ನವದೆಹಲಿ :ಕೇಂದ್ರ ಸರ್ಕಾರ ಮಾರುಕಟ್ಟೆಗೆ ಹೆಚ್ಚುವರಿಯಾಗಿ 20 ಲಕ್ಷ ಟನ್ ಗೋಧಿ ಬಿಡುಗಡೆ ಮಾಡಲು ಮುಂದಾಗಿದೆ.
Advertisement
ಈ ಮೂಲಕ ಮಾರುಕಟ್ಟೆಯಲ್ಲಿ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆ ನಿಯಂತ್ರಣಕ್ಕೆ ಮುಂದಾಗಿದೆ. ಜತೆಗೆ ಗಿರಣಿಗಳಿಗೆ ದರ ತಗ್ಗಿಸಲೂ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಭಾರತದ ಆಹಾರ ನಿಗಮದ ಮೂಲಕ ಅದನ್ನು ಬಿಡುಗಡೆ ಮಾಡಲಾಗುತ್ತದೆ. ಈ ಬಗ್ಗೆ ಸಚಿವರ ಸಮಿತಿ ಸಭೆ ಸೇರಿ ನಿರ್ಧಾರ ಕೈಗೊಂಡಿದೆ.
ಜ.25ರಂದು ಕೇಂದ್ರ ಸರ್ಕಾರ 30 ಲಕ್ಷ ಗೋಧಿ ಬಿಡುಗಡೆ ಮಾಡಿತ್ತು. ಅದಕ್ಕೆ ಪೂರಕವಾಗಿ ಕೇಂದ್ರ ಆಹಾರ ಕಾರ್ಯದರ್ಶಿ ಸಜೀವ್ ಛೋಪ್ರಾ ಭಾರತ ಆಹಾರ ನಿಗಮ, ಗಿರಣಿ ಮಾಲೀಕರ ಜತೆಗೆ ಸಭೆ ನಡೆಸಿದ್ದಾರೆ.