Advertisement
ಈ ಹೇಳಿಕೆಯ ಬೆನ್ನಲ್ಲೇ, ಸಿಡ್ನಿಯಲ್ಲಿ ಸತತ ಎರಡು ಟೆಸ್ಟ್ ಗಳನ್ನು ಆಡುವುದು ಅಸಾಧ್ಯ ಎಂದು ಆಸೀಸ್ ನಾಯಕ ಟಿಮ್ ಪೇನ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕ್ರಿಕೆಟಿಗರಿಗೆ ಕ್ವೀನ್ಸ್‌ಲ್ಯಾಂಡ್ ಗಡಿ ನಿರ್ಬಂಧವನ್ನೂ ಸಡಿಲಿಸಲಾಗಿದೆ. ಭಾರತದ ಏಟು ಬೀಳಬೇಕಾದ ಜಾಗದಲ್ಲೇ ಬಿದ್ದಿದೆ!
Related Articles
Advertisement
“ಭಾರತೀಯ ಕ್ರಿಕೆಟಿಗರ ಬಯೋ ಬಬಲ್ ಲೈಫ್ ಸೆಪ್ಟಂಬರ್ ತಿಂಗಳಿಂದಲೇ ಯುಎಇಯಲ್ಲಿ ಆರಂಭಗೊಂಡಿದೆ. 13ನೇ ಐಪಿಎಲ್ ಆರಂಭಕ್ಕೂ ಮೊದಲೇ ಇದು ಶುರುವಾಗಿತ್ತು. ಆಸ್ಟ್ರೇಲಿಯಕ್ಕೆ ಬಂದ ಬಳಿಕ ಸಿಡ್ನಿಯಲ್ಲೂ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. ಈ ವರೆಗೆ ಮೂರೂವರೆ ತಿಂಗಳನ್ನು ಜೈವಿಕ ಸುರಕ್ಷಾ ವಲಯದಲ್ಲೇ ಕಳೆದಿದ್ದಾರೆ. ಯಾರಿಗೂ ಯಾವ ಸಮಸ್ಯೆಯೂ ಎದುರಾಗಿಲ್ಲ. ಆಸೀಸ್ ಪ್ರವಾಸ ಕ್ಲೈಮ್ಯಾಕ್ಸ್ ಹಂತದಲ್ಲಿರುವಾಗ ಇನ್ನೊಂದು ಕ್ವಾರಂಟೈನ್ ನಮಗೆ ಅಗತ್ಯವಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಕ್ರಿಕೆಟ್ ವೆಬ್ ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಬ್ರಿಸ್ಬೇನ್‌ಗೆ ಹೋದ ಬಳಿಕ ಅಲ್ಲಿಯೂ ಹೊಟೇಲ್ ಕೊಠಡಿಯಲ್ಲಿ ಉಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂಬುದು ಭಾರತೀಯರ ಆಕ್ರೋಶಕ್ಕೆ ಕಾರಣ. “ಇದಕ್ಕೆ ನಾವು ತಯಾರಿಲ್ಲ. ಅಂಗಳದಲ್ಲಿ ಅಭ್ಯಾಸ ನಡೆಸುವುದು ಮುಖ್ಯ. ಇದು ಸಾಧ್ಯವಿಲ್ಲ ಎಂದಾದರೆ ನಾವು ಸಿಡ್ನಿಯಲ್ಲೇ ಅಂತಿಮ ಟೆಸ್ಟ್ ಆಡಿ ಸರಣಿ ಮುಗಿಸಲಿದ್ದೇವೆ’ ಎಂದು ಬಿಸಿಸಿಐ ಧ್ವನಿಯೆತ್ತಿ ಹೇಳಿದೆ.
“ಸಿಡ್ನಿಯಲ್ಲಿ ಕಠಿನ ಕ್ವಾರಂಟೈನ್ ಮುಗಿಸಿದ ಬಳಿಕ ಪ್ರವಾಸಿ ಕ್ರಿಕೆಟಿಗರನ್ನೂ ಮಾಮೂಲು ಆಸ್ಟ್ರೇಲಿಯನ್ನರಂತೆ ಕಾಣಬೇಕಿತ್ತು. ಎಲ್ಲೂ ಕೋವಿಡ್ ನಿಯಮಾವಳಿಯನ್ನು ಉಲ್ಲಂ ಸಿಲ್ಲ. ಜೈವಿಕ ಸುರಕ್ಷಾ ವಲಯ ನಿಯಮದಂತೆಯೇ ಕ್ರಿಕೆಟಿಗರು ಹೊಟೇಲಿಗೆ ಹೋಗಿದ್ದಾರೆ. ಈ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ’ ಎಂದು ಸಂದರ್ಶನದ ವೇಳೆ ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.
ಆಡಿ ಗೆಲ್ಲಲಾಗದವರ ತಂತ್ರ!
ಪ್ರವಾಸಿ ತಂಡವೊಂದು ಆಸ್ಟ್ರೇಲಿಯಕ್ಕೆ ಕಾಲಿಟ್ಟೊಡನೆಯೇ ಅಲ್ಲಿನ ಕ್ರಿಕೆಟಿಗರು, ಮಾಧ್ಯಮಗಳು “ಮೈಂಡ್ ಗೇಮ್’ ಆರಂಭಿಸುವುದು ಮಾಮೂಲು. ಪಂದ್ಯದ ವೇಳೆ ಹೀಯಾಳಿಸುವ ಚಾಳಿ ಕೂಡ ಇದೆ. ಅದರಲ್ಲೂ ಪಂದ್ಯವನ್ನು ಸೋತ ಬಳಿಕವಂತೂ ಆಸ್ಟ್ರೇಲಿಯನ್ನರ ಈ ವರ್ತನೆ ಮೇರೆ ಮೀರುತ್ತದೆ. ಸಿಡ್ನಿಯ “ಮಂಕಿ ಗೇಟ್’ ಪ್ರಕರಣದಂತೆ ಈ “ಕೋವಿಡ್ ನಿಯಮ ಉಲ್ಲಂಘನೆ’ ಕೂಡ ಕಾಂಗರೂಗಳ ಕುತಂತ್ರದ ಒಂದು ಭಾಗ ಎನ್ನಲಾಗುತ್ತಿದೆ. ಕಾರಣ, “ಬಾಕ್ಸಿಂಗ್ ಡೇ ಪಂಚ್’.
36ಕ್ಕೆ ಕುಸಿದ ತಂಡವೊಂದು ತಿರುಗೇಟು ನೀಡಿದ್ದನ್ನು ಆಸ್ಟ್ರೇಲಿಯನ್ನರಿಂದ ಸಹಿಸಿಕೊಳ್ಳಲಾಗುತ್ತಿಲ್ಲ, ಶಿಸ್ತಿನಿಂದ ಆಡಿ ಗೆಲ್ಲಲಾಗದವರು ಇಂಥ ಕುತಂತ್ರಗಳ ಮೊರೆ ಹೋಗುತ್ತಾರೆ ಎಂಬುದನ್ನು ಆಸ್ಟ್ರೇಲಿಯನ್ನರು ಮತ್ತೆ ನಿರೂಪಿಸಿದ್ದಾರೆ ಎಂದೇ ಈ ವಿದ್ಯಮಾನವನ್ನು ವಿಶ್ಲೇಷಿಸಲಾಗುತ್ತಿದೆ.
ಒಟ್ಟಿಗೆ ಪ್ರಯಾಣಿಸಲಿರುವ ಭಾರತದ ಆಟಗಾರರು
ಭಾರತೀಯರ “ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ’ ಆಸ್ಟ್ರೇಲಿಯಕ್ಕೇ ಉರುಳಾಗುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ರವಿವಾರದ ಎರಡು ಬೆಳವಣಿಗೆಗಳೇ ಸಾಕ್ಷಿ. ಮೊದಲನೆಯದು, ಭಾರತ ತಂಡ ಒಟ್ಟಿಗೆ ಒಂದೇ ಖಾಸಗಿ ವಿಮಾನದಲ್ಲಿ ಸಿಡ್ನಿಗೆ ಪ್ರಯಾಣಿಸಲಿರುವುದು. ಮತ್ತೂಂದು, ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕಾಗಿ ಕ್ವೀನ್ಸ್‌ಲ್ಯಾಂಡ್ ಸರಕಾರ ಗಡಿ ನಿರ್ಬಂಧವನ್ನು ಸಡಿಲುಗೊಳಿಸಲು ನಿರ್ಧರಿಸಿದ್ದು.
ಹೊಟೇಲಿಗೆ ತೆರಳಿ ಕೋವಿಡ್-19 ನಿಯಮವನ್ನು ಉಲ್ಲಂ ಸಿದರೆಂಬ ಕಾರಣಕ್ಕಾಗಿ ಭಾರತದ ಐವರು ಕ್ರಿಕೆಟಿಗರನ್ನು ಮತ್ತೆ ಐಸೊಲೇಶನ್‌ನಲ್ಲಿ ಇರಿಸಲಾಗಿದೆ. ಆದರೆ ಸೋಮವಾರ ಈ ಐವರು ಕ್ರಿಕೆಟಿಗರು ಸೇರಿದಂತೆ, ಭಾರತದ ಪೂರ್ತಿ ತಂಡ ಒಂದೇ ವಿಮಾನದಲ್ಲಿ ಮೆಲ್ಬರ್ನ್ನಿಂದ ಸಿಡ್ನಿಗೆ ಪಯಣಿಸಲಿದೆ. “ಇದು ನಿಯಮ ಉಲ್ಲಂಘನೆ ಎಂದು ಎಲ್ಲೂ ಕ್ರಿಕೆಟ್ ಆಸ್ಟ್ರೇಲಿಯ ಉಲ್ಲೇಖೀಸಿಲ್ಲ. ಹೀಗಾಗಿ ಒಟ್ಟಿಗೆ ಪ್ರಯಾಣಿಸಲು ಅಡ್ಡಿ ಇಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದೇ ವೇಳೆ ಕ್ರಿಕೆಟಿಗರಿಗಾಗಿ ಕ್ವೀನ್ಸ್‌ಲ್ಯಾಂಡ್ ತನ್ನ ಗಡಿ ನಿರ್ಬಂಧವನ್ನು ಸಡಿಲುಗೊಳಿಸಲು ನಿರ್ಧರಿಸಿದೆ. ಇದರಿಂದ ಸಿಡ್ನಿಯಿಂದ ಕ್ವೀನ್ಸ್‌ಲ್ಯಾಂಡ್ ರಾಜಧಾನಿ ಬ್ರಿಸ್ಬೇನ್‌ಗೆ ತೆರಳಬಹುದಾಗಿದೆ. ಕ್ರಿಕೆಟಿಗರೆಲ್ಲ ಜೈವಿಕ ಸುರಕ್ಷಾ ವಲಯದಲ್ಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ ಅಂತಿಮ ಟೆಸ್ಟ್ ಬ್ರಿಸ್ಬೇನ್‌ನಲ್ಲೇ ನಡೆಯುವುದು ಖಾತ್ರಿಯಾಗಿದೆ.