Advertisement

2025ರ ಅಂತ್ಯದ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಅಮಿತ್ ಶಾ

06:44 PM Dec 09, 2023 | Team Udayavani |

ಡೆಹ್ರಾಡೂನ್: 2025 ರ ಅಂತ್ಯದ ವೇಳೆಗೆ ಭಾರತವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

Advertisement

ಉತ್ತರಾಖಂಡ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಿಂದಾಗಿ ಕಳೆದ ಒಂದು ದಶಕದಲ್ಲಿ ಭಾರತವು ಪ್ರತಿಯೊಂದು ರಂಗದಲ್ಲೂ ಗಣನೀಯವಾಗಿ ಬೆಳೆದಿದೆ ಎಂದರು.

“ಜಗತ್ತು ಇಂದು ಭಾರತದತ್ತ ಭರವಸೆಯಿಂದ ನೋಡುತ್ತಿದೆ. 2014 ರಿಂದ 2023 ರ ನಡುವೆ ಭಾರತವು 11 ನೇ ಸ್ಥಾನದಿಂದ ವಿಶ್ವದ ಐದನೇ ದೊಡ್ಡ ಆರ್ಥಿಕತೆಗೆ ಏರಿದೆ. ಸ್ವಾತಂತ್ರ್ಯದ 75 ವರ್ಷಗಳ ಅವಧಿಯಲ್ಲಿ ದೇಶವು ಹಿಂದೆಂದೂ ಇಷ್ಟು ದೊಡ್ಡ ಪ್ರಗತಿಯನ್ನು, ಏರಿಕೆಯನ್ನು ಸಾಧಿಸಿಲ್ಲ” ಎಂದರು.

”ಹವಾಮಾನ ಬದಲಾವಣೆಯ ವಿರುದ್ಧದ ಆಂದೋಲನವನ್ನು ಮೋದಿ ಮುನ್ನಡೆಸುತ್ತಿದ್ದಾರೆ, ಅವರು ತಮ್ಮ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಮೂಲಕ ವಿಶ್ವದ ನಿಧಾನಗತಿಯ ಜಿಡಿಪಿಗೆ ವೇಗವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಭಯೋತ್ಪಾದನೆ ಮುಕ್ತ ಜಗತ್ತಿಗೆ ಅಂತಾರಾಷ್ಟ್ರೀಯ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ ಎಂದರು.

ಜಿ-20 ದೆಹಲಿ ಘೋಷಣೆಯು ರಾಜತಾಂತ್ರಿಕ ರಂಗದಲ್ಲಿ ಭಾರತದ ದೊಡ್ಡ ಸಾಧನೆಯಾಗಿದೆ, ಇದನ್ನು ಮುಂದಿನ ದಶಕಗಳವರೆಗೆ ಜಗತ್ತು ನೆನಪಿಸಿಕೊಳ್ಳುತ್ತದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next