Advertisement
ಭಾರತಕ್ಕೆ ಎದುರಾಗಿರುವ ಪ್ರಮುಖ ಸಮಸ್ಯೆಯೆಂದರೆ ಮೊದಲ ಸರದಿಯ ಬ್ಯಾಟಿಂಗ್ ವೈಫಲ್ಯ. ಕಳೆದೊಂದು ವರ್ಷದಿಂದ ಭಾರತದ ಫಸ್ಟ್ ಇನ್ನಿಂಗ್ಸ್‌ನ ಕಳಪೆ ಮೊತ್ತ ಎನ್ನುವುದು ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲೇ ಇದೆ. ಈ ಅವಧಿಯಲ್ಲಿ 6 ಸಲ 150 ಹಾಗೂ ಇದಕ್ಕೂ ಕಡಿಮೆ ಮೊತ್ತ ದಾಖಲಿಸುವ ಮೂಲಕ ತಂಡ ಅಪಾಯವನ್ನು ಆಹ್ವಾನಿಸಿಕೊಂಡಿತ್ತು.
Related Articles
ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಭಾರತದ ಆಡುವ ಬಳಗ ಹಾಗೂ ಕ್ರಮಾಂಕ ಹೇಗಿದ್ದೀತು ಎಂಬುದೊಂದು ಕೌತುಕ. ಸಾಮಾ ನ್ಯವಾಗಿ ಕ್ರಿಕೆಟ್‌ನಲ್ಲಿ “ವಿನ್ನಿಂಗ್ ಕಾಂಬಿನೇಶನ್’ ಬದಲಾಯಿ ಸುವುದು ಕಡಿಮೆ, ಅಥವಾ ಅಪರೂಪ. ಆದರೆ ಪರ್ತ್ ನಲ್ಲಿ ಗೆದ್ದು ಅಡಿಲೇಡ್‌ನಲ್ಲಿ ಆಡಲಿಳಿಯುವಾಗ ಭಾರತ ತಂಡದಲ್ಲಿ 3 ಪರಿವರ್ತನೆ ಮಾಡಿಕೊಳ್ಳಲಾಯಿತು. ಇದರಲ್ಲಿ 2 ಬದಲಾವಣೆ ಅನಿವಾರ್ಯ ಹಾಗೂ ನಿರೀಕ್ಷಿತವೇ ಆಗಿತ್ತು. ನಾಯಕ ರೋಹಿತ್ ಶರ್ಮ ಮತ್ತು ಶುಭಮನ್ ಗಿಲ್ ಅವರಿಗಾಗಿ ದೇವದತ್ತ ಪಡಿಕ್ಕಲ್ ಮತ್ತು ಧ್ರುವ ಜುರೆಲ್ ಹೊರಗುಳಿಯಬೇಕಾಯಿತು. ಆದರೆ ಬ್ಯಾಟಿಂಗ್ ಸರದಿ ಬಲಿಷ್ಠಗೊಂಡೂ ಅಡಿಲೇಡ್‌ನಲ್ಲಿ ಭಾರತ ಲಾಗ ಹಾಕಿತು.
Advertisement
ರೋಹಿತ್ ಮತ್ತೆ ಓಪನಿಂಗ್?ಪರ್ತ್ ಪಂದ್ಯದ ದ್ವಿತೀಯ ಸರದಿಯಲ್ಲಿ ಜೈಸ್ವಾಲ್-ರಾಹುಲ್ ದ್ವಿಶತಕದ ಜತೆಯಾಟದ ಮೂಲಕ ತಂಡವನ್ನು ಮೇಲೆತ್ತಿದ ಕಾರಣ ಅಡಿಲೇಡ್‌ನಲ್ಲಿ ಈ ಜೋಡಿಯನ್ನು ಬೇರ್ಪಡಿಸದಿರಲು ನಿರ್ಧರಿಸಿದ್ದು ಸಹಜವೇ ಆಗಿತ್ತು. ಆದರೆ ಈ ನಿರೀಕ್ಷೆ ಫಲಿಸಲಿಲ್ಲ. ಹೀಗಾಗಿ ಅಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ರೋಹಿತ್ ಶರ್ಮ ಮತ್ತೆ ಆರಂಭಿಕನಾಗಿ ಇಳಿಯುವ ಸಾಧ್ಯತೆ ಇದೆ. ಆಗ ರಾಹುಲ್ ಕೆಳ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ. ಪುನಃ ವಾಷಿಂಗ್ಟನ್?
ಭಾರತದ ಬೌಲಿಂಗ್ ವಿಭಾಗದಲ್ಲಿ ಒಂದೆರಡು ಬದಲಾವಣೆಯ ಸಾಧ್ಯತೆ ಗೋಚರಿಸಿದೆ. ವಾಷಿಂಗ್ಟನ್ ಸುಂದರ್ ಜಾಗಕ್ಕೆ ಬಂದ ಆರ್. ಅಶ್ವಿನ್ ಅಡಿಲೇಡ್‌ನಲ್ಲಿ ಯಶಸ್ವಿಯಾಗಲಿಲ್ಲ. ಇವರು ಉರುಳಿಸಿದ್ದು ಒಂದೇ ವಿಕೆಟ್. ಇವರ ಬದಲು ಆಸ್ಟ್ರೇಲಿಯನ್ ವಾತಾವರಣಕ್ಕೆ ಹೆಚ್ಚು ಹೊಂದಿಕೊಳ್ಳಬಲ್ಲ ವಾಷಿಂಗ್ಟನ್ ಸುಂದರ್ ಪುನಃ ತಂಡಕ್ಕೆ ಮರಳುವ ಸುಳಿವು ಲಭಿಸಿದೆ. ರೇಸ್‌ನಲ್ಲಿ ಆಕಾಶ್ ದೀಪ್
ಅಡಿಲೇಡ್‌ನಲ್ಲಿ ಹರ್ಷಿತ್ ರಾಣಾ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಹೀಗಾಗಿ ಎಡಗೈ ಆಟಗಾರರನ್ನು ಕಾಡಬಲ್ಲ ಆಕಾಶ್ ದೀಪ್ ಅವರನ್ನು ದಾಳಿಗಿಳಿಸುವ ಸಾಧ್ಯತೆ ಇದೆ. ಆದರೆ ಪದಾರ್ಪಣೆಯ ಪರ್ತ್ ಟೆಸ್ಟ್‌ನಲ್ಲಿ ರಾಣಾ 4 ವಿಕೆಟ್ ಉರುಳಿಸಿ ಮಿಂಚಿದ್ದರು. ಬ್ರಿಸ್ಬೇನ್ ಪಿಚ್ ಪರ್ತ್‌ನ “ಆಪ್ಟಸ್ ಸ್ಟೇಡಿಯಂ’ ಟ್ರ್ಯಾಕ್‌ನಂತೆಯೇ ಇದ್ದರೂ ರಾಣಾಗೆ ಮತ್ತೂಂದು ಚಾನ್ಸ್ ಕಡಿಮೆ ಎನ್ನಲಾಗಿದೆ. ಕಾಂಗರೂಗಳಿಗೂ ಬ್ಯಾಟಿಂಗ್ ಸಮಸ್ಯೆ
ಭಾರತದಂತೆ ಆಸ್ಟ್ರೇಲಿಯದ ಬ್ಯಾಟಿಂಗ್ ಸಮಸ್ಯೆ ಕೂಡ ಗಂಭೀರವಾಗಿಯೇ ಇದೆ. ಸ್ಮಿತ್, ಮೆಕ್‌ಸ್ವೀನಿ, ಖ್ವಾಜಾ, ಮಾರ್ಷ್ ನೈಜ ಆಟ ತೋರ್ಪಡಿಸಿಲ್ಲ. ಲಬುಶೇನ್ “ಟೆಸ್ಟ್ ಸ್ಪೆಷಲಿಸ್ಟ್’ ಮಟ್ಟದ ಆಟವಾಡಿಲ್ಲ. ಆದರೆ ಹೆಡ್ ಮಾತ್ರ ಭಾರತಕ್ಕೆ ಸದಾ ತಲೆನೋವಾಗುತ್ತಲೇ ಇದ್ದಾರೆ.
ಬೌಲಿಂಗ್ ವಿಭಾಗಕ್ಕೆ ಜೋಶ್ ಹೇಝಲ್‌ವುಡ್ ಅವರ ಪುನರಾಗಮನವಾಗಿದೆ. ಇವರಿಗಾಗಿ ಸ್ಕಾಟ್ ಬೋಲ್ಯಾಂಡ್ ಅವರನ್ನು ಹೊರಗಿರಿಸಿ ಆಸೀಸ್ ತನ್ನ ಆಡುವ ಬಳಗವನ್ನು ಅಂತಿಮಗೊಳಿಸಿದೆ. ಆರಂಭ: ಬೆಳಗ್ಗೆ 5.50
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್