ಬಾಲಾಸೊರ್ (ಒಡಿಶಾ): ವಾಯು ಮಾರ್ಗದ ಮೂಲಕ ಬರುವ ದಾಳಿಕೋರರನ್ನು ಹೊಡೆದುರುಳಿಸಬಲ್ಲ ಅಭ್ಯಾಸ್ ಅಸ್ತ್ರವನ್ನು ಒಡಿಶಾ ಕರಾವಳಿಯ ಚಾಂದೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ನಲ್ಲಿ (ಐಟಿಆರ್) ಯಶಸ್ವಿಯಾಗಿ ಪ್ರಯೋಗಿಸಲಾಯಿತು.
ಅಭ್ಯಾಸ್ ಅಸ್ತ್ರವನ್ನು ಹೊತ್ತೂಯ್ದ ವಾಯುಪಡೆಯ ಯುದ್ಧ ವಿಮಾನ ಭೂಮಿಯಿಂದ ಆಗಸದಲ್ಲಿ ನಿಗದಿತ ಹಂತದವರೆಗೆ ಸಾಗಿ, ಪೂರ್ವ ನಿಗದಿತ ತಾಂತ್ರಿಕ ಅನುಸಂಧಾನದಡಿ ಯಶಸ್ವಿಯಾಗಿ ಪ್ರಯೋಗವಾಗಿದ್ದಲ್ಲದೆ, ನಿರೀಕ್ಷಿತ ಫಲಿತಾಂಶವನ್ನು ನೀಡಿದೆ ಎಂದು ಕೇಂದ್ರದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಅಭ್ಯಾಸ್ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಡಿಆರ್ಡಿಒ ಅಂಗಸಂಸ್ಥೆ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ವಿನ್ಯಾಸಗೊಳಿಸಿ ಅಭಿವೃದ್ಧಿಗೊಳಿಸಿದೆ.