ಹೊಸದಿಲ್ಲಿ: 2030ರ ವೇಳೆಗೆ ಏಷ್ಯಾ ಫೆಸಿಫಿಕ್ ವಲಯದಲ್ಲಿ ಭಾರತ ಜಪಾನ್ ಅನ್ನು ಮೀರಿಸಿ ಎರಡನೇ ಅತೀ ದೊಡ್ಡ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಸಾಧ್ಯತೆ ಇದೆ.
ಸದ್ಯ ಭಾರತ ಜಗತ್ತಿನ 6ನೇ ಅತ್ಯಂತ ದೊಡ್ಡ ಅರ್ಥ ವ್ಯವಸ್ಥೆಯಾಗಿದೆ. ದೇಶದ ಒಟ್ಟು ಉತ್ಪಾದಕತೆ (ಜಿಡಿಪಿ) ಆ ವರ್ಷದ ಅವಧಿಗೆ ವೃದ್ಧಿಯಾಗಲಿದೆ.
ಈ ಮೂಲಕ ಜರ್ಮನಿ ಮತ್ತು ಯುನೈಟೆಡ್ ಕಿಂಗ್‌ಡಮ್ ಅನ್ನೂ ಮೀರಿಸಲಿದೆ ಎಂದು ಲಂಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಐಎಚ್‌ಎಸ್ ಮಾರ್ಕ್‌ಇಟ್ ಸಂಸ್ಥೆ ಉಲ್ಲೇಖಿಸಿದೆ.
ಇದನ್ನೂ ಓದಿ:ದೇಶದ ಜಿಡಿಪಿಗೆ ಶೇ.9.2ರ ನಿರೀಕ್ಷೆ; ಶರವೇಗದ ಅರ್ಥ ವ್ಯವಸ್ಥೆಯತ್ತ ದಾಪುಗಾಲು
“ಭಾರತ 2021ರಲ್ಲಿ 2.7 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಜಿಡಿಪಿ ಹೊಂದಿದೆ. 2030ರ ವೇಳೆಗೆ ಅದರ ಮೌಲ್ಯ 8.4 ಶತಕೋಟಿ ಅಮೆರಿಕನ್ ಡಾಲರ್‌ಗೆ ಏರಿಕೆಯಾಗಲಿದೆ’ ಎಂದು ವರದಿಯಲ್ಲಿ ಪ್ರಸ್ತಾವಿಸಲಾಗಿದೆ.
ಭಾರತದ ಜಿಡಿಪಿ ಅಭಿವೃದ್ಧಿ ಹಿನ್ನೆಲೆಯಲ್ಲಿ 2030ರ ವೇಳೆ ಏಷ್ಯಾ ಫೆಸಿಫಿಕ್ ವಲಯದಲ್ಲಿ ಜಪಾನ್ ಅನ್ನು ಮೀರಿಸಿದ ಅರ್ಥ ವ್ಯವಸ್ಥೆಯನ್ನು ಭಾರತ ಹೊಂದಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.