Advertisement
ಡರ್ಬಾನ್ ಮತ್ತು ಸೆಂಚುರಿಯನ್‌ನಲ್ಲಿ ನಡೆದ ಮೊದಲೆರಡು ಪಂದ್ಯಗಳಲ್ಲಿ ಪ್ರವಾಸಿ ತಂಡ ಅನುಕ್ರಮವಾಗಿ ಆರು ಮತ್ತು 9 ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ. ಉತ್ಕೃಷ್ಟ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಲು ಯಶಸ್ವಿಯಾಗಿದೆ. ಈ ಹಿಂದೆ ದ್ವಿಪಕ್ಷೀಯ ಸರಣಿ ವೇಳೆ (1992-93 ಮತ್ತು 2010-11ರಲ್ಲಿ) ಭಾರತ ಎರಡು ಪಂದ್ಯ ಗೆಲ್ಲಲು ಯಶಸ್ವಿಯಾಗಿದೆ. ಒಮ್ಮೆ 2-1 ಮುನ್ನಡೆ ಸಾಧಿಸಲು ಯಶಸ್ವಿಯಾಗಿದ್ದ ಪ್ರವಾಸಿ ತಂಡ ಆಬಳಿಕ ಐದು ಪಂದ್ಯಗಳ ಸರಣಿ ಯನ್ನು 3-2ರಿಂದಲೂ ಮತ್ತು 7 ಪಂದ್ಯಗಳ ಸರಣಿಯನ್ನು 5-2 ಅಂತರದಿಂದ ಸೋತಿತ್ತು. ಆದರೆ ಸದ್ಯದ ಭಾರತದ ಸಾಮರ್ಥ್ಯವನ್ನು ಗಮನಿಸಿದಾಗ ಪ್ರವಾಸಿ ತಂಡ ಇತಿಹಾಸ ನಿರ್ಮಿಸುವ ಸಾಧ್ಯತೆ ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾದ ಆಟಗಾರರು ಗಾಯದ ಸಮಸ್ಯೆ ಯಿಂದ ಬಳಲುತ್ತಿರುವುದು ಭಾರತಕ್ಕೆ ಲಾಭ ವಾಗಿದೆ. ಬೆರಳ ಗಾಯಕ್ಕೆ ಒಳಗಾದ ಎಬಿ ಡಿ’ವಿಲಿಯರ್ ಮತ್ತು ಫಾ ಡು ಪ್ಲೆಸಿಸ್ ಈ ಕೂಟದಿಂದ ಹೊರಬಿದ್ದಿದ್ದಾರೆ. ಮೂರನೇ ಪಂದ್ಯದ ಮೊದಲು ಕ್ವಿಂಟನ್ ಡಿ ಕಾಕ್ ಮಣಿಗಂಟಿನ ಗಾಯದಿಂದ ಹೊರಬಿದ್ದಿದ್ದಾರೆ. ಕಾಕ್ ಅವರ ಜಾಗಕ್ಕೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ಬದಲಿ ಆಟಗಾರನ ಹೆಸರನ್ನು ಸೂಚಿಸಿಲ್ಲ. ಆದರೆ ದೇಶೀಯ ಏಕದಿನ ಕೂಟದಲ್ಲಿ ಗರಿಷ್ಠ ರನ್ ಗಳಿಸಿರುವ ಹೆನ್ರಿಚ್ ಕ್ಲಾಸೆನ್ ಏಕದಿನ ಕ್ರಿಕೆಟಿಗೆ ಪಾದಾರ್ಪಣೆಗೈಯುವ ಸಾಧ್ಯತೆಯಿದೆ.
2-0 ಮುನ್ನಡೆ ಸಾಧಿಸಿರುವ ಭಾರತ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಆಟಗಾರರು ಹೊಂದಾಣಿಕೆಯಿಂದ ಆಡಿ ಗೆಲುವಿಗೆ ಪ್ರಯ ತ್ನಿಸುವಾಗ ಅವರ ಗಮನ ತಪ್ಪಿಸುವ ಯತ್ನಕ್ಕೆ ಕೈಹಾಕುವುದಿಲ್ಲ. ತಂಡ ಗೆಲುವು ಸಾಧಿಸುತ್ತಿದೆ. ಹಾಗಾಗಿ ಬದಲಾವಣೆ ಮಾಡುವ ಅಗತ್ಯವಿಲ್ಲ. ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮೂರು ಪಂದ್ಯಗಳನ್ನಾಡಿದ್ದು ಎರಡರಲ್ಲಿ ಸೋತಿದ್ದರೆ ಒಂದರಲ್ಲಿ ಗೆದ್ದಿದೆ. 2010-11ರ ಸರಣಿಯಲ್ಲಿ ಭಾರತ 2 ವಿಕೆಟ್‌ಗಳ ಜಯ ಸಾಧಿಸಿತ್ತು. 1992ರ ಬಳಿಕ ಭಾರತ ಇಲ್ಲಿ ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದು ಎರಡರಲ್ಲಿ ಗೆಲುವು ಮತ್ತು ಎರಡರಲ್ಲಿ ಸೋಲನ್ನು ಕಂಡಿದೆ.
Related Articles
ಕೇಪ್‌ಟೌನ್: ಸತತ ಎರಡು ಏಕದಿನ ಪಂದ್ಯಗಳಲ್ಲಿ ಸೋತಿರುವ ದಕ್ಷಿಣ ಆಫ್ರಿಕಾ ಇದೀಗ ಭಾರತೀಯ ಸ್ಪಿನ್ ದಾಳಿಯನ್ನು ಎದುರಿಸಲು ಬಹಳಷ್ಟು ತಂತ್ರಗಳನ್ನು ರೂಪಿಸುತ್ತಿದೆ. ಈ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ಆಟಗಾರರು ಮಂಗಳವಾರ ಐವರು ಸ್ಪಿನ್ನರ್‌ಗಳನ್ನು ನೆಟ್‌ಗೆ ಕರೆಯಿಸಿ ಅಭ್ಯಾಸ ಮಾಡಿದರು.
Advertisement
ಭಾರತದ ಚಾಹಲ್ ಮತ್ತು ಕುಲದೀಪ್ ಯಾದವ್ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ದಕ್ಷಿಣ ಆಫ್ರಿಕಾದ ಆಟಗಾರರು ನೆಟ್‌ನಲ್ಲಿ ಸ್ಪಿನ್ ದಾಳಿಗೆ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಚಾಹಲ್ ಮತ್ತು ಕುಲದೀಪ್ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಒಟ್ಟಾರೆ 13 ವಿಕೆಟ್ ಉರುಳಿಸಿದ್ದರು.
ಪಿಚ್ ಹೀಗಿದೆಟೆಸ್ಟ್ ಸರಣಿಗೆ ಸೂಕ್ತವಾದ ನ್ಯೂಲ್ಯಾಂಡ್ಸ್ ಪಿಚ್ ದಕ್ಷಿಣ ಆಫ್ರಿಕಾ ಪಾಲಿಗೆ ಶುಭದಾಯಕ ಎನಿಸಿಕೊಂಡಿದೆ. ಸೀಮ್ ಬೌಲರ್‌ಗಳಿಗೆ ಸ್ವಲ್ಪಮಟ್ಟಿಗೆ ನೆರವಾಗುವ ಸಾಧ್ಯತೆಯಿದ್ದರೂ ಈ ಪಿಚ್ ಬ್ಯಾಟ್ಸ್ ಮನ್‌ಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತಿದೆ. ಕಳೆದ ಆರು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಸರಾಸರಿಯಾಗಿ 300 ಪ್ಲಸ್ ರನ್ ಗಳಿ ಸಿದೆ. ದಿನವಿಡೀ ಬಿಸಿಲು ಇರಲಿದ್ದು ಮಧ್ಯಾಹ್ನ 30 ಡಿಗ್ರಿ ತಾಪಮಾನ ಇರಲಿದೆ. ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಎಂಎಸ್ ಧೋನಿ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್ ದಕ್ಷಿಣ ಆಫ್ರಿಕಾ: ಹಾಶಿಮ್ ಆಮ್ಲ, ಐಡೆನ್ ಮಾರ್ಕ್‌ರಾಮ್ (ನಾಯಕ), ಜೀನ್‌ಪಾಲ್ ಡ್ಯುಮಿನಿ, ಖಾಯ ಝೊಂಡೊ, ಡೇವಿಡ್ ಮಿಲ್ಲರ್, ಫರ್ಹಾನ್ ಬೆಹರ್ಡಿನ್, ಹೆನ್ರಿಚ್ ಕ್ಲಾಸೆನ್, ಕ್ರಿಸ್ ಮೊರಿಸ್, ಕಾಗಿಸೊ ರಬಾಡ, ಮಾರ್ನೆ ಮಾರ್ಕೆಲ್, ಇಮ್ರಾನ್ ತಾಹಿರ್ ಅಂಕಿ ಅಂಶ
ನ್ಯೂಲ್ಯಾಂಡ್ಸ್ ದಕ್ಷಿಣ ಆಫ್ರಿಕಾದ ನೆಚ್ಚಿನ ತಾಣ. ಇಲ್ಲಿ ಆಡಿದ 33 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ 28 ಪಂದ್ಯಗಳಲ್ಲಿ ಗೆದ್ದಿದೆ.
ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಭಾರತ ಈ ಹಿಂದೆ ದಕ್ಷಿಣ ಆಫ್ರಿಕಾವನ್ನು 2010ರ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಸೋಲಿಸಿತ್ತು.
ಸದ್ಯದ ದಕ್ಷಿಣ ಆಫ್ರಿಕಾ ತಂಡದಲ್ಲಿ ಡ್ಯುಮಿನಿ ಈ ಪಿಚ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಅವರು ಮೂರು ಅರ್ಧಶತಕ ಸಹಿತ 301 ರನ್ ಹೊಡೆದಿದ್ದಾರೆ. ಹಾಶಿಮ್ ಆಮ್ಲ ಆರು ಪಂದ್ಯಗಳನ್ನಾಡಿದ್ದು ಎರಡು ಅರ್ಧಶತಕ ಸಹಿತ 190 ರನ್ ಗಳಿಸಿದ್ದಾರೆ. ಪಂದ್ಯ ಆರಂಭ: ಸಂಜೆ 4.30
ಪ್ರಸಾರ: ಸೋನಿ ಟೆನ್ ನೆಟ್‌ವರ್ಕ್