Advertisement

ಜ. 8ರಿಂದ ಭಾರತ-ಬ್ರಿಟನ್‌ ವಿಮಾನಯಾನ

10:05 PM Jan 01, 2021 | Team Udayavani |

ಹೊಸದಿಲ್ಲಿ: ಭಾರತ ಮತ್ತು ಬ್ರಿಟನ್‌ ನಡುವೆ ಜ. 8ರಿಂದ ವಿಮಾನ ಸಂಚಾರ ಆರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ. ಆದರೆ ಕೊರೊನಾ ರೂಪಾಂತರಿತ ವೈರಾಣು ಕಾಟದ ಹಿನ್ನೆಲೆಯಲ್ಲಿ ಕಠಿನ ನಿಯಮಾವಳಿಗಳನ್ನು ಪಾಲಿಸಬೇಕಿರುವುದರಿಂದ ವಾರದಲ್ಲಿ 15 ವಿಮಾನಗಳು ಮಾತ್ರ ದಿಲ್ಲಿ, ಮುಂಬಯಿ, ಬೆಂಗಳೂರು ಮತ್ತು ಹೈದರಾಬಾದ್‌ಗಳಿಂದ ಹಾರಾಟ ನಡೆಸಲಿವೆ ಎಂದು ಅವರು ತಿಳಿಸಿದ್ದಾರೆ.

Advertisement

ಹೊಸ ವರ್ಷದ ಜ. 8ರಿಂದ ಬ್ರಿಟನ್‌ಗೆ ವಿಮಾನಗಳ ಹಾರಾಟ ಪುನರಾರಂಭಿಸಲು ನಿಶ್ಚಯಿಸಲಾಗಿದೆ. ಜ. 23ರ ತನಕ ವಾರಕ್ಕೆ 15 ವಿಮಾನಗಳಷ್ಟೇ ಹಾರಾಡಲಿವೆ. ಡಿಜಿಸಿಎಯು ಸದ್ಯವೇ ವಿವರಗಳನ್ನು ನೀಡಲಿದೆ ಎಂದು ಸಚಿವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ರೂಪಾಂತರಿತ ಕೊರೊನಾ ವೈರಾಣು ಪತ್ತೆಯಾಗುವುದಕ್ಕೆ ಮುನ್ನ ಭಾರತ -ಬ್ರಿಟನ್‌ ನಡುವೆ ಏರ್‌ ಬಬಲ್‌ ಒಪ್ಪಂದದ ಪ್ರಕಾರ ವಾರಕ್ಕೆ 67 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇವುಗಳಲ್ಲಿ ಪ್ರತೀ ದಿನ ಬ್ರಿಟನ್‌ನಿಂದ ಎರಡರಿಂದ ಎರಡೂವರೆ ಸಾವಿರ ಪ್ರಯಾಣಿಕರು ಭಾರತಕ್ಕೆ ಪ್ರಯಾಣಿಸುತ್ತಿದ್ದರು. ಇನ್ನೀಗ ವಾರಕ್ಕೆ ಸರಾಸರಿ ಆರಷ್ಟೇ ವಿಮಾನಗಳು ಹಾರಾಟ ನಡೆಸುವ ಸಂದರ್ಭ ಇಷ್ಟು ಪ್ರಯಾಣಿಕರಿಗೆ ಅವಕಾಶ ನೀಡುವುದು ವಿಮಾನ ಯಾನ ಸಂಸ್ಥೆಗಳಿಗೆ ಸವಾಲಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next