Advertisement

ಭಾರತಕ್ಕೆ ಡಬಲ್‌ ಧಮಾಕ: ಪುರುಷರ ಟೇಬಲ್‌ ಟೆನಿಸ್‌ ತಂಡಕ್ಕೆ ಬಂಗಾರ

08:55 PM Aug 02, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಿಂಗಾಪುರ ವಿರುದ್ದ ಭಾರತೀಯ ಪುರುಷರ ಟೇಬಲ್ ಟೆನಿಸ್ ತಂಡವು ಫೈನಲ್‌ನಲ್ಲಿ3-1 ಅಂತರದಿಂದ ಚಿನ್ನ ಗೆದ್ದಿದೆ.

Advertisement

ಇಂದು ನಡೆದ ಪುರುಷರ ಟೀಮ್ ಟೇಬಲ್ ಟೆನಿಸ್ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತವು, ಸಿಂಗಾಪುರವನ್ನು 3-1 ಅಂತರದಿಂದ ಸೋಲಿಸಿ ಮತ್ತೊಮ್ಮೆ ಚಿನ್ನವನ್ನು ಗೆದ್ದುಕೊಂಡಿತು. ಸದ್ಯ ಭಾರತದ ಪದಕಗಳ ಸಂಖ್ಯೆ11 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಐದು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳು ಸೇರಿದೆ. ಸಿಂಗಾಪುರ ಬೆಳ್ಳಿ ಗೆದ್ದರೆ, ಇಂಗ್ಲೆಂಡ್ ಪುರುಷರ ತಂಡ ನೈಜೀರಿಯಾವನ್ನು 3-0 ಅಂತರದಿಂದ ಸೋಲಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು.

ಇದನ್ನೂ ಓದಿ:ಲಾನ್‌ ಬೌಲ್ಸ್‌: ದ. ಆಫ್ರಿಕಾ ವಿರುದ್ಧ ಭಾರತ ವನಿತಾ ತಂಡದ ಚಿನ್ನದ ಬೇಟೆ

ಜಿ ಸತ್ಯನ್ ಮತ್ತು ಹರ್ಮೀತ್ ದೇಸಾಯಿ ಜೋಡಿಯು ಸಿಂಗಾಪುರ ವಿರುದ್ಧದ ಆರಂಭಿಕ ಪಂದ್ಯವನ್ನು ಗೆದ್ದುಕೊಂಡಿತು. ಸಿಂಗಾಪುರದ ಯೋಂಗ್ ಇಜಾಕ್ ಕ್ವೆಕ್ ಮತ್ತು ಯೂ ಎನ್ ಕೊಯೆನ್ ಪಾಂಗ್ ವಿರುದ್ಧ 13-11, 11-7 ಮತ್ತು 11-5 ರಿಂದ ಗೆಲುವು ಸಾಧಿಸಿದರು. ಈ ಮೂಲಕ 1-0 ಯಿಂದ ಆರಂಭಿಕ ಮುನ್ನಡೆ ಸಾಧಿಸಿದರು. ಆದರೆ, ಎರಡನೇ ಸುತ್ತಿನಲ್ಲಿ ಶರತ್ ಕಮಲ್ ಅವರ 3-1 ಅಂತರದ ಸೋಲು ಉಭಯ ದೇಶಗಳ ಅಂಕವನ್ನು ಸಮಬಲಗೊಳಿಸಿತು. 3-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತೀಯ ಪುರುಷರ ಟೇಬಲ್ ಟೆನಿಸ್ ತಂಡವು ತನ್ನ ಕಿರೀಟವನ್ನು ಉಳಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next