ವಿಶ್ವ ಸಂಸ್ಥೆ: ಜಪಾನ್ ನತ್ತ ಉತ್ತರ ಕೊರಿಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಯನ್ನು ಭಾರತ, ಅಮೆರಿಕ, ಯುಕೆ ಮತ್ತು ಫ್ರಾನ್ಸ್‌ನೊಂದಿಗೆ ಸೇರಿ ಬಲವಾಗಿ ಖಂಡಿಸಿದೆ.
ಈ ಉಡಾವಣೆ ಪ್ರದೇಶದ ಶಾಂತಿ ಮತ್ತು ಭದ್ರತೆ ಮತ್ತು ಅದರಾಚೆಗೆ ಪರಿಣಾಮ ಬೀರುತ್ತವೆ ಎಂದು ಭಾರತ ಒತ್ತಿಹೇಳಿದೆ. ಮಂಗಳವಾರ ಉಡಾವಣೆಯಾದ ಕ್ಷಿಪಣಿ ಐದು ವರ್ಷಗಳಲ್ಲಿ ಉತ್ತರ ಕೊರಿಯಾದಿಂದ ಜಪಾನ್ ಮೇಲೆ ಹಾರಿದ ಮೊದಲ ಕ್ಷಿಪಣಿಯಾಗಿದೆ. ಈ ವರ್ಷ 24 ನೇ ಬಾರಿಗೆ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಅಪಹರಣಕ್ಕೊಳಗಾಗಿದ್ದ ನಾಲ್ವರು ಭಾರತೀಯರ ಶವಗಳು ಪತ್ತೆ
“ಡಿಪಿಆರ್‌ಕೆ (ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ) ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣೆಗಳ ವರದಿಗಳನ್ನು ನಾವು ಕಳವಳದಿಂದ ಗಮನಿಸಿದ್ದೇವೆ” ಎಂದು ವಿಶ್ವಸಂಸ್ಥೆಯ ರಾಯಭಾರಿ ರುಚಿರಾ ಕಾಂಬೋಜ್ ಬುಧವಾರ ನಡೆದ ಯುಎನ್ ಭದ್ರತಾ ಮಂಡಳಿಯ ಸಭೆಯಲ್ಲಿ ಹೇಳಿದ್ದಾರೆ.
“ಈ ವರ್ಷದ ಮಾರ್ಚ್‌ನಲ್ಲಿ ಡಿಪಿಆರ್‌ಕೆ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯ ಉಡಾವಣೆಯ ನಂತರ ಇದನ್ನು ಕೌನ್ಸಿಲ್‌ನಲ್ಲಿ ಚರ್ಚಿಸಲಾಗಿದ್ದು, ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್ ಅವರು ಅಲ್ಬೇನಿಯಾ, ಬ್ರೆಜಿಲ್, ಫ್ರಾನ್ಸ್, ಭಾರತ, ಐರ್ಲೆಂಡ್, ಜಪಾನ್, ನಾರ್ವೆ, ದಕ್ಷಿಣ ಕೊರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಪರವಾಗಿ ಜಂಟಿ ಹೇಳಿಕೆಯನ್ನು ನೀಡಿದರು.