Advertisement

India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

12:56 AM Nov 15, 2024 | Team Udayavani |

ಜೋಹಾನ್ಸ್‌ಬರ್ಗ್‌: ಸಂಜು ಸ್ಯಾಮ್ಸನ್‌ ಮತ್ತು ತಿಲಕ್‌ ವರ್ಮ ಅವರ ಬಲದಿಂದ ಮೊದಲ ಮತ್ತು ಮೂರನೇ ಟಿ20 ಪಂದ್ಯವನ್ನು ಗೆದ್ದು 2-1 ಮುನ್ನಡೆ ಸಾಧಿಸಿರುವ ಭಾರತೀಯ ತಂಡವು ಶುಕ್ರವಾರ ನಡೆಯವ ನಿರ್ಣಾಯಕ ನಾಲ್ಕನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

Advertisement

ಈ ಮೂಲಕ ಭಾರತ ಇನ್ನೊಂದು ದ್ವಿಪಕ್ಷೀಯ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.
ಸ್ಯಾಮ್ಸನ್‌ ಮತ್ತು ತಿಲಕ್‌ ಅವರನ್ನು ಹೊರತುಪಡಿಸಿದರೆ ತಂಡದ ಇತರ ಪ್ರಮುಖ ಆಟಗಾರರು ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಬೇಕಾದ ಅಗತ್ಯವಿದೆ. ನಾಯಕ ಸೂರ್ಯಕುಮಾರ್‌ ಯಾದವ್‌ ಸಹಿತ ಸ್ಫೋಟಕ ಖ್ಯಾತಿಯ ರಿಂಕು ಸಿಂಗ್‌, ಅಭಿಷೇಕ್‌ ಶರ್ಮ, ಜಿತೇಶ್‌ ಶರ್ಮ, ಹಾರ್ದಿಕ್‌ ಪಾಂಡ್ಯ ಮತ್ತು ರಮಣದೀಪ್‌ ಸಿಂಗ್‌ ಬ್ಯಾಟಿಂಗ್‌ನಲ್ಲಿ ಗಮನಾರ್ಹ ನಿರ್ವಹಣೆ ನೀಡಬೇಕಾದ ಅಗತ್ಯವಿದೆ.

ತಂಡದ ಬೌಲಿಂಗ್‌ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ. ಮೂರನೇ ಪಂದ್ಯದಲ್ಲಿ ಗೆಲ್ಲಲು ದೊಡ್ಡ ಗುರಿ ಇದ್ದರೂ ಕ್ಲಾಸೆನ್‌ ಮತ್ತು ಜಾನ್ಸೆನ್‌ ಅವರ ಆಟವನ್ನು ಗಮನಿಸಿದಾಗ ದಕ್ಷಿಣ ಆಫ್ರಿಕಾ ಗೆಲ್ಲುವ ಅವಕಾಶ ಹೆಚ್ಚಿತ್ತು. ಆದರೆ ಅವರಿಬ್ಬರು ಒತ್ತಡಕ್ಕೆ ಸಿಲುಕಿ ಔಟಾದ ಕಾರಣ ಭಾರತ ಗೆಲುವು ಕಾಣುವಂತಾಗಿತ್ತು. ಹೀಗಾಗಿ ಆತಿಥೇಯರ ಬ್ಯಾಟಿಂಗ್‌ಗೆ ಕಡಿವಾಣ ಹಾಕಲು ಭಾರತೀಯ ಬೌಲರ್‌ಗಳು ಪ್ರಯತ್ನಿಸಬೇಕಾದ ಅಗತ್ಯವಿದೆ.

ಇಲ್ಲಿನ ವಾಂಡರರ್ನ ಪಿಚ್‌ ಭಾರತದ ನೆಚ್ಚಿನ ಪಿಚ್‌ ಆಗಿದೆ. ಇದೇ ಮೈದಾನದಲ್ಲಿ ಭಾರತ ಪಾಕಿಸ್ಥಾನವನ್ನು ಸೋಲಿಸಿ 2007ರ ಟಿ20 ವಿಶ್ವಕಪ್‌ ಪ್ರಶಸ್ತಿ ಜಯಿಸಿತ್ತು. ಇದೇ ಮೈದಾನದಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌ ಶತಕವೊಂದನ್ನು ಬಾರಿಸಿದ್ದರು. ಹೀಗಾಗಿ ಸೂರ್ಯಕುಮಾರ್‌ ಇಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸುವ ಸಾಧ್ಯತೆಯಿದೆ. ರಿಂಕು ಸಿಂಗ್‌ ಅವರಿಂದ ಸ್ಫೋಟಕ ಬ್ಯಾಟಿಂಗ್‌ ನಿರೀಕ್ಷೆ ಮಾಡಲಾಗಿದೆ. ಮೊದಲ ಮೂರು ಪಂದ್ಯಗಳಲ್ಲಿ ರಿಂಕ… ಕೇವಲ 28 ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು.

ಸಂಭಾವ್ಯ ಭಾರತ ತಂಡ
ಸೂರ್ಯಕುಮಾರ್‌ ಯಾದವ್‌ (ನಾಯಕ), ಅಭಿಷೇಕ್‌ ಶರ್ಮ, ಸಂಜು ಸ್ಯಾಮ್ಸನ್‌, ರಿಂಕು ಸಿಂಗ್‌, ತಿಲಕ್‌ ವರ್ಮ, ಜಿತೇಶ್‌ ಶರ್ಮ, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ರಮಣದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯಿ, ಅರ್ಷದೀಪ್‌ ಸಿಂಗ್‌, ವಿಜಯಕುಮಾರ್‌ ವೈಶಾಖ್‌, ಆವೇಶ್‌ ಖಾನ್‌, ಯಶ್‌ ದಯಾಳ್‌.

Advertisement

ದಕ್ಷಿಣ ಆಫ್ರಿಕಾ
ಐಡೆನ್‌ ಮಾರ್ಕ್‌ರಮ್‌ (ನಾಯಕ), ಒಟ್‌ನೆçಲ್‌ ಬಾರ್ಟ್‌ಮನ್‌, ಗೆರಾಲ್ಡ್‌ ಕೋಟಿj, ಡೊನೊವಾನ್‌ ಫೆರೇರ, ರೀಜಾ ಹೆಂಡ್ರಿಕ್ಸ್‌, ಮಾರ್ಕೊ ಜಾನ್ಸೆನ್‌, ಹೆನ್ರಿಚ್‌ ಕ್ಲಾಸೆನ್‌, ಪ್ಯಾಟ್ರಿಕ್‌ ಕ್ರುಗರ್‌, ಕೇಶವ ಮಹಾರಾಜ್‌, ಡೇವಿಡ್‌ ಮಿಲ್ಲರ್‌, ಮಿಹÉಲಿ ಎಂಪಾಂಗ್ವಾನ, ಎನ್‌ಕಬ ಪೀಟರ್‌, ರಿಯಾನ್‌ ರಿಕೆಲ್ಟನ್‌, ಆ್ಯಂಡಿಲೆ ಸಿಮೆಲೇನ್‌, ಲುತೊ ಸಿಪಾಮ್ಲ, ಟ್ರಿಸ್ಟನ್‌ ಸ್ಟಬ್ಸ್

16ರಲ್ಲಿ 13 ಗೆಲುವು
ಭಾರತ ಟಿ20 ತಂಡದ ನಾಯಕರಾಗಿ ಸೂರ್ಯ ಕುಮಾರ್‌ ಯಾದವ್‌ ಅವರದ್ದು ಅಮೋಘ ಸಾಧನೆಯಾ ಗಿದೆ. ಇದುವರೆಗೆ 16 ಪಂದ್ಯಗಳಿಗೆ ನಾಯಕರಾಗಿರುವ ಅವರು ಕೇವಲ 3ರಲ್ಲಿ ಸೋತಿದ್ದಾರೆ. ಒಟ್ಟು 13 ಜಯದ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next