Advertisement

Chandrayaan-3: ಲ್ಯಾಂಡರ್‌ನಿಂದ ಹೊರಬಂದು ಚಂದ್ರನ ಮೇಲೆ ಕಾರ್ಯ ಆರಂಭಿಸಿದ ರೋವರ್‌

09:58 AM Aug 24, 2023 | Team Udayavani |

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರಗ್ಯಾನ್ ರೋವರ್ ಅನ್ನು ಚಂದ್ರಯಾನ-3 ಮಿಷನ್‌ನ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಬಳಿಕ ಗುರುವಾರ ಚಂದ್ರನ ಮೇಲ್ಮೈ ನಲ್ಲಿ ಇಳಿದಿರುವ ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಹೊರಬಂದಿದ್ದು ತನ್ನ ಅನ್ವೇಷಣೆಯನ್ನು ಪ್ರಾರಂಭಿಸಿದೆ.

Advertisement

ವಿಕ್ರಮ್‌ ಲ್ಯಾಂಡರ್‌ನಿಂದ ಹೊರಬಂದ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲ್ಮೈ ಮೇಲೆ ಚಲನೆ ಆರಂಭಿಸಿರುವುದಾಗಿ ಇಸ್ರೊ ಟ್ವೀಟ್‌ ಮಾಡಿದೆ. ಚಂದಿರನ ಮೇಲೆ 14 ದಿನಗಳ ಕಾಲ ರೋವರ್​ ಮಿಷನ್‌ ಕೈಗೊಳ್ಳಲಿದ್ದು, ಸಂಶೋಧನೆ ನಡೆಸಲಿದೆ ಎನ್ನಲಾಗಿದೆ.

ಐತಿಹಾಸಿಕ ಚಂದ್ರಯಾನ-3ನ ಯಶಸ್ವಿ ಲ್ಯಾಂಡಿಂಗ್ ಆದ ಬಳಿಕ ಇಸ್ರೋ ಮೊದಲ ಚಿತ್ರ ಬಿಡುಗಡೆ ಮಾಡಿದೆ. ಲ್ಯಾಂಡಿಂಗ್ ನಂತರ ಲ್ಯಾಂಡಿಂಗ್ ಇಮೇಜರ್ ಕೆಮರಾದಲ್ಲಿ ಚಿತ್ರ ಸೆರೆಹಿಡಿಯಲಾಗಿದ್ದು, ಇಸ್ರೋ ಬಿಡುಗಡೆ ಮಾಡಿದೆ.

 

Advertisement

ಇದನ್ನೂ ಓದಿ: Gas Leakage: ಕೆಮಿಕಲ್ ಫ್ಯಾಕ್ಟರಿಯಲ್ಲಿ ಗ್ಯಾಸ್ ಸೋರಿಕೆ… 28 ಮಂದಿ ಆಸ್ಪತ್ರೆಗೆ ದಾಖಲು

Advertisement

Udayavani is now on Telegram. Click here to join our channel and stay updated with the latest news.

Next