Advertisement

ಭಾರತ-ಆಸೀಸ್ ಸರಣಿ: ದಿನಾಂಕ ನಿಗದಿಪಡಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಇಲ್ಲಿದೆ ವೇಳಾಪಟ್ಟಿ !

10:46 AM Oct 28, 2020 | Mithun PG |

ನವದೆಹಲಿ: ಮಹತ್ವದ ಭಾರತ- ಆಸಿಸ್ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ದಿನಾಂಕವನ್ನು ನಿಗದಿಪಡಿಸಿದೆ. ಮುಂದಿನ ತಿಂಗಳು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 3 ಏಕದಿನ, 3 ಟಿ-ಟ್ವೆಂಟಿ, 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

Advertisement

ನವೆಂಬರ್ 27, 2020 ರಿಂದ ಆರಂಭವಾಗುವ ಸುದೀರ್ಘ ಸರಣಿ ಜನವರಿ 19, 2021ರಲ್ಲಿ ಕೊನೆಗೊಳ್ಳಲಿದೆ. ಭಾರತ ತಂಡ ನವೆಂಬರ್ 12ರಂದು ಸಿಡ್ನಿ ಗೆ ತಲುಪಲಿದ್ದು, ಕೋವಿಡ್ ಹಿನ್ನಲೆಯಲ್ಲಿ ಕಡ್ಡಾಯ ಕ್ವಾರಂಟೈನ್ ಗೆ ಒಳಪಡಲಿದೆ.

ಸುಮಾರು 2 ತಿಂಗಳ ಪ್ರವಾಸದ ಮೊದಲೆರಡು ಏಕದಿನ ಪಂದ್ಯ ನವೆಂಬರ್ 27 ಮತ್ತು 29 ರಂದು ಸಿಡ್ನಿಯಲ್ಲಿ ನಡೆಯಲಿದೆ. ಅಂತಿಮ ಏಕದಿನ ಪಂದ್ಯವನ್ನು ಕ್ಯಾನ್ ಬೆರಾದ ಮನುಕ ಓವಲ್ ಕ್ರೀಡಾಂಗಣದಲ್ಲಿ ಡಿಸೆಂಬರ್ 2ರಂದು ನಿಗದಿಪಡಿಸಲಾಗಿದೆ.

ಟಿ-ಟ್ವೆಂಟಿ ಸರಣಿ ಕೂಡ ಕ್ಯಾನ್ ಬೆರಾದಲ್ಲೇ ಆರಂಭವಾಗಲಿದ್ದು, ಡಿಸೆಂಬರ್ 4ರಂದು ಮೊದಲ ಪಂದ್ಯ ನಡೆಯುತ್ತದೆ. ನಂತರದ ಮ್ಯಾಚ್ ಗಳನ್ನು ಮತ್ತೆ ಸಿಡ್ನಿ ಸ್ಟೇಡಿಯಂನಲ್ಲಿ ಗೊತ್ತುಪಡಿಸಲಾಗಿದ್ದು, ಅಂತಿಮ ಪಂದ್ಯಗಳು ಡಿಸೆಂಬರ್ 6 ಮತ್ತು 8ರಂದು ನಡೆಯಲಿದೆ.

Advertisement

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಅಡಿಲೇಡ್ ನ ಓವಲ್ ನಲ್ಲಿ ಡಿಸೆಂಬರ್ ನಲ್ಲಿ 17ರಂದು ಪ್ರಾರಂಭವಾಗಲಿದ್ದು, ಇದು  ಪಿಂಕ್ ಕಲರಿನ ಚೆಂಡಿನಲ್ಲಿ ಆಡಲಿರುವ ಮೊದಲ ಹಗಲು ರಾತ್ರಿ ಪಂದ್ಯವಾಗಿದೆ. 2ನೇ ಟೆಸ್ಟ್ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ) ನಲ್ಲಿ, ಡಿಸೆಂಬರ್ 26ರಂದು ನಡೆದರೇ, 3ನೇ ಪಂದ್ಯ ಎಸ್ ಸಿಜಿಯಲ್ಲಿ ಜನವರಿ 7 ರಂದು ಮತ್ತು ಅಂತಿಮ ಟೆಸ್ಟ್ ಪಂದ್ಯ ಬ್ರಿಸ್ಬೇನ್ ನ ಗಬ್ಬಾ ದಲ್ಲಿ ಜನವರಿ 15ರಂದು  ನಡೆಯಲಿದೆ.

ಇದನ್ನೂ ಓದಿ: ಹಲವು ದಾಖಲೆಗಳಿಗೆ ಸಾಕ್ಷಿಯಾದ ಡೆಲ್ಲಿ-ಹೈದರಾಬಾದ್ ಪಂದ್ಯ: ರಬಾಡ ಅನನ್ಯ ಸಾಧನೆಯೇನು ಗೊತ್ತಾ?

ಭಾರತ ಟಿ20 ತಂಡ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಮಾಯಾಂಕ್‌ ಅಗರ್ವಾಲ್‌, ಕೆ.ಎಲ್‌. ರಾಹುಲ್‌ (ಉಪನಾಯಕ), ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ಹಾರ್ದಿಕ್‌ ಪಾಂಡ್ಯ, ಸಂಜು ಸ್ಯಾಮ್ಸನ್‌, ರವೀಂದ್ರ ಜಡೇಜ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ದೀಪಕ್‌ ಚಹರ್‌, ವರುಣ್‌ ಚಕ್ರವರ್ತಿ.

ಏಕದಿನ ತಂಡ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಶುಭಮನ್‌ ಗಿಲ್‌, ಕೆ.ಎಲ್‌. ರಾಹುಲ್‌ (ಉಪನಾಯಕ), ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ಹಾರ್ದಿಕ್‌ ಪಾಂಡ್ಯ, ಮಾಯಾಂಕ್‌ ಅಗರ್ವಾಲ್‌, ರವೀಂದ್ರ ಜಡೇಜ, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ಶಾದೂìಲ್‌ ಠಾಕೂರ್‌.

ಟೆಸ್ಟ್‌ ತಂಡ: ವಿರಾಟ್‌ ಕೊಹ್ಲಿ (ನಾಯಕ), ಮಾಯಾಂಕ್‌ ಅಗರ್ವಾಲ್‌, ಪೃಥ್ವಿ ಶಾ, ಕೆ.ಎಲ್‌. ರಾಹುಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ಶುಭಮನ್‌ ಗಿಲ್‌, ವೃದ್ಧಿಮಾನ್‌ ಸಾಹಾ, ರಿಷಭ್‌ ಪಂತ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ಉಮೇಶ್‌ ಯಾದವ್‌, ನವದೀಪ್‌ ಸೈನಿ, ಕುಲದೀಪ್‌ ಯಾದವ್‌, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌, ಮೊಹಮ್ಮದ್‌ ಸಿರಾಜ್‌.

ಇದನ್ನೂ ಓದಿ: ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ ! ಪ್ರವಾಸಿಗರ ಸಂಖ್ಯೆ ವಿರಳ 

 

Advertisement

Udayavani is now on Telegram. Click here to join our channel and stay updated with the latest news.

Next