಿದೆ.
Advertisement
ವಿರಾಟ್ ಕೊಹ್ಲಿ 67 ರನ್ ಬಾರಿಸಿದರೆ, ಶ್ರೇಯಸ್ ಅಯ್ಯರ್ 61 ರನ್ ಮಾಡಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮೊದಲ ಸರದಿಯಲ್ಲಿ ಮಿಂಚಿದ ಶ್ರೀಕರ್ ಭರತ್ ಇಲ್ಲಿ ಆರಂಭಿಕನಾಗಿ ಇಳಿದು 43 ರನ್ ಮಾಡಿದರು.
ಶುಭಮನ್ ಗಿಲ್ 38, ಹನುಮ ವಿಹಾರಿ 20, ಶಾರ್ದೂಲ್ ಠಾಕೂರ್ 28 ರನ್ ಗಳಿಸಿ ಔಟಾದರು. ಲೀಸೆಸ್ಟರ್‌ಶೈರ್ ಪರ ಆಡಿದ ನವದೀಪ್ ಸೈನಿ 3 ವಿಕೆಟ್ ಕಿತ್ತು ಮಿಂಚಿದರು.