Advertisement

ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಆಲಂಕರಿಸಿದ ಭಾರತ

09:00 PM Dec 01, 2022 | Team Udayavani |

ನವದೆಹಲಿ: ಡಿ.1ರಿಂದ ಜಿ20 ರಾಷ್ಟ್ರಗಳ ಅಧ್ಯಕ್ಷ ಸ್ಥಾನವನ್ನು ಭಾರತ ಆಲಂಕರಿಸಿದೆ. ಇದರ ಅಂಗವಾಗಿ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಶೃಂಗಸಭೆಗಳು ಜರುಗಲಿವೆ.

Advertisement

ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಥೀಮ್‌ನಡಿ ಈ ವರ್ಷದ ಶೃಂಗ ನಡೆಯಲಿದೆ. ಇದೇ ವೇಳೆ ಜಿ20 ರಾಷ್ಟ್ರಗಳ ಬಗ್ಗೆ ಅರಿವು ಮೂಡಿಸಲು ಯುಜಿಸಿ ವತಿಯಿಂದ “ಯುನಿವರ್ಸಿಟಿ ಕನೆಕ್ಟ್’ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

“ಜಿ20 ರಾಷ್ಟ್ರಗಳ ಭಾರತದ ಅಧ್ಯಕ್ಷತೆ ಅವಧಿಯಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು “ಯುನಿವರ್ಸಿಟಿ ಕನೆಕ್ಟ್’ ಯೋಜನೆಯ ಮೂಲಕ ಜಿ20 ಅಧ್ಯಕ್ಷತೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಿದ್ದಾರೆ. ಅಲ್ಲದೇ ವಿಶ್ವದಲ್ಲಿ ಸಾಮರಸ್ಯ, ಭರವಸೆ ಹೆಚ್ಚಿಸಲು ಜಿ20 ಅಧ್ಯಕ್ಷತೆಯ ಮೂಲಕ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಭಾರತ ಹೇಗೆ ಮಾದರಿಯಾಗಿ ನಿಲ್ಲಬಹುದಾಗಿದೆ ಎಂಬುದರ ಬಗ್ಗೆ ಅರಿವು ಮೂಡಿಸಲಿದ್ದಾರೆ,’ ಎಂದು ಯುಜಿಸಿ ಅಧ್ಯಕ್ಷ ಎಂ.ಜಗದೀಶ್‌ ತಿಳಿಸಿದ್ದಾರೆ.

ಭಾರತಕ್ಕೆ ಅಮೆರಿಕ ಬೆಂಬಲ:

“ಜಿ20 ಅಧ್ಯಕ್ಷತೆ ವಹಿಸಿರುವ ಭಾರತಕ್ಕೆ ಬೆಂಬಲ ನೀಡಲು ನಾವು ಕಾತುರದಿಂದ ಎದುರು ನೋಡುತ್ತಿದ್ದೇವೆ. ಈ ಅವಧಿಯಲ್ಲಿ ಜಗತ್ತು ಪ್ರಸ್ತುತ ಎದುರಿಸುತ್ತಿರುವ ಆಹಾರ, ಇಂಧನ ಕೊರತೆ ಸಮಸ್ಯೆ, ಭದ್ರತಾ ಸವಾಲುಗಳು ಸೇರಿದಂತೆ ಅನೇಕ ವಿಷಯಗಳ ಬಗೆಗಿನ ಚರ್ಚೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಬಲಿಷ್ಠ ವಿಶ್ವ ಆರ್ಥಿಕತೆ ರೂಪುಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿಯಲಿದೆ,’ ಎಂದು ಅಮೆರಿಕದ ವೈಟ್‌ಹೌಸ್‌ನ ಪ್ರಕಟಣೆ ತಿಳಿಸಿದೆ.

Advertisement

ಜತೆಯಾಗಿ ಕೆಲಸ ಮಾಡಲು ಸಿದ್ಧ:

“ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿರುವುದು ಮಹತ್ವಪೂರ್ಣವಾಗಿದೆ. ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಥೀಮ್‌ ಅಡಿ ಪರಸ್ಪರ ಉದ್ದೇಶಗಳ ಪ್ರಗತಿ ನಿಟ್ಟಿನಲ್ಲಿ ಭಾರತದೊಂದಿಗೆ ನಿಕಟವಾಗಿ ಕೆಲಸ ಮಾಡಲು ಆಸ್ಟ್ರೇಲಿಯಾ ಸಿದ್ಧವಾಗಿದೆ,’ ಎಂದು ಭಾರತಕ್ಕೆ ಆಸ್ಟ್ರೇಲಿಯಾ ರಾಯಭಾರಿ ಬ್ಯಾರಿ ಓ ಫಾರೆಲ್‌ ಹೇಳಿದ್ದಾರೆ.

ವಸುಧೈವ ಕುಟುಂಬಕಂ ಥೀಮ್‌ ಅಡಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗ ಯಶಸ್ವಿಯಾಗಿ ಪೂರ್ಣಗೊಳ್ಳಲಿ ಎಂದು ಟೀಮ್‌ ಇಂಡಿಯಾಗೆ ಹಾರೈಸುತ್ತೇನೆ. ಅತಿಥಿ ದೇವೋ ಭವ ಸಂಸ್ಕೃತಿ ಪಾಲಿಸುತ್ತಿರುವ ಭಾರತಕ್ಕೆ ಎಲ್ಲಾ ಜಿ20 ರಾಷ್ಟ್ರಗಳ ಪ್ರತಿನಿಧಿಗಳಿಗೆ ಸ್ವಾಗತ.– ದ್ರೌಪದಿ ಮುರ್ಮು, ರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next