Advertisement

ಟೀಂ ಇಂಡಿಯಾ ಹಾರಾಟಕ್ಕೆ ಉಡುಗಿಹೋದ ಉಗಾಂಡ: ಅ.19 ಹುಡುಗರಿಗೆ 326 ರನ್ ಅಂತರದ ಜಯ

08:51 AM Jan 23, 2022 | Team Udayavani |

ಟ್ರಿನಿಡಾಡ್: ಅಂಡರ್ 19 ವಿಶ್ವಕಪ್ ಕೂಟದಲ್ಲಿ ಭಾರತದ ವಿಜಯಯಾತ್ರೆ ಮುಂದುವರಿದಿದೆ. ಉಗಾಂಡ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 326 ರನ್ ಅಂತರದ ಭರ್ಜರಿ ಜಯ ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ ರಘುವಂಶಿ ಮತ್ತು ರಾಜ್ ಬಾವಾ ಶತಕದ ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದರೆ, ಉಗಾಂಡ ತಂಡ ಕೇವಲ 79 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರೀ ಮುಖಭಂಗ ಅನುಭವಿಸಿತು.

ಭಾರತ ತಂಡಕ್ಕೆ ಆರಂಭಿಕ ಆಟಗಾರ ರಘುವಂಶಿ ಮತ್ತು ರಾಜ್ ಬಾವಾ ಶತಕ ಬಾರಿಸಿ ನೆರವಾದರು. ರಘುವಂಶಿ 144 ರನ್ ಗಳಿಸಿದರೆ, ರಾಜ್ ಬಾವಾ ಅಜೇಯ 162 ರನ್ ಗಳಿಸಿದರು. 108 ಎಸೆತ ಎದುರಿಸಿದ ಬಾವಾ 8 ಸಿಕ್ಸರ್ ಬಾರಿಸಿದರು.

ಇದನ್ನೂ ಓದಿ:ಗೆದ್ದು ಗೌರವ ಉಳಿಸಿಕೊಂಡೀತೇ ಟೀಮ್‌ ಇಂಡಿಯಾ?

ಉಗಾಂಡ ಪರ ನಾಯಕ ಪಸ್ಕಲ್ ಮುರುಂಗಿ 34 ರನ್ ಗಳಿಸಿದರು. ಉಳಿದಂತೆ 11 ರನ್ ಮಾಡಿದ ರೊನಾಲ್ಡ್ ರದ್ದೇ ಉತ್ತಮ ಗಳಿಕೆ. ಅರು ಮಂದಿ ಶೂನ್ಯ ಸುತ್ತಿದರು. ಭಾರತದ ಪರ ಬೌಲಿಂಗ್ ನಲ್ಲಿ ನಾಯಕ ನಿಶಾಂತ್ ಸಿಂಧು ನಾಲ್ಕು ವಿಕೆಟ್ ಕಿತ್ತು ಮಿಂಚಿದರೆ, ರಾಜವರ್ಧನ್ ಎರಡು, ವಾಸು ಮತ್ತು ವಿಕ್ಕಿ ಓತ್ಸವಾಲ್ ತಲಾ ಒಂದು ವಿಕೆಟ್ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next